ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಶೀಘ್ರವೇ ಬಿಡುಗಡೆ: ಪಟ್ಟಿ ಬಿಡುಗಡೆ ಬಗ್ಗೆ ಬಿ.ಕೆ.ಹರಿಪ್ರಸಾದ್ ಹೇಳಿದ್ದೇನು.?
ಉದ್ಯಮಿ ಆದಾನಿ ಆದಾಯ ಹೆಚ್ಚಳ ಕುರಿತು ಪಾರ್ಲಿಮೆಂಟ್ ಜಂಟಿ ಸಮಿತಿ ಅಥವಾ ಸುಪ್ರೀಂಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ಆಗಲಿ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು.
ಹುಬ್ಬಳ್ಳಿ,ಫ್ರೆಬವರಿ11: ವಿಧಾನ ಸಭಾ ಚುನಾವಣಾ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಿ ಪಟ್ಟಿ ತಯಾರು ಮಾಡಲಾಗುತ್ತಿದ್ದು, ಆದಷ್ಟು ಶೀಘ್ರದಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು,ಅಭ್ಯರ್ಥಿಗಳ ಪಟ್ಟಿಯನ್ನ ಈಗಾಗಲೇ ಕೆಪಿಸಿಸಿ ಪಟ್ಟಿ ರೆಡಿ ಮಾಡಿ ಸ್ಕ್ರೀನಿಂಗ್ ಕಮಿಟಿಗೆ ಕಳಿಸಿದೆ. ಸ್ಕ್ರೀನಿಂಗ್ ಕಮಿಟಿ ಛೇರ್ಮನ್ ಸಹ ಬೆಂಗಳೂರಿನಲ್ಲಿ ಇದ್ದಾರೆ ಆದಷ್ಟು ಬೇಗಾ ಎಲ್ಲರೂ ಒಂದು ತೀರ್ಮಾನಕ್ಕೆ ಬಂದು ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಪ್ರಲ್ಹಾದ್ ಜೋಶಿ ಸಿಎಂ ಆಗುತ್ತಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆಸಿದ ಅವರು, ಅವರು ಯಾವ ದೃಷ್ಟಿಯಿಂದ ಹೇಳಿದ್ದಾರೆ ಗೊತಿಲ್ಲ. ಆದರೆ, ನಾವು ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಂದಿರುವರು. ಪ್ರಜಾಪ್ರಭುತ್ವ ವ್ಯವಸ್ಥೆ ನಡೆಯುತ್ತಿರುವುದು ಸಂವಿಧಾನದ ಚೌಕಟ್ಟನಲ್ಲಿ ಆದ್ದರಿಂದ ಅಲ್ಲಿ ಯಾವುದೇ ಜಾತಿ ಧರ್ಮದ ವಿಷಯ ಬರಲ್ಲ ಸಂವಿಧಾನದ ವ್ಯವಸ್ಥೆ ಎಲ್ಲರಿಗೂ ಸಮನಾ ಅವಕಾಶ ಇದೆ ಎಂದ ಅವರು ಬ್ರಾಹ್ಮಣ, ಅಲ್ಪಸಂಖ್ಯಾತ, ದಲಿತ ಇರಬಹುದು ಯಾರೇ ಇರಬಹುದು ಪ್ರಜಾಪ್ರಭುತ್ವ ಸೌಂದರ್ಯ ಅದರ ತಿರುಳು ಯಾರಾದರೂ ಸಿಎಂ ಆಗಬಹುದು.

ಇನ್ನು ಪ್ರಜಾಪ್ರಭುತ್ವ ಇಲ್ಲ ಅಂದರೆ ನರೇಂದ್ರ ಮೋದಿ ಪಿಎಂ ದ್ರೌಪದಿ ಮುರ್ಮು ರಾಷ್ಟ್ರಪತಿಗಳಾಗುತ್ತಾ ಇದ್ದರಾ ಎಂದು ಮರು ಪ್ರಶ್ನೆ ಮಾಡಿದರು. ರಾಜಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಮಹಾರಾಣಿ ಹೊಟ್ಟೆಯಲ್ಲಿ ಹುಟ್ಟಿರುತ್ತಾರೆ ಅವರೇ ರಾಜಾನಾಗುತಿದ್ದರು ಯಾರು ಮತಪಟ್ಟಿಯಲ್ಲಿ ಬರುತ್ತಾರೆ ಅವರು ಸಿಎಂ ಆಗುತ್ತಾರೆ ಎಂದರು.
