ಮದ್ಯಪ್ರಿಯರಿಗೆ ಶಾಕ್; ಮೇ 29 ರಿಂದ ಮದ್ಯದಂಗಡಿ ಬಂದ್.. ಬಂದ್.. ಬಂದ್...
ಬೆಂಗಳೂರು, ಮೇ 24: ಮದ್ಯಪಾನ ಆರೋಗ್ಯ ಹಾನಿಕಾರ ಅಂದ್ರೂ ಮದ್ಯ ಕುಡಿಯುವರ ಸಂಖ್ಯೆ ಕಡಿಮೆಯಾಗಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎರಡು ವರ್ಷದ ಅವಧಿಯಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಬಾರಿ ಮದ್ಯ ಪ್ರಿಯರಿಗೆ ದರ ಏರಿಕೆ ಮಾಡಿ ಶಾಕ್ ನೀಡಿತ್ತು. ಇದೀಗ ಪಬ್, ಬಾರ್, ರೆಸ್ಟೋರೆಂಟ್ ಮಾಲೀಕರಿಗೂ ಲೈಸೆನ್ಸ್ ಶುಲ್ಕ ಬರೋಬ್ಬರಿ ಶೇ 100ರಷ್ಟು ಏರಿಕೆ ಮಾಡಿ ಬಿಗ್ ಶಾಕ್ ನೀಡಿದೆ. ಇದನ್ನು ಖಂಡಿಸಿ ಮದ್ಯ ಮಾರಾಟಗಾರರು ಅಂಗಡಿಗಳನ್ನು ಬಂದ್ ಮಾಡಲು ಚಿಂತನೆ ನಡೆಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದ್ದು, ಅಧಿಕಾರಕ್ಕೆ ಬಂದ ದಿನದಿಂದ ನಿರಂತರ ದರ ಏರಿಕೆ ಮಾಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಜನರು ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ದರ ಏರಿಕೆ ಹಾಗೂ ಪರವಾನಗಿ ದರ ಹೆಚ್ಚಳ ವಿರೋಧಿಸಿ ಮೇ 29 ರಿಂದ ಕರ್ನಾಟಕದಾದ್ಯಂತ ಮದ್ಯದಂಗಂಡಿ ಬಂದ್ ಮಾಡಲು ರಾಜ್ಯದ ಮದ್ಯ ಮಾರಾಟಗಾರರು ತೀರ್ಮಾನ ಮಾಡಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಬರೋಬ್ಬರಿ ಮೂರು ಬಾರಿ ಮದ್ಯದ ದರ ಏರಿಕೆ ಮಾಡಿದೆ.

ಇನ್ನೂ ರಾಜ್ಯ ಸರ್ಕಾರ ಮೂರು ಬಾರಿ ಮದ್ಯದ ಬೆಲೆ ಏರಿಕೆಯಿಂದಾಗಿ ಹಿಂದಿನ ರೀತಿಯಲ್ಲಿ ಮದ್ಯ ಮಾರಾಟ ಆಗುತ್ತಿಲ್ಲ. ಇದೇ ಸಂದರ್ಭದಲ್ಲಿ ಮದ್ಯ ಮಾರಾಟಗಾರರ ಲೈಸೆನ್ಸ್ ಶುಲ್ಕ ದುಪ್ಪಟ್ಟು ಏರಿಕೆ ಮಾಡಲಾಗಿದೆ. ಹೀಗಾಗಿ ಮದ್ಯ ಮಾರಾಟಗಾರರ ಸಂಘ ಸಭೆ ಕರೆದು ಸಮಾಲೋಚನೆ ನಡೆಸಿದೆ. ಮದ್ಯ ಮಾರಾಟಗಾರರು ಈ ತಿಂಗಳು 29 ರಿಂದ ಬಾರ್ ಆ್ಯಂಡ್ ರೆಸ್ಟೋರೆಂಟ್, ವೈನ್ ಸ್ಟೋರ್ ಬಂದ್ ಮಾಡಲು ತೀರ್ಮಾನ ಮಾಡಿದ್ದಾರೆ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘದ ಉಪಾಧ್ಯಕ್ಷ ಕರುಣಾಕರ್ ಹೆಗ್ಡೆ ತಿಳಿಸಿದ್ದಾರೆ.
ಲೈಸೆನ್ಸ್ ದರ ಎಷ್ಟಿದೆ?
ರಾಜ್ಯದ ಸರ್ಕಾರ ಮದ್ಯ ಬೆಲೆ ಏರಿಕೆ ಮಾತ್ರವಲ್ಲದೇ ಬಾರ್ ಆ್ಯಂಡ್ ರೆಸ್ಟೋರೆಂಟ್, ವೈನ್ ಸ್ಟೋರ್ ಲೈಸೆನ್ಸ್ ಶುಲ್ಕ ದುಪ್ಪಟ್ಟು ಮಾಡಿದ್ದು, CL9 ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಈ ಮೊದಲು ಲೈಸೆನ್ಸ್ ಶುಲ್ಕ 8,62,000 ರೂ. ಇತ್ತು. ಇದೀಗ ಅದನ್ನು 15,00,000 ರೂ.ಗೆ ಹೆಚ್ಚಿಸಲಾಗಿದೆ. ಸೆಸ್ 2,25,000 ರೂ. ಸೇರಿ ಒಟ್ಟು ಒಟ್ಟು 17,25,000 ರೂ. ಆಗಲಿದೆ. CL 6A ಸ್ಟಾರ್ ಹೋಟೆಲ್ ಲೈಸೆನ್ಸ್ ಶುಲ್ಕ 9,75,000 ರೂ. ಇದ್ದಿದ್ದು ಈಗ 20 ಲಕ್ಷ ರೂ. ಮಾಡಲಾಗಿದೆ. ಇದಕ್ಕೆ ಸೆಸ್ 3 ಲಕ್ಷ ರೂ. ಸೇರಿ ಒಟ್ಟು 23 ಲಕ್ಷ ರೂ. ಆಗಲಿದೆ. ಇನ್ನೂ CL 7 ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್ ಲೈಸೆನ್ಸ್ ಶುಲ್ಕ 9,75,000 ರೂ. ಇತ್ತು. ಇದೀಗ 17,00,000 ರೂ.ಗೆ ಏರಿಕೆಯಾಗಿದೆ.
ಇನ್ನೂ ಮೇ 26 ರಂದು ಮದ್ಯ ಮಾರಾಟಗಾರರ ಸಂಘದ ಜೊತೆಗೆ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ವೇಳೆ ಮದ್ಯ ಮಾರಾಟಗಾರರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ತಮ್ಮ ಬೇಡಿಕೆಗಳನ್ನು ತಿಳಿಸಲಿದ್ದಾರೆ. ಈ ವೇಳೆ ಬೇಡಿಕೆಗಳನ್ನ ಈಡೇರಿಸಲಿಲ್ಲ ಅಂದರೆ 29 ರಿಂದ ನಿರಂತರವಾಗಿ ಮದ್ಯದ ಅಂಗಡಿಗಳನ್ನು ಕ್ಲೋಸ್ ಮಾಡಲು ರಾಜ್ಯ ಮದ್ಯ ಮಾರಾಟಗಾರರು ತೀರ್ಮಾನ ಮಾಡಿದ್ದಾರೆ.












Click it and Unblock the Notifications