ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

KSRTC: ಬೆಂಗಳೂರಿನಿಂದ ಹೊರಡುವ ಕಡೆಯ ಬಸ್ ಗಳ ಸಮಯ ಮತ್ತು ವಿವರ

|
Google Oneindia Kannada News

ಬೆಂಗಳೂರು, ಮೇ 19: ಅಂತೂ 55 ದಿನಗಳ ಬಳಿಕ ಕೆ.ಎಸ್.ಆರ್.ಟಿ.ಸಿ ಬಸ್ ಗಳು ರಸ್ತೆಗಿಳಿದಿವೆ. ಇಂದಿನಿಂದ ಕೆ.ಎಸ್.ಆರ್.ಟಿ.ಸಿ ಸಾರಿಗೆ ಸೇವೆ ಆರಂಭಗೊಂಡಿದ್ದು, ಜಿಲ್ಲೆಯಿಂದ ಜಿಲ್ಲೆಗೆ ಜನರು ಪ್ರಯಾಣಿಸಬಹುದಾಗಿದೆ.

ಒಂದು ಬಸ್ ನಲ್ಲಿ ಗರಿಷ್ಠ 30 ಮಂದಿಗೆ ಮಾತ್ರ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಸಂಜೆ 7 ರಿಂದ ಬೆಳಗ್ಗೆ 7 ರವರೆಗೆ ಸಾರಿಗೆ ಸೇವೆ ಲಭ್ಯವಿರುವುದಿಲ್ಲ.

KSRTC ಸಂಚಾರ: 'ಈ' ಸ್ಥಳಗಳಿಗೆ ಪ್ರಯಾಣ ಮಾಡಲು ಟಿಕೆಟ್ ಬುಕ್ಕಿಂಗ್ ಪ್ರಾರಂಭKSRTC ಸಂಚಾರ: 'ಈ' ಸ್ಥಳಗಳಿಗೆ ಪ್ರಯಾಣ ಮಾಡಲು ಟಿಕೆಟ್ ಬುಕ್ಕಿಂಗ್ ಪ್ರಾರಂಭ

ಹೀಗಾಗಿ, ಸಂಜೆ 7 ಗಂಟೆಯೊಳಗೆ ಬಸ್ ಗಳು ಡೆಸ್ಟಿನೇಷನ್ ತಲುಪಬೇಕಿದ್ದು, ಪ್ರತಿದಿನ ಬೆಂಗಳೂರಿನಿಂದ ಕರ್ನಾಟಕ ರಾಜ್ಯದ ವಿವಿಧ ಜಿಲ್ಲಾ ಸ್ಥಳಗಳಿಗೆ ಕೆ.ಎಸ್.ಆರ್.ಟಿ.ಸಿ ಸಾರಿಗೆಯ ಕಡೆಯ ವಾಹನ ನಿರ್ಗಮನ ಸಮಯದ ವಿವರ ಇಲ್ಲಿದೆ:

ಮಂಡ್ಯ, ತುಮಕೂರಿಗೆ ಲಾಸ್ಟ್ ಬಸ್ ಎಷ್ಟೊತ್ತಿಗೆ.?

ಮಂಡ್ಯ, ತುಮಕೂರಿಗೆ ಲಾಸ್ಟ್ ಬಸ್ ಎಷ್ಟೊತ್ತಿಗೆ.?

* ಬೆಂಗಳೂರು - ಚಿಕ್ಕಬಳ್ಳಾಪುರ

* ಬೆಂಗಳೂರು - ಕೋಲಾರ

* ಬೆಂಗಳೂರು - ತುಮಕೂರು

* ಬೆಂಗಳೂರು - ಮಂಡ್ಯ

- ಈ ಮಾರ್ಗಗಳ ಪ್ರಯಾಣ ಅವಧಿ 2 ಗಂಟೆ.

- ಈ ಮಾರ್ಗಗಳ ಕಡೆಯ ಬಸ್ ಬೆಂಗಳೂರಿನಿಂದ ಹೊರಡುವ ಸಮಯ ಸಂಜೆ 5 ಗಂಟೆ.

ಬಸ್ ಸಮಯದ ವಿವರ

ಬಸ್ ಸಮಯದ ವಿವರ

* ಬೆಂಗಳೂರು-ಮೈಸೂರು ಮಾರ್ಗದ ಪ್ರಯಾಣ ಅವಧಿ - 3 ಗಂಟೆ. ಹೀಗಾಗಿ ಸಂಜೆ 4 ಗಂಟೆಗೆ ಬೆಂಗಳೂರಿನಿಂದ ಕಡೆಯ ಬಸ್ ಮೈಸೂರಿಗೆ ಹೊರಡುತ್ತದೆ.

