Alcohol Price: ಕಿಕ್‌ ದುಬಾರಿ: ಕರ್ನಾಟಕ ಸರ್ಕಾರಕ್ಕೆ ಶಾಕ್‌ ಕೊಟ್ಟ ಮದ್ಯ ಪ್ರಿಯರು!

Alcohol Price: ಕರ್ನಾಟಕ ಸರ್ಕಾರವು ನಿರಂತರವಾಗಿ ಒಂದಿಲ್ಲೊಂದು ವಸ್ತುಗಳ ಬೆಲೆ ಏರಿಕೆಯನ್ನು ಮಾಡಿದೆ. ಅದರಲ್ಲೂ ಬಿಯರ್‌ ಹಾಗೂ ವಿವಿಧ ಮದ್ಯಗಳ ಮೇಲೆ ಭರ್ಜರಿ ಶುಲ್ಕವನ್ನು ವಿಧಿಸಿದೆ. ಎಷ್ಟರ ಮಟ್ಟಿಗೆ ಎಂದರೆ ಕಳೆದ 18 ತಿಂಗಳ ಅವಧಿಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ಮದ್ಯದ ಮೇಲೆ ಮೂರು ಬಾರಿ ತೆರಿಗೆ ವಿಧಿಸುವ ಮೂಲಕ ಮದ್ಯ ಪ್ರಿಯರ ಕಿಕ್‌ ಇಳಿಸಿದೆ. ಇದೀಗ ಮದ್ಯ ಪ್ರಿಯರೇ ಸರ್ಕಾರಕ್ಕೆ ಶಾಕ್‌ ಕೊಡುವುದಕ್ಕೆ ಶುರು ಮಾಡಿಕೊಂಡಿದ್ದು ಮದ್ಯ ಕಂಪನಿಗಳು ಹಾಗೂ ಸರ್ಕಾರ ತಲೆಯ ಮೇಲೆ ಕೈಹೊತ್ತು ಕೂರುವಂತೆ ಆಗಿದೆ. ಅಷ್ಟಕ್ಕೂ ಮದ್ಯ ಪ್ರಿಯರು ಕೊಟ್ಟಿರುವ ರಿವರ್ಸ್‌ ಶಾಕ್‌ ಏನು ಎನ್ನುವ ವಿವರ ಇಲ್ಲಿದೆ.

ರಾಜ್ಯ ಸರ್ಕಾರವು ಮದ್ಯ ಪ್ರಿಯರಿಗೆ ನಿರಂತರವಾಗಿ ಶಾಕ್‌ ಕೊಡುತ್ತಲ್ಲೇ ಇದೆ. ಅಲ್ಲದೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ತೆರಿಗೆ ಸುಂಕವೂ ಭಾರತದ ಮದ್ಯ ಉದ್ಯಮಕ್ಕೆ ಭಾರೀ ಹೊಡೆತ ತಂದೊಡ್ಡಿದೆ. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಮೂರು ಬಾರಿ ಮದ್ಯ & ಬಿಯರ್‌ ಬೆಲೆ ಹೆಚ್ಚಳವಾಗಿದೆ. ಇದರಿಂದ ಸರ್ಕಾರಕ್ಕೆ ಹೊಸ ತಲೆ ಬಿಸಿ ಎದುರಾಗಿದೆ. ನಿರಂತರವಾಗಿ ಮದ್ಯದ ಬೆಲೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮದ್ಯ ಪ್ರಿಯರು ಮದ್ಯ ಸೇವನೆ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಇದರಿಂದ ಮದ್ಯದ ಬೇಡಿಕೆ ಇಳಿಕೆಯಾಗುತ್ತಿದೆ. ಈಚೆಗೆ ಜನವರಲ್ಲಿ ಮದ್ಯದ ಬೆಲೆ ಏರಿಕೆಯಾಗಿದ್ದು, ಇದರಿಂದ ಮದ್ಯ ಬೇಡಿಕೆಯು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ ಅಂತ ಬ್ರುವರಿಸ್ ಅಸೋಸಿಯೇಷನ್‌ ಆಫ್‌ ಇಂಡಿಯಾ (BAI) ಹೇಳಿದೆ.

