ಕಾಂಗ್ರೆಸ್ ಭಯೋತ್ಪಾದಕರ ಪರವೋ ಅಥವಾ ದೇಶಭಕ್ತರ ಪರವೋ ಎನ್ನುವುದನ್ನು ಸ್ಪಷ್ಟಪಡಿಸಲಿ: ಬಸವರಾಜ ಬೊಮ್ಮಾಯಿ

ಬೆಂಗಳೂರು, ಡಿಸೆಂಬರ್ 16: ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಯವರು, ದೇಶದಲ್ಲಿ ಅಶಾಂತಿ ಉಂಟುಮಾಡುವ ಭಯೋತ್ಪಾದಕರ ಪರವೋ ಅಥವಾ ದೇಶವನ್ನು ಉಳಿಸುವ ದೇಶಭಕ್ತರ ಪರವೋ ಎನ್ನುವುದನ್ನು ಸ್ಪಷ್ಟಪಡಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ನಾಯಕರಿಗೆ ಪ್ರಶ್ನಿಸಿದರು.

ಶುಕ್ರವಾರ ವಿಜಯ ದಿವಸ್ ಕಾರ್ಯಕ್ರಮದ ನಂತರ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಕೆಪಿಸಿಸಿ ಅಧ್ಯಕ್ಷರ ಹೇಳಿಕೆಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿ ಬಾರಿ ದೇಶದ ನೈತಿಕತೆ, ಪೊಲೀಸ್ ಇಲಾಖೆಯ ನೈತಿಕತೆ ಕಡಿಮೆ ಮಾಡುವಂತೆ ಮಾತನಾಡುವುದು ದೇಶಭಕ್ತರ ಕೆಲಸವಲ್ಲ. ಇದನ್ನು ಸ್ಪಷ್ಟವಾಗಿ ಹೇಳಿದರೆ ಜನ ತೀರ್ಮಾನ ಮಾಡುತ್ತಾರೆ. ಭಯೋತ್ಪಾದಕರು ಸಾಕ್ಷಿ ಸಮೇತ ಸಿಕ್ಕಾಗ ಅದರ ಪ್ರಕ್ರಿಯೆ ಹಾಗೂ ತನಿಖೆಯನ್ನೇ ಪ್ರಶ್ನೆ ಮಾಡುವುದು ಭಯೋತ್ಪಾದಕ ಸಂಘಟನೆಗಳಿಗೆ ನೈತಿಕ ಬಲ ತಂದುಕೊಡುತ್ತದೆ ಎಂದರು.

ಕುಕ್ಕರ್ ಬಾಂಬ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ ಒಬ್ಬ ವ್ಯಕ್ತಿ ಬಾಂಬ್ ಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಕುಕ್ಕರ್ ನಲ್ಲಿ ಹಾಕಿಕೊಂಡು ಹೋಗುವಾಗ ಸ್ಪೋಟವಾಗಿದೆ. ಅದನ್ನು ಮಂಗಳೂರಿನಲ್ಲಿ ಸ್ಪೋಟ ಗೊಳಿಸುವ ಉದ್ದೇಶ ವಿತ್ತು ಎನ್ನುವುದು ಸ್ಪಷ್ಟವಾಗಿದೆ. ಆತ ತನ್ನ ಗುರುತನ್ನು ಮರೆಮಾಚಿ ಈಗಾಗಲೇ 2-3 ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡಿದ್ದು, ಭಯೋತ್ಪಾದಕ ಎಂದ ಮೇಲೆ ದೇಶದ ಹೊರಗೂ ಸಂಪರ್ಕವಿತ್ತು ಎನ್ನುವುದು ಕೂಡ ಸ್ಪಷ್ಟ ಎಂದರು.

Let It Be Clear Whether Congress Is For Terrorists Or Patriots Basavaraj Bommai Asked

ಇಂಥ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರು ಅದು ಆಕಸ್ಮಿಕ, ಪ್ರಕರಣ ಮುಚ್ಚಿಹಾಕಲು ಮಾಡಿದ್ದಾರೆ ಎನ್ನುವುದು ನಿಜಕ್ಕೂ ಅವರಿಗೆ ಶೋಭೆ ತರುವಂಥದ್ದಲ್ಲ. ಅವರ ನೀತಿಯೇ ಹೀಗಿದೆ. ಭಯೋತ್ಪಾದಕ ಚಟುವಟಿಕೆಗಕನ್ನು ಕ್ಷುಲ್ಲಕ ವಾಗಿ ಕಾಣುವುದು, ಭಯೋತ್ಪಾದಕರಿಗೆ ಬೆಂಬಲ ನೀಡುವುದು, ಗಲ್ಲಿಗೇರಿಸಿದಾಗ ಟೀಕೆ ಮಾಡುವ ಅವರ ಪ್ರವೃತ್ತಿ, ಚುನಾವಣೆಯ ತುಷ್ಟೀಕರಣದ ತಂತ್ರ. ಈ ರೀತಿ ಮಾತನಾಡಿದರೆ ಅಲ್ಪಸಂಖ್ಯಾತರ ಮತಗಳು ದೊರಕಬಹುದೆಂಬ ಹಳೇ ತಂತ್ರ. ಅದನ್ನೇ ಬಳಕೆ ಮಾಡಿದ್ದಾರೆ. ಆದರೆ ಜನ ಜಾಗೃತರಾಗಿದ್ದು, ಇದೆಲ್ಲಾ ನಡೆಯೋಲ್ಲ ಎಂದರು.

Let It Be Clear Whether Congress Is For Terrorists Or Patriots Basavaraj Bommai Asked

ಕಾನೂನು ಬಾಹಿರವಾಗಿ ಮತ ಹಾಕಿಸುವ ಪ್ರವೃತ್ತಿ

ಡಿ.ಕೆ.ಶಿವಕುಮಾರ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿ 2017 ರಲ್ಲಿ ಆ ಸಂಸ್ಥೆ ಗೆ ಆಜ್ಞೆ ಕೊಟ್ಟಿದ್ದೆ ಕಾಂಗ್ರೆಸ್ ಎನ್ನುವುದನ್ನು ಡಿ.ಕೆ.ಶಿವಕುಮಾರ್ ಮರೆಯಬಾರದು. ಕಾನೂನು ಬಾಹಿರವಾಗಿ ಮತ ಹಾಕಿಸುವ ಪ್ರವೃತ್ತಿ ಕಾಂಗ್ರೆಸ್ಸಿಗಿದೆ. ನಾವು ತನಿಖೆ ಮಾಡಿಸಿ ಬಂಧನವೂ ಆಗಿದೆ. ಯಾವ ಕ್ಷೇತ್ರಗಳಲ್ಲಿ ಯಾವ ಪ್ರದೇಶಗಳಿಂದ ಬಂದಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಚುನಾವಣೆ ಆಯೋಗ ಹೊಸ ತಾಂತ್ರಿಕ ವಿಧಾನವನ್ನು ಅಳವಡಿಸಿದ್ದು, ಫೋಟೋ ಮೂಲಕವೇ ಬೇರೆಡೆ ಮತದಾರರ ಚೀಟಿ ಹೊಂದಿದ್ದಾರೆ ಗುರುತಿಸಿ ತೆಗೆದುಹಾಕಲಾಗುವುದು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+