* ಬೆಂಗಳೂರು-ಹಾಸನ ಮಾರ್ಗದ ಪ್ರಯಾಣ ಅವಧಿ - 3 1/2 ಗಂಟೆ. ಹೀಗಾಗಿ ಮಧ್ಯಾಹ್ನ 3.3೦ ಕ್ಕೆ ಬೆಂಗಳೂರಿನಿಂದ ಕಡೆಯ ಬಸ್ ಹಾಸನಕ್ಕೆ ಹೊರಡುತ್ತದೆ.

* ಬೆಂಗಳೂರು-ಚಾಮರಾಜನಗರ ಮಾರ್ಗದ ಪ್ರಯಾಣ ಅವಧಿ - 4 ಗಂಟೆ. ಹೀಗಾಗಿ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ಕಡೆಯ ಬಸ್ ಚಾಮರಾಜನಗರಕ್ಕೆ ಹೊರಡುತ್ತದೆ.

* ಬೆಂಗಳೂರು-ಚಿತ್ರದುರ್ಗ ಮಾರ್ಗದ ಪ್ರಯಾಣ ಅವಧಿ - 4 1/2 ಗಂಟೆ. ಹೀಗಾಗಿ ಮಧ್ಯಾಹ್ನ 2.3೦ ಕ್ಕೆ ಬೆಂಗಳೂರಿನಿಂದ ಕಡೆಯ ಬಸ್ ಚಿತ್ರದುರ್ಗಕ್ಕೆ ಹೊರಡುತ್ತದೆ.

* ಬೆಂಗಳೂರು-ಚಿಕ್ಕಮಗಳೂರು ಮಾರ್ಗದ ಪ್ರಯಾಣ ಅವಧಿ - 4 1/2 ಗಂಟೆ. ಹೀಗಾಗಿ ಮಧ್ಯಾಹ್ನ 2.3೦ ಕ್ಕೆ ಬೆಂಗಳೂರಿನಿಂದ ಕಡೆಯ ಬಸ್ ಚಿಕ್ಕಮಗಳೂರಿಗೆ ಹೊರಡುತ್ತದೆ.

* ಬೆಂಗಳೂರು-ಮಡಿಕೇರಿ ಮಾರ್ಗದ ಪ್ರಯಾಣ ಅವಧಿ - 5 1/2 ಗಂಟೆ. ಹೀಗಾಗಿ ಮಧ್ಯಾಹ್ನ 1.30 ಕ್ಕೆ ಬೆಂಗಳೂರಿನಿಂದ ಕಡೆಯ ಬಸ್ ಮಡಿಕೇರಿಗೆ ಹೊರಡುತ್ತದೆ.

KSRTC ಸೇವೆ: ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ 'ಈ' ನಿಯಮಗಳ ಪಾಲನೆ ಕಡ್ಡಾಯKSRTC ಸೇವೆ: ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ 'ಈ' ನಿಯಮಗಳ ಪಾಲನೆ ಕಡ್ಡಾಯ

ಮಧ್ಯಾಹ್ನ 1 ಗಂಟೆಗೆ ಲಾಸ್ಟ್

ಮಧ್ಯಾಹ್ನ 1 ಗಂಟೆಗೆ ಲಾಸ್ಟ್

* ಬೆಂಗಳೂರು-ದಾವಣಗೆರೆ

* ಬೆಂಗಳೂರು-ಬಳ್ಳಾರಿ

- ಈ ಮಾರ್ಗಗಳ ಪ್ರಯಾಣ ಅವಧಿ 6 ಗಂಟೆ.

- ಈ ಮಾರ್ಗಗಳ ಕಡೆಯ ಬಸ್ ಬೆಂಗಳೂರಿನಿಂದ ಹೊರಡುವ ಸಮಯ ಮಧ್ಯಾಹ್ನ 1 ಗಂಟೆ.

ಶಿವಮೊಗ್ಗಗೆ ಹೋಗಬೇಕಿದ್ದರೆ..

ಶಿವಮೊಗ್ಗಗೆ ಹೋಗಬೇಕಿದ್ದರೆ..

* ಬೆಂಗಳೂರು-ಶಿವಮೊಗ್ಗ

* ಬೆಂಗಳೂರು-ಹಾವೇರಿ

- ಈ ಮಾರ್ಗಗಳ ಪ್ರಯಾಣ ಅವಧಿ 7 ಗಂಟೆ.

- ಈ ಮಾರ್ಗಗಳ ಕಡೆಯ ಬಸ್ ಬೆಂಗಳೂರಿನಿಂದ ಹೊರಡುವ ಸಮಯ ಮಧ್ಯಾಹ್ನ 12 ಗಂಟೆ.

ಉಡುಪಿಗೆ ಹೋಗಬೇಕಿದ್ದರೆ..

ಉಡುಪಿಗೆ ಹೋಗಬೇಕಿದ್ದರೆ..

