ಲೋಕಸಭಾ ಚುನಾವಣೆ: ರಾಜ್ಯದ ಸಂಭಾವ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಗೆ ಎಂಟು ತಿಂಗಳ ಮುನ್ನ ಪೂರ್ವತಯಾರಿ ಆರಂಭಿಸಿದ್ದ ಬಿಜೆಪಿ, ಮುಂಬರುವ ಲೋಕಸಭಾ ಚುನಾವಣೆಗೆ ಈಗಲೇ ಸಿದ್ದತೆ ಆರಂಭಿಸಿಕೊಂಡಿದೆ.

ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕಳೆದ ಬಾರಿ ಹದಿನೇಳು ಸ್ಥಾನವನ್ನು ಗೆದ್ದಿತ್ತು. ಕಳೆದ ಬಾರಿಯ ಕೆಲವು ವಿಜೇತ ಅಭ್ಯರ್ಥಿಗಳನ್ನು ಬೇರೆ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷ ಸೂಚಿಸುವ ಸಾಧ್ಯತೆಯಿದೆ.

ದಿಢೀರ್ ಆಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿರುವ ಯಡಿಯೂರಪ್ಪ, ರಾಜ್ಯದ ಸಮ್ಮಿಶ್ರ ಸರಕಾರದ ಆಗುಹೋಗುಗಳು ಮತ್ತು ಲೋಕಸಭಾ ಚುನಾವಣೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನುವ ಮಾಹಿತಿಯಿದೆ.

ತೀವ್ರ ಪೈಪೋಟಿಯಿರುವ ಕ್ಷೇತ್ರಗಳಲ್ಲಿ ಇಬ್ಬರು ಅಥವಾ ಮೂವರ ಹೆಸರನ್ನು ಪರಿಗಣಿಸಿ, ನಂತರ ಜಾತಿ ಲೆಕ್ಕಾಚಾರ, ಕಾರ್ಯಕರ್ತರ ಮತ್ತು ಮುಖಂಡರ ಅಭಿಪ್ರಾಯದಂತೆ ಟಿಕೆಟ್ ಫೈನಲ್ ಮಾಡಲು ಅಮಿತ್ ಶಾ ನಿರ್ಧರಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಾಲೀ ಸಂಸದೆ ಶೋಭಾ ಕರಂದ್ಲಾಜೆಯವರನ್ನು ರಾಜ್ಯ ರಾಜಕಾರಣಕ್ಕೆ ಕಳುಹಿಸುವ ಮತ್ತು ಡಿ ವಿ ಸದಾನಂದ ಗೌಡ ಅವರ ಕ್ಷೇತ್ರ ಬದಲಾಯಿಸುವ ಬಗ್ಗೆ ಕೂಡಾ ಚಿಂತನೆ ನಡೆದಿದೆ ಎನ್ನುವ ಸುದ್ದಿಯಿದೆ. ಸಂಭಾವ್ಯ ಅಭ್ಯರ್ಥಿಗಳು ಪಟ್ಟಿ, ಮುಂದೆ ಓದಿ..

ಬೆಂಗಳೂರು ನಗರ, ಕರಾವಳಿ

ಬೆಂಗಳೂರು ನಗರ, ಕರಾವಳಿ

1. ಬೆಂಗಳೂರು ದಕ್ಷಿಣ - ಅನಂತ್ ಕುಮಾರ್
2. ಬೆಂಗಳೂರು ಉತ್ತರ - ಡಿ ವಿ ಸದಾನಂದ ಗೌಡ/ ಎಸ್ ಮುನಿರಾಜು
3. ಬೆಂಗಳೂರು ಕೇಂದ್ರ - ಪಿ ಸಿ ಮೋಹನ್
4. ಬೆಂಗಳೂರು ಗ್ರಾಮಾಂತರ - ತುಳಸಿ ಮುನಿರಾಜು / ಸಿ ಪಿ ಯೋಗೇಶ್ವರ್
5. ಉಡುಪಿ - ಚಿಕ್ಕಮಗಳೂರು - ಜಯಪ್ರಕಾಶ್ ಹೆಗಡೆ/ ಶೋಭಾ ಕರಂದ್ಲಾಜೆ/ಡಿ ವಿ ಸದಾನಂದ ಗೌಡ
6. ದಕ್ಷಿಣಕನ್ನಡ - ನಳಿನ್ ಕುಮಾರ್ ಕಟೀಲ್
(ಚಿತ್ರದಲ್ಲಿ ಅನಂತ್ ಕುಮಾರ್)

