ನೀತಿ ಸಂಹಿತೆ: ಮುಚ್ಚಿದ ಬಾರ್‌ಗಳು ಸದ್ದಿಲ್ಲದೆ ಓಪನ್

ಬೆಂಗಳೂರು, ಮೇ 08: ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಿವಿಧ ಆರೋಪಗಳಡಿಯಲ್ಲಿ ಟರಾಜ್ಯಾದ್ಯಂತ ಮುಚ್ಚಲಾಗಿದ್ದ ಮದ್ಯದಂಗಡಿಗಳನ್ನು ಮತ್ತೆ ತೆರಿಯಲಾಗುತ್ತಿದೆ.ಸಣ್ಣಪುಟ್ಟ ಆರೋಪದಡಿ ಮುಚ್ಚಿರುವ ಅಂಗಡಿಗಳನ್ನು ಕಾನೂನು ಪ್ರಕಾರ ಪುನರಾರಂಭಗೊಳಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಹೊಣೆಗಾರಿಕೆಯನ್ನು ಆಯಾ ಜಿಲ್ಲೆಗಳಿಗೆ ವಹಿಸಲಾಗಿದೆ.

ಅಬಕಾರಿ ನಿಯಮ ಮತ್ತು ಷರತ್ತು ಉಲ್ಲಂಘಿಸಿದ ಆರೋಪದಲ್ಲಿ 600ಕ್ಕೂ ಅಧಿಕ ಅಬಕಾರಿ ಪರವಾನಗಿಗಳನ್ನು ಅಮಾನತುಪಡಿಸಿಕೊಂಡಿರುವ ಆದೇಶದ ತೆರವಿಗೆ ಕ್ರಮ ಜರುಗಿಸುವಂತೆ ಹೈಕೋರ್ಟ್ ಸೂಚಿಸಿತ್ತು. ನಿಯಮ ಮತ್ತು ಷರತ್ತು ಉಲ್ಲಂಘಿಸಿದ ಮದ್ಯದ ಅಂಗಡಿಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಲು ಅಬಕಾರಿ ಡಿಸಿಗಳಿಗೆ ಸೂಚಿಸಲಾಗಿತ್ತು.

ಈ ಹಿಂದಿನ ಆಯುಕ್ತರು ಸ್ವಚ್ಛತೆ, ಲೆಕ್ಕಪತ್ರ ಸರಿಯಿಲ್ಲದಿರುವುದು, ಎಂಆರ್‌ಪಿ ಬೋರ್ಡ್ ಹಾಕದಿರುವುದು, ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಇಲ್ಲದಿರುವುದು, ನಿಗದಿತ ಸಮಯಕ್ಕೆ ಮುನ್ನವೇ ಅಂಗಡಿ ಬಾಗಲು ತೆರೆಯುವುದು, ಅನಧಿಕೃತ ಮಾರಾಟ ಹಾಗೂ ಕಲಬೆರಕೆ, ನಕಲಿ ಮದ್ಯ ಮಾರಾಟ, ಬಿಡಿ ಬಿಡಿಯಾಗಿ ಮದ್ಯ ಮಾರಾಟ ಈ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಆದೇಶ ನೀಡಿದ್ದರು.

Liquor shops owner finally get relief on closure order

ಹದ್ದಿನ ಕಣ್ಣಿಟ್ಟಿದ್ದ ಅಧಿಕಾರಿಗಳು ಕಾನೂನು ಉಲ್ಲಂಘಿಸಿದ ಶೇ.20ರಷ್ಟು ಅಂಗಡಿಗಳ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದರು. ಅಲ್ಲದೆ ಕೆಲ ಅಂಗಡಿಗಳನ್ನು ಮುಚ್ಚಲಾಗಿತ್ತು.

ಈ ಕ್ರಮದಿಂದ ಮದ್ಯದ ಅಂಗಡಿ ಮಾಲೀಕರು ಆತಂಕಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಅಬಕಾರಿ ಇಲಾಖೆಯ ನೂತನ ಆಯುಕ್ತ ಮೌನೀಶ್‌ ಮೌದ್ಗಿಲ್, ವಿವಿಧ ಅಧಿಕಾರಿಗಳು ಸಭೆ ನಡೆಸಿದ್ದರು. ಆಯಾ ಜಿಲ್ಲಾ ಜಿಲ್ಲಾಧಿಕಾರಿಗಳೇ ಈ ಮೊಕದ್ದಮೆಗಳನ್ನು ನೋಡಿಕೊಳ್ಳಬೇಕು ಎಂದು ಹೇಳಿರುವ ಹಿನ್ನೆಲೆಯಲ್ಲಿ ಮದ್ಯದಂಗಡಿಗಳು ಮತ್ತೆ ಆರಂಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+