ಉದ್ಯಮಿ ಆದಾನಿ ಆದಾಯ ಹೆಚ್ಚಳ ಕುರಿತು ಪಾರ್ಲಿಮೆಂಟ್ ಜಂಟಿ ಸಮಿತಿ ಅಥವಾ ಸುಪ್ರೀಂಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ಆಗಲಿ. ಈ ಒಂದು ಆದಾನಿ ಆದಾಯ ಹೆಚ್ಚಳ ಕುರಿತು ಸಹ ಸಿಬಿಐ ತನಿಖೆ ಮಾಡುತ್ತೆ ಅಂತಾ ಹೇಳಿದ್ದಾರೆ ಎಂದ ಅವರು ರಾಹುಲ್ ಗಾಂಧಿ ಹೇಳತಾ ಇದ್ದಾರೆ, ಆರಂಭದಿಂದಲೂ ಜನಸಾಮಾನ್ಯರ ಗಮನಕ್ಕೆ ತರುತ್ತಾ ಇದ್ದಾರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಡವರ ಪರ ಕೆಲಸ ಮಾಡುತ್ತಾ ಇಲ್ಲ. ರಾಷ್ಟ್ರದ ಹಿತದಿಂದ ಕೆಲಸ ಮಾಡುತ್ತಾ ಇಲ್ಲ, ಕೇವಲ ಅವರ ಹಿಂಬಾಲಕರ ಅನುಕೂಲಕ್ಕೆ, ಅವರಿಗೆ ಅನುಕೂಲ ರೀತಿಯಲ್ಲಿ ಕಾನೂನು ತಿದ್ದುಪಡಿ ಮಾಡಲಾಗುತಿದ್ದು ಇದರಿಂದಾಗಿ ಸಾಕಷ್ಟು ದೇಶಕ್ಕೆ ನಷ್ಟ ಆಗುತ್ತಾಇದೆ ಎಂದು ಆರೋಪ ಮಾಡಿದರು.
2014 ರಲ್ಲಿ ಅದಾನಿ ಅವರ 8 ದಶಲಕ್ಷ ಕೋಟಿ ಲಕ್ಷ ಬಂಡವಾಳ ಇತ್ತು ಅದು 8 ವರ್ಷಗಳಲ್ಲಿ 140 ದಶಲಕ್ಷ ಕೋಟಿ ಹೇಗೆ ಮಾಡಿದರು ಅಂತಾ ಯಾರು ಹೇಳುತ್ತಾ ಇಲ್ಲ ಎಂದರು. ವಿಮಾನ ನಿಲ್ದಾಣಗಳನ್ನ ನಿರ್ವಹಣೆ ಮಾಡುವ ಅನುಭವ ಆದಾನಿಗೆ ಇಲ್ಲ ಆದರೂ ಕೂಡಾ ನಿಯಮಗಳಿಗೆ ತಿದ್ದುಪಡಿ ತಂದು ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡಿದ್ದಾರೆ.
ಕಾಂಗ್ರೆಸ್ ಗೆ ಅನೇಕ ನಾಯಕರು ಸೇರ್ಪಡೆ ಕುರಿತು ಮಾತನಾಡಿದ ಅವರು, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಹತ್ತಿರ ಯಾರು ಬರುತ್ತಾರೆ ಅಂತಾ ಲಿಸ್ಟ್ ಇದೆ ನೋಡೋಣ ಯಾರು ಬರುತ್ತಾರೆ ಅಂತಾ ಕಾಯ್ದ ನೋಡೋಣ ಎಂದರು.












Click it and Unblock the Notifications