ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಷತ್ತಿಗೆ ವಿ.ಸೋಮಣ್ಣ ಮರು ಆಯ್ಕೆ ಇಲ್ಲ?

|
Google Oneindia Kannada News

ಬೆಂಗಳೂರು, ಮೇ 18 : ಕರ್ನಾಟಕ ಬಿಜೆಪಿಯಲ್ಲಿ ವಿಧಾನಪರಿಷತ್ ಸ್ಥಾನಕ್ಕಾಗಿ ಲಾಬಿ ಆರಂಭವಾಗಿದೆ. ಪರಿಷತ್ ಸದಸ್ಯರಾಗಿರುವ ವಿ.ಸೋಮಣ್ಣ ಅವರ ಅವಧಿ ಜೂನ್ 14ಕ್ಕೆ ಅಂತ್ಯಗೊಳ್ಳಲಿದ್ದು, ಸೋಮಣ್ಣ ಅವರು ಪುನರಾಯ್ಕೆ ಆಗುವ ಸಾಧ್ಯತೆ ಕಡಿಮೆ ಎಂಬ ಸುದ್ದಿ ಹಬ್ಬಿದೆ.

ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ವಿ.ಸೋಮಣ್ಣ ಅವರನ್ನು ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆರಿಸಿ ಕಳಿಸಲಾಗಿತ್ತು. ಈ ಬಾರಿ ಅವರನ್ನು ಪುನರಾಯ್ಕೆ ಮಾಡದೆ ಬೆಂಗಳೂರು ಬಿಜೆಪಿ ಘಟಕದ ಅಧ್ಯಕ್ಷ ಸುಬ್ಬನರಸಿಂಹ ಅವರಿಗೆ ಅವಕಾಶ ನೀಡಲಾಗುತ್ತದೆ ಎಂಬುದು ಸದ್ಯದ ಸುದ್ದಿ. [4 ಕ್ಷೇತ್ರಗಳ ವಿಧಾನಪರಿಷತ್ ಚುನಾವಣೆ ಘೋಷಣೆ]

v somanna

ಮಂಗಳವಾರ ಬೆಳಗಾವಿ ಜಿಲ್ಲಾ ಬಿಜೆಪಿ ಮುಖಂಡರ ನಿಯೋಗ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಬೆಂಗಳೂರಿಗೆ ಆಗಮಿಸಿತ್ತು. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಿಯೋಗ ವಿ.ಸೋಮಣ್ಣ ಬದಲಿಗೆ ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಈರಣ್ಣ ಕಡಾಡಿ ಅವರಿಗೆ ಅವಕಾಶ ನೀಡುವಂತೆ ಮನವಿ ಮಾಡಿದೆ. [ಪರಿಷತ್ ಚುನಾವಣೆ : ಏಳನೇ ಬಾರಿ ಅಖಾಡಕ್ಕಿಳಿದ ಹೊರಟ್ಟಿ]

ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಲು 29 ಮತಗಳ ಅಗತ್ಯವಿದೆ. ಕರ್ನಾಟಕ ವಿಧಾನಸಭೆಯಲ್ಲಿ 44 ಶಾಸಕರ ಬಲ ಹೊಂದಿರುವ ಬಿಜೆಪಿ ಒಬ್ಬರು ಸದಸ್ಯರನ್ನು ಆಯ್ಕೆ ಮಾಡಬಹುದು. ಈ ಒಂದು ಸ್ಥಾನಕ್ಕಾಗಿ ಪೈಪೋಟಿ ಆರಂಭವಾಗಿದೆ. [ಪರಿಷತ್ ನಾಮ ನಿರ್ದೇಶನ, ಸಿದ್ದರಾಮಯ್ಯಗೆ ಹೊಸ ಸವಾಲು]

ಜೂನ್ 9ರಂದು ಮತದಾನ : ಅಂದಹಾಗೆ ದಕ್ಷಿಣ ಪದವೀಧರ, ಪಶ್ಚಿಮ ಶಿಕ್ಷಕ, ವಾಯುವ್ಯ ಪದವೀಧರ, ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ನಾಲ್ವರು ವಿಧಾನಪರಿಷತ್ ಸದಸ್ಯರ ಅವಧಿ ಜುಲೈ 4ಕ್ಕೆ ಅಂತ್ಯಗೊಳ್ಳಲಿದೆ, ಅವರಿಂದ ತೆರವಾಗುವ ಸ್ಥಾನಗಳಿಗೆ ಜೂನ್ 9ರಂದು ಚುನಾವಣೆ ನಡೆಯಲಿದೆ.

English summary
Leaders of Karnataka BJP have started lobbying for the Legislative Council ticket. Legislative Council member V.Somanna term will come to end on June 14, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X