ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡಿಮೆ ಕೊರೊನಾ ಕೇಸ್ ದಾಖಲಾಗಿರುವ ಕರ್ನಾಟಕದ ಐದು ಜಿಲ್ಲೆಗಳು?

|
Google Oneindia Kannada News

ಬೆಂಗಳೂರು, ಜೂನ್ 25: ಬುಧವಾರ ಸಂಜೆಯ ವರದಿ ಪ್ರಕಾರ ಕರ್ನಾಟಕದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 10,118 ಗಡಿ ದಾಟಿದೆ. ಈ ಮೂಲಕ ದೇಶದಲ್ಲಿ ಅತಿ ಹೆಚ್ಚು ಸೋಂಕು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಟಾಪ್ ಹತ್ತರೊಳಗೆ ಪ್ರವೇಶ ಮಾಡಿದೆ.

Recommended Video

Covid update : almost 17000 cases in the last 24 hours in India | Oneindia Kannada

ಕರ್ನಾಟಕದ ಪೈಕಿ ಅತಿ ಹೆಚ್ಚು ವರದಿಯಾಗಿರುವುದು ಬೆಂಗಳೂರಿನಲ್ಲಿ. ಸಿಲಿಕಾನ್ ಸಿಟಿಯಲ್ಲಿ ಒಟ್ಟು 1678 ಕೇಸ್ ದಾಖಲಾಗಿದೆ. ಕಲಬುರಗಿಯಲ್ಲಿ 1254 ಜನರಿಗೆ ಮಹಾಮಾರಿ ಅಂಟಿಕೊಂಡಿದೆ. ಉಡುಪಿಯಲ್ಲಿ 1102 ಮಂದಿಗೆ ಕೊವಿಡ್ ತಗುಲಿದೆ. ಯಾದಗರಿಯಲ್ಲಿ 907 ಜನರಿಗೆ ಕೊರೊನಾ ವೈರಸ್ ಖಚಿತವಾಗಿದೆ.

ಕರ್ನಾಟಕದಲ್ಲಿ 'ಡೇಂಜರ್ ಜೋನ್'ನಲ್ಲಿರುವ 5 ಜಿಲ್ಲೆಗಳ ಕೊವಿಡ್ ಅಂಕಿ ಅಂಶಕರ್ನಾಟಕದಲ್ಲಿ 'ಡೇಂಜರ್ ಜೋನ್'ನಲ್ಲಿರುವ 5 ಜಿಲ್ಲೆಗಳ ಕೊವಿಡ್ ಅಂಕಿ ಅಂಶ

ದಿನದಿಂದ ದಿನಕ್ಕೆ ಈ ಜಿಲ್ಲೆಗಳಲ್ಲಿ ಹೊಸ ಕೇಸ್‌ಗಳು ಸಂಖ್ಯೆಯೂ ಸಹಜವಾಗಿದೆ ಏರುತ್ತಿದೆ. ಇಂತಹ ಆತಂಕದ ನಡುವೆ ಕೊವಿಡ್‌ ರೋಗದಿಂದ ಸ್ವಲ್ಪ ಮಟ್ಟಿಗೆ ರಿಲ್ಯಾಕ್ಸ್ ಆಗಿರುವ ಜಿಲ್ಲೆಗಳು ಯಾವುದು ಎಂಬುದರ ಕಡೆ ಒಂದು ನೋಟ. ಮುಂದೆ ಓದಿ....