ಅನಂತ್ ಕುಮಾರ್ ಹೆಗಡೆಗೆ ಟಿಕೆಟ್

ಅನಂತ್ ಕುಮಾರ್ ಹೆಗಡೆಗೆ ಟಿಕೆಟ್

7. ಉತ್ತರ ಕನ್ನಡ - ಅನಂತ್ ಕುಮಾರ್ ಹೆಗಡೆ
8. ಬೀದರ್ - ಮಲ್ಲಿಕಾರ್ಜುನ ಖೂಬಾ
9. ಬಾಗಲಕೋಟೆ - ಪಿ ಸಿ ಗದ್ದಿಗೌಡರ್
10. ಕಲಬುರಗಿ - ಸುನಿಲ್ ವಲ್ಯಾಪುರೆ
11. ಶಿವಮೊಗ್ಗ - ಬಿ ವೈ ರಾಘವೇಂದ್ರ
12. ಧಾರವಾಡ - ಪ್ರಲ್ಹಾದ್ ಜೋಷಿ
(ಚಿತ್ರದಲ್ಲಿ ಅನಂತ್ ಕುಮಾರ್ ಹೆಗಡೆ)

ಚಿಕ್ಕಬಳ್ಳಾಪುರದಲ್ಲಿ ಇಬ್ಬರ ನಡುವೆ ಫೈಟ್

ಚಿಕ್ಕಬಳ್ಳಾಪುರದಲ್ಲಿ ಇಬ್ಬರ ನಡುವೆ ಫೈಟ್

13. ದಾವಣಗೆರೆ - ಜಿ ಎಂ ಸಿದ್ದೇಶ್ವರ
14. ಚಿತ್ರದುರ್ಗ - ಜನಾರ್ಧನಸ್ವಾಮಿ
15. ರಾಯಚೂರು -
16. ಚಿಕ್ಕಬಳ್ಳಾಪುರ - ಕಟ್ಟಾ ಸುಬ್ರಮಣ್ಯ ನಾಯ್ಡು/ ಬಿ ಎನ್ ಬಚ್ಚೇಗೌಡ
17. ಕೋಲಾರ - ಡಿ ಎಸ್ ವೀರಯ್ಯ
18. ಮೈಸೂರು - ಕೊಡಗು - ಪ್ರತಾಪ್ ಸಿಂಹ
(ಚಿತ್ರದಲ್ಲಿ ಪ್ರತಾಪ್ ಸಿಂಹ)

ಮಂಡ್ಯದಲ್ಲಿ ಬಿಜೆಪಿಗೆ ನೆಲೆಯಿಲ್ಲ

ಮಂಡ್ಯದಲ್ಲಿ ಬಿಜೆಪಿಗೆ ನೆಲೆಯಿಲ್ಲ

19. ಬೆಳಗಾವಿ - ಸುರೇಶ್ ಅಂಗಡಿ
20. ಬಳ್ಳಾರಿ - ಜೆ ಶಾಂತ / ಎನ್ ವೈ ಹನುಮಂತಪ್ಪ
21.ವಿಜಯಪುರ - ರಮೇಶ್ ಜಿಗಜಿಣಗಿ
22. ಹಾಸನ - ನವಿಲೆ ಪ್ರಕಾಶ್
23. ಮಂಡ್ಯ - ಶಿವಲಿಂಗಯ್ಯ
24. ಹಾವೇರಿ - ಶಿವಕುಮಾರ್ ಉದಾಸಿ
(ಚಿತ್ರದಲ್ಲಿ ಸುರೇಶ್ ಅಂಗಡಿ)

ತುಮಕೂರಿನಿಂದ ಬಸವರಾಜು

ತುಮಕೂರಿನಿಂದ ಬಸವರಾಜು

25. ತುಮಕೂರು - ಜಿ ಎಚ್ ಬಸವರಾಜು
26. ಚಾಮರಾಜನಗರ - ಎಂ ಶಿವಣ್ಣ
27. ಚಿಕ್ಕೋಡಿ - ರಮೇಶ್ ಕತ್ತಿ
28. ಕೊಪ್ಪಳ - ಕರಡಿ ಸಂಗಣ್ಣ
(ಚಿತ್ರದಲ್ಲಿ ಜಿ ಎಚ್ ಬಸವರಾಜು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+