ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಾದ್ಯಂತ ಮದ್ಯ ಮಾರಾಟ ಆರಂಭ: ಕುಡುಕರ ಸಂಭ್ರಮ

|
Google Oneindia Kannada News

ಬೆಂಗಳೂರು, ಮೇ 4: ಅಂತೂ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಸಿಕ್ಕಿರುವುದರಿಂದ ಎಣ್ಣೆ ಪ್ರಿಯರು ಸಖತ್ ಖುಷಿ ಆಗಿದ್ದಾರೆ. ಇಂದು ಬೆಳಿಗ್ಗೆಯಿಂದ ವೈನ್ ಸ್ಟೋರ್ ಗಳು, ಎಂಆರ್ ಪಿ ಮದ್ಯದಂಗಡಿಗಳು ಆರಂಭವಾಗಿವೆ.

ಕೋವಿಡ್ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಸರತಿ ಸಾಲಿನಲ್ಲಿ ನಿಂತು, ಸರಕಾರದ ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಕುಡುಕರಲ್ಲಿ ಒಂದು ರೀತಿಯ ಸಂಭ್ರಮದ ವಾತಾವರಣ ರಾಜ್ಯಾದ್ಯಂತ ಎಣ್ಣೆ ಅಂಗಡಿಗಳ ಮುಂದೆ ಕಂಡು ಬರುತ್ತಿದೆ.

ಮದ್ಯ ಮಾರಾಟಕ್ಕೆ ಅನುಮತಿ: ಒಬ್ಬರು ಎಷ್ಟು ತೆಗೆದುಕೊಳ್ಳಬಹುದು?ಮದ್ಯ ಮಾರಾಟಕ್ಕೆ ಅನುಮತಿ: ಒಬ್ಬರು ಎಷ್ಟು ತೆಗೆದುಕೊಳ್ಳಬಹುದು?

ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಮದ್ಯದಂಗಡಿಗಳು ತೆರದಿರಲಿವೆ. ಕೋವಿಡ್ ಲಾಕ್‌ಡೌನ್ ನಿಯಮಗಳನ್ನು ಮದ್ಯದಂಗಡಿಗಳು ಹಾಗೂ ಗ್ರಾಹಕರು ಉಲ್ಲಂಘನೆ ಮಾಡದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲು ಅಬಕಾರಿ ಹಾಗೂ ಪೊಲೀಸ್ ಸಿಬ್ಬಂದಿ ಹದ್ದಿನ ಕಣ್ಣೀಟ್ಟಿದ್ದಾರೆ.

ಜಿಲ್ಲಾಧಿಕಾರಿ ನೇರ ನಿಗಾ

ಜಿಲ್ಲಾಧಿಕಾರಿ ನೇರ ನಿಗಾ

ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಕೋವಿಡ್ ಲಾಕ್‌ಡೌನ್ ನಿಯಮಗಳನ್ನು ಪಾಲಿಸುವ ಬಗ್ಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳೇ ನೇರ ನಿಗಾ ವಹಿಸಲಿದ್ದಾರೆ. ಕ್ರಮ ಕೈಗೊಳ್ಳುವ ಅಧಿಕಾರವನ್ನು ಅವರಿಗೇ ನೀಡಲಾಗಿದೆ.

ಒಬ್ಬರಿಗೆ 2.3 ಲೀಟರ್ ಮಾತ್ರ ಮದ್ಯ

ಒಬ್ಬರಿಗೆ 2.3 ಲೀಟರ್ ಮಾತ್ರ ಮದ್ಯ

ಬೇಕಾಬಿಟ್ಟಿಯಾಗಿ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ. ಒಬ್ಬರಿಗೆ 2.3 ಲೀಟರ್ ಮಾತ್ರ ಮದ್ಯ ಮಾರಾಟ ಮಾಡಬಹುದು. ನಾಲ್ಕು ಬಿಯರ್ ಬಾಟಲ್, ಐದು ಟಿನ್ ಬಾಟಲ್ ಮಾತ್ರ ಮಾರಾಟ (ಒಬ್ಬ ವ್ಯಕ್ತಿಗೆ) ಅವಕಾಶ ಇದೆ. ಮದ್ಯ ಕೊಳ್ಳುವಾಗ 5 ಕ್ಕಿಂತ ಹೆಚ್ಚು ಜನ ಇರುವ ಹಾಗಿಲ್ಲ.

ಸಾಮಾಜಿಕ ಅಂತರ ಉಲ್ಲಂಘಿಸುವಂತಿಲ್ಲ

ಸಾಮಾಜಿಕ ಅಂತರ ಉಲ್ಲಂಘಿಸುವಂತಿಲ್ಲ

ಮದ್ಯ ಮಾರಾಟದಲ್ಲಿ ಕೋವಿಡ್ ಸಾಮಾಜಿಕ ಅಂತರ ಉಲ್ಲಂಘಿಸುವಂತಿಲ್ಲ. ಆರು ಅಡಿಗೆ ಒಬ್ಬರು ನಿಲ್ಲಬೇಕು. ಮದ್ಯ ಮಾರಾಟ ಮಾಡುವವರು ಸ್ಯಾನಿಟೈಸರ್, ಗ್ಲೌಸ್ ಬಳಸಬೇಕು, ತಪ್ಪಿದರೆ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಮದ್ಯ ಪಾರ್ಸಲ್ ಗೆ ಮಾತ್ರ ಅವಕಾಶ ಇರುತ್ತದೆ.

4700 ಮದ್ಯಮಾರಾಟ ಮಳಿಗೆಗಳಲ್ಲಿ ಮದ್ಯ ಮಾರಾಟ

4700 ಮದ್ಯಮಾರಾಟ ಮಳಿಗೆಗಳಲ್ಲಿ ಮದ್ಯ ಮಾರಾಟ

ರಾಜ್ಯದಲ್ಲಿ ಎಂಆರ್ ಪಿ ಹಾಗೂ ಎಂಎಸ್ ಐಎಲ್ ಮದ್ಯ ಮಾರಾಟ ಮಳಿಗೆಯನ್ನು ಮಾತ್ರ ತೆರೆಯಬಹುದಾಗಿದೆ. ಬಾರ್ ರೆಸ್ಟೋರೆಂಟ್ ನಲ್ಲಿ ಅವಕಾಶ ಇಲ್ಲ. ಕೊರೊನಾ ಕಂಟೈನ್ಮಂಟ್ ಪ್ರದೇಶ ಹೊರತುಪಡಿಸಿ ರಾಜ್ಯದ ಎಲ್ಲಡೆ ಮದ್ಯ ಮಾರಾಟಕ್ಕೆ ಅವಕಾಶ ಇದೆ ಸುಮಾರು 4700 ಮದ್ಯಮಾರಾಟ ಮಳಿಗೆಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ.

English summary
Liquor Supply Begins In Karnataka After 48 Days, Drinkers Celebration at Vine Store Across the Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X