ಅತಿ ಕಡಿಮೆ ಕೇಸ್ ಹೊಂದಿರುವ ಜಿಲ್ಲೆಗಳು

ಅತಿ ಕಡಿಮೆ ಕೇಸ್ ಹೊಂದಿರುವ ಜಿಲ್ಲೆಗಳು

ಕರ್ನಾಟದಲ್ಲಿ ಕೊರೊನಾ ವೈರಸ್ ಹರಡುವಿಕೆಯಿಂದ ಸ್ವಲ್ಪ ಮಟ್ಟಿಗೆ ರಿಲ್ಯಾಕ್ಸ್ ಆಗಿರುವುದು ಜಿಲ್ಲೆಗಳು ಅಂದ್ರೆ ಕೊಡಗು ಮತ್ತು ಚಾಮರಾಜನಗರ. ಈ ಎರಡು ಜಿಲ್ಲೆಗಳಲ್ಲೂ ಈವರೆಗೂ ತಲಾ 8 ಸೋಂಕು ವರದಿಯಾಗಿದೆ. ಈ ಪೈಕಿ ಚಾಮರಾಜನಗರದಲ್ಲಿ 7 ಕೇಸ್ ಸಕ್ರಿಯವಾಗಿದೆ. ಕೊಡಗಿನಲ್ಲಿ 5 ಕೇಸ್ ಆಕ್ಟಿವ್ ಆಗಿದೆ.

ಚಿಕ್ಕಮಗಳೂರಿನಲ್ಲಿ 43 ಕೇಸ್

ಚಿಕ್ಕಮಗಳೂರಿನಲ್ಲಿ 43 ಕೇಸ್

ಚಿಕ್ಕಮಗಳೂರಿನಲ್ಲಿ ಈವರೆಗೂ 43 ಜನರಿಗೆ ಕೊರೊನಾ ವೈರಸ್ ಅಂಟಿಕೊಂಡಿದೆ. ಪ್ರಸ್ತುತ 19 ಪ್ರಕರಣಗಳು ಸಕ್ರಿಯವಾಗಿದೆ. ಈವರೆಗೂ 23 ಮಂದಿ ಸೋಂಕಿನಿಂದ ಚೇತರಿಸಿಕೊಂಡು, ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ. ಒಬ್ಬ ವ್ಯಕ್ತಿ ಮಹಾಮಾರಿಗೆ ಬಲಿಯಾಗಿದ್ದಾನೆ.

ಭಾರತದಲ್ಲಿ ಕೊರೊನಾ ದಿಕ್ಕು ಬದಲಿಸಿದ 'ಐದು' ಮಹಾನಗರಗಳುಭಾರತದಲ್ಲಿ ಕೊರೊನಾ ದಿಕ್ಕು ಬದಲಿಸಿದ 'ಐದು' ಮಹಾನಗರಗಳು

ಹಾವೇರಿ-ಕೊಪ್ಪಳ ಸಮಬಲ

ಹಾವೇರಿ-ಕೊಪ್ಪಳ ಸಮಬಲ

ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ತಲಾ 44 ಜನರಿಗೆ ಕೊವಿಡ್ ತಗುಲಿದೆ. ಕೊಪ್ಪಳದಲ್ಲಿ ಇನ್ನೂ 25 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 18 ಮಂದಿ ಗುಣಮುಖರಾಗಿದ್ದಾರೆ. ಒಂದು ಸಾವು ಸಂಭವಿಸಿದೆ. ಹಾವೇರಿಯಲ್ಲಿ 25 ಜನರು ಗುಣಮುಖರಾಗಿದ್ದು, 19 ಕೇಸ್‌ಗಳು ಸಕ್ರಿಯವಾಗಿದೆ. ಯಾವುದೇ ಸಾವು ಸಂಭವಿಸಿಲ್ಲ.

ಚಿತ್ರದುರ್ಗ-ತುಮಕೂರು

ಚಿತ್ರದುರ್ಗ-ತುಮಕೂರು

ಕೋಟೆನಾಡು ಚಿತ್ರದುರ್ಗದಲ್ಲಿ ಒಟ್ಟು 47 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಇದರಲ್ಲಿ 41 ಮಂದಿ ಗುಣಮುಖರಾಗಿದ್ದರೆ, ಕೇವಲ 6 ಕೇಸ್ ಮಾತ್ರ ಸಕ್ರಿಯವಾಗಿದೆ. ತುಮಕೂರಿನಲ್ಲಿ 57 ಜನರಿಗೆ ಕೊವಿಡ್ ತಗುಲಿದೆ. ಅದರಲ್ಲಿ 39 ಜನರು ಚೇತರಿಸಿಕೊಂಡಿದ್ದು, 19 ಮಂದಿ ಆಕ್ಟಿವ್ ಆಗಿದ್ದಾರೆ.

English summary
Chamarjanagara, kodagu, koppal, haveri, chikkamagaluru reports Less COVID 19 cases in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X