ರಾಜ್ಯದ ಹಾಲೀ ಶಾಸಕರಲ್ಲಿ LLB ಓದಿದ ಜನಪ್ರತಿನಿಧಿಗಳು ಇವರೇ!
ಬೆಂಗಳೂರು, ಮಾರ್ಚ್ 30: ಹದಿನಾರನೇ ಕರ್ನಾಟಕ ವಿಧಾನಸಭೆಗೆ ಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಮೇ ಹತ್ತರಂದು (ಬುಧವಾರ) ಚುನಾವಣೆ ಮತ್ತು ಮೇ ಹದಿಮೂರರಂದು (ಶನಿವಾರ) ಫಲಿತಾಂಶ ಹೊರಬೀಳಲಿದೆ. ಚುನಾವಣೆ ಎದುರಿಸಲು ಪ್ರಮುಖ ಪಕ್ಷಗಳ ಕಸರತ್ತು ಜೋರಾಗಿಯೇ ನಡೆಯುತ್ತಿದೆ.
ರಾಜ್ಯದ ಹಾಲೀ 223 (ಗುಬ್ಬಿ ಶ್ರೀನಿವಾಸ್ ರಾಜೀನಾಮೆ ನೀಡಿದ್ದಾರೆ) ಶಾಸಕರು ಕಳೆದ ಅಂದರೆ 2018ರ ಚುನಾವಣೆಯಲ್ಲಿ ಸಲ್ಲಿಸಿದ ಅಫಿಡವಿಟ್ ಪ್ರಕಾರ ಬಹಳಷ್ಟು ಜನಪ್ರತಿನಿಧಿಗಳು ಕ್ರಿಮಿನಲ್ ಕೇಸನ್ನು ಹೊಂದಿದ್ದಾರೆ. ಮತ್ತಷ್ಟು ಜನ ಸಾಲವನ್ನೇ ಹೊಂದಿಲ್ಲ. ಹಾಲೀ ಶಾಸಕರ ಪೈಕಿ ಪದವೀಧರರು, ಪಿಯುಸಿ, ಎಸ್ಎಸ್ಎಲ್ಸಿ ಓದಿದವರ ಪಟ್ಟಿ ದೊಡ್ಡದಿದೆ.

ಅದರಲ್ಲಿ LLB ಓದಿದವರ ಶಾಸಕರೂ ಇದ್ದಾರೆ. ಅದರಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಕೂಡಾ ಇದ್ದಾರೆ. ಹಾಲೀ ಶಾಸಕರ ಪೈಕಿ ಕಾನೂನು ಪದವೀಧರರು ಯಾರು, ಅವರ ಪ್ರತಿನಿಧಿಸುವ ಕ್ಷೇತ್ರದ ಟೇಬಲ್ ಈ ಕೆಳಗಿನಂತಿದೆ:
| ಪ್ರತಿನಿಧಿಸುವ ಕ್ಷೇತ್ರ | ಜಿಲ್ಲೆ | ಶಾಸಕರ ಹೆಸರು | ಪಕ್ಷ |
| ಬೈಲಹೊಂಗಲ | ಬೆಳಗಾವಿ | ಶಿವಾನಂದ ಎಂ ಕೌಜಲಗಿ | ಕಾಂಗ್ರೆಸ್ |
| ಗದಗ | ಗದಗ | ಎಚ್.ಕೆ.ಪಾಟೀಲ್ | ಕಾಂಗ್ರೆಸ್ |
| ಹಳಿಯಾಳ | ಉತ್ತರ ಕನ್ನಡ | ಆರ್.ವಿ.ದೇಶಪಾಂಡೆ | ಕಾಂಗ್ರೆಸ್ |
| ರಾಜಾಜಿನಗರ | ಬೆಂಗಳೂರು ನಗರ | ಎಸ್.ಸುರೇಶ್ ಕುಮಾರ್ | ಬಿಜೆಪಿ |
| ಮಂಡ್ಯ | ಮಂಡ್ಯ | ಎಂ.ಶ್ರೀನಿವಾಸ್ | ಜೆಡಿಎಸ್ |
| ಬೆಳ್ತಂಗಡಿ | ದಕ್ಷಿಣ ಕನ್ನಡ | ಹರೀಶ್ ಪೂಂಜಾ | ಬಿಜೆಪಿ |
| ವಿರಾಜಪೇಟೆ | ಕೊಡಗು | ಕೆ.ಜಿ.ಬೋಪಯ್ಯ | ಬಿಜೆಪಿ |
| ಹನೂರು | ಚಾಮರಾಜನಗರ | ಆರ್. ನಾಗೇಂದ್ರ | ಕಾಂಗ್ರೆಸ್ |
| ಬೆಳಗಾವಿ ಉತ್ತರ | ಬೆಳಗಾವಿ | ಅನಿಲ್.ಎಸ್.ಬೆನಕೆ | ಬಿಜೆಪಿ |
| ಬಾದಾಮಿ | ಬಾಗಲಕೋಟೆ | ಸಿದ್ದರಾಮಯ್ಯ | ಕಾಂಗ್ರೆಸ್ |
| ಚಿಕ್ಕನಾಯಕನಹಳ್ಳಿ | ತುಮಕೂರು | ಜೆ.ಸಿ.ಮಾಧುಸ್ವಾಮಿ | ಬಿಜೆಪಿ |
| ಕಡೂರು | ಚಿಕ್ಕಮಗಳೂರು | ಕೆ.ಎಸ್.ಪ್ರಕಾಶ್ | ಬಿಜೆಪಿ |
| ಕಲಘಟಕಿ | ಧಾರವಾಡ | ಸಿ.ಎಂ.ನಿಂಬಣ್ಣನವರ್ | ಬಿಜೆಪಿ |
| ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ | ಧಾರವಾಡ | ಜಗದೀಶ್ ಶೆಟ್ಟರ್ | ಬಿಜೆಪಿ |
| ಕಿತ್ತೂರು | ಬೆಳಗಾವಿ | ಡಿ.ಎಂ.ಬಸವಂತರೆ | ಬಿಜೆಪಿ |












Click it and Unblock the Notifications