ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವರ್ಷಕ್ಕೆ ಕರ್ನಾಟಕದಲ್ಲಿ ಮದ್ಯ ಮಾರಾಟ ಇಳಿಕೆ: ಅಬಕಾರಿ ಇಲಾಖೆಗೆ ನಷ್ಟ

|
Google Oneindia Kannada News

ಬೆಂಗಳೂರು, ಜನವರಿ 01: ಕರ್ನಾಟಕ ರಾಜ್ಯ ಸರ್ಕಾರದ ಬೊಕ್ಕಸದ ಪ್ರಮುಖ ಆದಾಯಗಳಲ್ಲಿ ಒಂದಾದ ಮದ್ಯ ಮಾರಾಟದಲ್ಲಿ ಈ ವರ್ಷ ಆರಂಭದಲ್ಲೇ ಅಂದುಕೊಂಡಷ್ಟು ಗುರಿ ಮುಟ್ಟಿಲ್ಲ. ಕೊರೊನಾವೈರಸ್ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಹೊಸ ವರ್ಷದ ಆಚರಣೆ ಕಳೆಗುಂದಿದ್ದು, ಅಬಕಾರಿ ಇಲಾಖೆಗೆ ಶೇಕಡಾ 20ರಷ್ಟು ನಷ್ಟವಾಗಿದೆ.

ದೇಶದ ಅನೇಕ ರಾಜ್ಯಗಳಲ್ಲಿ ಕೋವಿಡ್-19 ಕಾರಣ ಹೊಸ ವರ್ಷದ ರಾತ್ರಿ ಕರ್ಫ್ಯೂ ವಿಧಿಸಲಾಗಿತ್ತು. ಕರ್ನಾಟಕ ಕೂಡ ಮಧ್ಯರಾತ್ರಿಯಿಂದ ಬೆಳಿಗ್ಗೆವರೆಗೆ ಕರ್ಫ್ಯೂ ಹೇರಿತ್ತು. ಜೊತೆಗೆ ರಾತ್ರಿ 11.30ಕ್ಕೆ ಮದ್ಯದಂಗಡಿ ಮುಚ್ಚಲಾಗಿತ್ತು. ಹೀಗಾಗಿ ಅಬಕಾರಿ ಇಲಾಖೆಗೆ ಹೊಸ ವರ್ಷದ ದಿನದಂದೇ ನಷ್ಟವಾಗಿದೆ.

ಕಳೆದ ವರ್ಷ ಡಿಸೆಂಬರ್ 31ರಂದು 300 ಕೋಟಿ ರೂಪಾಯಿ ಆದಾಯಗಳಿಸಿದ್ದ ಅಬಕಾರಿ ಇಲಾಖೆಯು, ಈ ವರ್ಷ ಅರ್ಧದಷ್ಟು ಅಂದರೆ 150 ಕೋಟಿ ರೂಪಾಯಿ ಮಾತ್ರ ಗಳಿಸಿದೆ. ನಿನ್ನೆ 1.7 ಲಕ್ಷ ಬಿಯರ್ ಮಾರಾಟವಾಗಿದ್ದರೆ, 2.23 ಲಕ್ಷ ಬಾಕ್ಸ್‌ ಐಎಂಎಫ್‌ಎಲ್‌ ಮಾರಾಟವಾಗಿದೆ.

Liquor Sales in Karnataka Dip on New Year Eve

ಇನ್ನು ಹೊಸ ವರ್ಷದ ಹಿಂದಿನ ದಿನ ಬುಧವಾರ (ಡಿ.30) ರಾಜ್ಯದಲ್ಲಿ ಕೇವಲ 50 ಕೋಟಿ ರೂಪಾಯಿ ಮದ್ಯ ಮಾತ್ರ ಮಾರಾಟವಾಗಿದೆ. ಪ್ರತಿ ವರ್ಷ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಮದ್ಯ ಮಾರಾಟವಾಗುತ್ತಿತ್ತು. ಆದರೆ ಈ ಬಾರಿ ಕರ್ಫ್ಯೂಯಿಂದಾಗಿ ಮದ್ಯ ಮಾರಾಟದಲ್ಲಿ ಇಳಿಕೆಯಾಗಿದೆ. ಜೊತೆಗೆ ಇದರಿಂದ ಅಬಕಾರಿ ಇಲಾಖೆಯ ಆದಾಯವು ತಗ್ಗಿದೆ.

English summary
Due to the curfew in Karnataka this time of year, liquor sales have fallen on New Year's Day and the state excise department has lost 20 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X