Liquor is expensive Liquor lovers Shocked Karnataka Government

ಕರ್ನಾಟಕದಲ್ಲಿ ಉಳಿದ ರಾಜ್ಯಗಳಿಂತ ಮದ್ಯದ ಬೆಲೆಯು ಹೆಚ್ಚಳವಾಗಿದ್ದು. ಇದರಿಂದ ಮದ್ಯ ಬೇಡಿಕೆ ಕುಸಿತ ಕಂಡಿದೆ. ಇದೇ ರೀತಿ ಮುಂದುವರಿದರೆ 5,000 ಸಾವಿರ ಕೋಟಿ ರೂಪಾಯಿ ಹೂಡಿಕೆಗೂ ಹೊಡೆತ ಬೀಳಲಿದೆ ಎಂದು ಮದ್ಯ ಕಂಪನಿಗಳು ಆತಂಕ ವ್ಯಕ್ತಪಡಿಸಿವೆ. ಈಗಾಗಲೇ ಹಲವು ಮದ್ಯ ಪ್ರಿಯರು ಮದ್ಯ ಸೇವನೆ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಹೊಸದಾಗಿ ತೆರಿಗೆ ಹಾಕಬಾರದು ಅಂತ ಮದ್ಯ ಕಂಪನಿಗಳು ಮನವಿ ಮಾಡಿವೆ. ಈ ಮೂಲಕ ಮದ್ಯ ಪ್ರಿಯರು ರಾಜ್ಯ ಸರ್ಕಾರದ ಮದ್ಯ ಬೆಲೆ ಏರಿಕೆಗೆ ಉತ್ತರ ಕೊಟ್ಟಂತೆ ಆಗಿದೆ.

Take a Poll

ಇತ್ತೀಚಿನ ದಿನಗಳಲ್ಲಿ ಮೂರು ಬಾರಿ ಮದ್ಯ ಬೆಲೆ ಏರಿಕೆ ಮಾಡಿರುವುದರಿಂದ ಮದ್ಯ ಉದ್ಯಮದ ಮೇಲೆ ಪರಿಣಾಮ ಬೀರಿದೆ. ಜನ ಮದ್ಯ ಖರೀದಿಸುವುದನ್ನು ಕಡಿಮೆ ಮಾಡಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಮತ್ತೊಮ್ಮೆ ಬೆಲೆ ಏರಿಕೆ ಮಾಡಬಾರದು ಅಂತ ಬ್ರುವರಿಸ್ ಅಸೋಸಿಯೇಷನ್‌ ಆಫ್‌ ಇಂಡಿಯಾ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದೆ.

Liquor is expensive Liquor lovers Shocked Karnataka Government

ಬಿಯರ್‌ ಬೇಡಿಕೆ ಭರ್ಜರಿ ಕುಸಿತ: ಬಿಯರ್‌ ಬೇಡಿಕೆ ಕರ್ನಾಟಕದಲ್ಲಿ ಗಣನೀಯವಾಗಿ ಕುಸಿತ ಕಂಡಿದೆ. ಕರ್ನಾಟಕದಲ್ಲಿ ಯಾವಾಗಲೂ ಬಿಯರ್‌ಗೆ ಬೇಡಿಕೆ ಜಾಸ್ತಿಯೇ ಇತ್ತು. ಅಲ್ಲದೇ ಬೆಲೆ ಏರಿಕೆಯ ಮುಂಚಿನ ದಿನಗಳಲ್ಲಿ ಬಿಯರ್‌ ಒಳ್ಳೆಯ ಸೇಲ್ ಆಗುತ್ತಿತ್ತು. ಆದರೆ ಇದೀಗ ಬಿಯರ್‌ ಮಾರಾಟ ಸಖತ್‌ ಕುಸಿತ ಕಂಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಹೂಡಿಕೆಯಲ್ಲಿ ಲಾಸ್‌ ಆಗುವ ಆತಂಕ ಶುರುವಾಗಿದೆ.

ಇನ್ನು ಕರ್ನಾಟಕದಲ್ಲಿ ಬಿಯರ್‌ ಮಾತ್ರವಲ್ಲ ಹಲವು ಮದ್ಯಗಳ ಮಾರಾಟದಲ್ಲಿ ಕುಸಿತ ಕಂಡಿದೆ. ಇದರಿಂದ ಬೆಲೆ ಏರಿಕೆ ಮಾಡಿ ಹೆಚ್ಚು ಆದಾಯ ಸಂಗ್ರಹ ಮಾಡುವ ನಿರೀಕ್ಷೆಯಲ್ಲಿದ್ದ ಕರ್ನಾಟಕ ಸರ್ಕಾರಕ್ಕೆ ಮದ್ಯ ಪ್ರಿಯರು ಶಾಕ್‌ ನೀಡಿದ್ದಾರೆ. ಸಾಮಾನ್ಯವಾಗಿ ಮದ್ಯ ಸೇರಿದಂತೆ ಕೆಲವೊಂದು ಪದಾರ್ಥಗಳ ಬೆಲೆ ಹೆಚ್ಚಳವಾದರೆ, ಚಟ ಮಾಡುವವರು ಖರೀದಿ ಮಾಡಿಯೇ ಮಾಡುತ್ತಾರೆ ಎನ್ನುವ ಲೆಕ್ಕಾಚಾರ ಇದೆ. ಆದರೆ ಇದೀಗ ಸರ್ಕಾರದ ಲೆಕ್ಕಾಚಾರಗಳನ್ನು ಮದ್ಯ ಪ್ರಿಯರು ತಲೆ ಕೆಳಗಾಗಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+