* ಬೆಂಗಳೂರು-ಕೊಪ್ಪಳ

* ಬೆಂಗಳೂರು-ಹುಬ್ಬಳ್ಳಿ

* ಬೆಂಗಳೂರು-ಗದಗ

* ಬೆಂಗಳೂರು-ಉಡುಪಿ

* ಬೆಂಗಳೂರು-ರಾಯಚೂರು

- ಈ ಮಾರ್ಗಗಳ ಪ್ರಯಾಣ ಅವಧಿ 8 ಗಂಟೆ.

- ಈ ಮಾರ್ಗಗಳ ಕಡೆಯ ಬಸ್ ಬೆಂಗಳೂರಿನಿಂದ ಹೊರಡುವ ಸಮಯ ಬೆಳಗ್ಗೆ 11 ಗಂಟೆ.

ಬೆಳಗ್ಗೆ 10 ಗಂಟೆಗೆ ಲಾಸ್ಟ್ ಬಸ್

ಬೆಳಗ್ಗೆ 10 ಗಂಟೆಗೆ ಲಾಸ್ಟ್ ಬಸ್

* ಬೆಂಗಳೂರು-ಬಾಗಲಕೋಟೆ

* ಬೆಂಗಳೂರು-ಕಾರವಾರ

- ಈ ಮಾರ್ಗಗಳ ಪ್ರಯಾಣ ಅವಧಿ 9 ಗಂಟೆ.

- ಈ ಮಾರ್ಗಗಳ ಕಡೆಯ ಬಸ್ ಬೆಂಗಳೂರಿನಿಂದ ಹೊರಡುವ ಸಮಯ ಬೆಳಗ್ಗೆ 10 ಗಂಟೆ.

ಪ್ರಯಾಣಿಕರ ಗಮನಕ್ಕೆ

ಪ್ರಯಾಣಿಕರ ಗಮನಕ್ಕೆ

* ಬೆಂಗಳೂರು-ರಾಮನಗರ ಮಾರ್ಗದ ಪ್ರಯಾಣ ಅವಧಿ - 1 1/2 ಗಂಟೆ. ಹೀಗಾಗಿ ಸಂಜೆ 5.30 ಕ್ಕೆ ಬೆಂಗಳೂರಿನಿಂದ ಕಡೆಯ ಬಸ್ ರಾಮನಗರಕ್ಕೆ ಹೊರಡುತ್ತದೆ.

* ಬೆಂಗಳೂರು-ಮಂಗಳೂರು ಮಾರ್ಗದ ಪ್ರಯಾಣ ಅವಧಿ - 7 1/2 ಗಂಟೆ. ಹೀಗಾಗಿ ಬೆಳಗ್ಗೆ 11.30 ಕ್ಕೆ ಬೆಂಗಳೂರಿನಿಂದ ಕಡೆಯ ಬಸ್ ಮಂಗಳೂರಿಗೆ ಹೊರಡುತ್ತದೆ.

* ಬೆಂಗಳೂರು-ಧಾರವಾಡ ಮಾರ್ಗದ ಪ್ರಯಾಣ ಅವಧಿ - 8 1/2 ಗಂಟೆ. ಹೀಗಾಗಿ ಬೆಳಗ್ಗೆ 10.30 ಕ್ಕೆ ಬೆಂಗಳೂರಿನಿಂದ ಕಡೆಯ ಬಸ್ ಧಾರವಾಡಕ್ಕೆ ಹೊರಡುತ್ತದೆ.

* ಬೆಂಗಳೂರು-ಯಾದಗಿರಿ ಮಾರ್ಗದ ಪ್ರಯಾಣ ಅವಧಿ - 9 1/2 ಗಂಟೆ. ಹೀಗಾಗಿ ಬೆಳಗ್ಗೆ 9.30 ಕ್ಕೆ ಬೆಂಗಳೂರಿನಿಂದ ಕಡೆಯ ಬಸ್ ಯಾದಗಿರಿಗೆ ಹೊರಡುತ್ತದೆ.

* ಬೆಂಗಳೂರು-ವಿಜಯಪುರ ಮಾರ್ಗದ ಪ್ರಯಾಣ ಅವಧಿ - 10 ಗಂಟೆ. ಹೀಗಾಗಿ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ಕಡೆಯ ಬಸ್ ವಿಜಯಪುರಕ್ಕೆ ಹೊರಡುತ್ತದೆ.

* ಬೆಂಗಳೂರು-ಕಲಬುರ್ಗಿ ಮಾರ್ಗದ ಪ್ರಯಾಣ ಅವಧಿ - 11 ಗಂಟೆ. ಹೀಗಾಗಿ ಬೆಳಗ್ಗೆ 9.30 ಕ್ಕೆ ಬೆಂಗಳೂರಿನಿಂದ ಕಡೆಯ ಬಸ್ ಕಲಬುರ್ಗಿಗೆ ಹೊರಡುತ್ತದೆ.

English summary
Coronavirus Lockdown 4: Here is the List of KSRTC last buses timings and destination details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X