ಕೊಳ್ಳೆಗಾಲದಲ್ಲಿ ಚಿರತೆ ದಾಳಿ, ಲಾರಿ ಕ್ಲೀನರ್ ಬಲಿ

ಚಾಮರಾಜನಗರ, ನ.27 : ಕೆಲವು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಹುಲಿಯೊಂದು ಮಹಿಳೆಯ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ಗುರುವಾರ ಮುಂಜಾನೆ ಚಾಮರಾಜನಗರದಲ್ಲಿ ಚಿರತೆ ದಾಳಿಗೆ ಟೆಂಪೋ ಕ್ಲಿನರ್ ಬಲಿಯಾಗಿದ್ದಾನೆ. ಚಿರತೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕು ವ್ಯಾಪ್ತಿಯಲ್ಲಿನ ದಿಂಬಲ್‌ ಅರಣ್ಯ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಕರ್ನಾಟಕ-ತಮಿಳುನಾಡು ಗಡಿ ಭಾಗದಲ್ಲಿನ ಅರಣ್ಯ ಪ್ರದೇಶದಲ್ಲಿ ಚಿರತೆ ಸೀನ (26) ಎಂಬ ಟೆಂಪೋ ಕ್ಲೀನರ್ ಮೇಲೆ ದಾಳಿ ಮಾಡಿ ಆತನನ್ನು ಹೊತ್ತೊಯ್ದಿದೆ. [ಕೊಳ್ಳೆಗಾಲದಲ್ಲಿ ಗ್ರಾಮಸ್ಥರ ನಿದ್ದೆಗೆಡಿಸಿದ್ದವ ಸೆರೆ!]

Leopard

ತಮಿಳುನಾಡಿಗೆ ತರಕಾರಿ ತುಂಬಿಕೊಂಡು ಹೋಗುತ್ತಿದ್ದ ಟೆಂಪೋ ಕ್ಲೀನರ್‌ ಸೀನ ಮೂತ್ರ ಮಾಡಲೆಂದು ಗುರುವಾರ ಮುಂಜಾನೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಟೆಂಪೋದಿಂದ ಕೆಳಗಿಳಿದಿದ್ದರು. ಈ ಸಂದರ್ಭದಲ್ಲಿ ಅವರ ಮೇಲೆ ದಾಳಿ ಮಾಡಿದ ಚಿರತೆ ಸುಮಾರು 2 ಕಿ.ಮೀ.ದೂರು ಅವರನ್ನು ಹೊತ್ತುಕೊಂಡು ಹೋಗಿದೆ. [ಚಿಕ್ಕಮಗಳೂರು : ಮಹಿಳೆ ಕೊಂದಿದ್ದ ಹುಲಿ ಸೆರೆ]

ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸೀನನ ಶವಕ್ಕಾಗಿ ಹುಡುಕಾಟ ಆರಂಭಿಸಿದರು. ಮಧ್ಯಾಹ್ನ 12 ಗಂಟೆ ವೇಳೆಗೆ ಶವ ಪತ್ತೆಯಾಗಿದ್ದು, ಭುಜ, ಕೈ ಕಾಲುಗಳ ಭಾಗಗಳನ್ನು ಚಿರತೆ ತಿಂದು ಹಾಕಿದೆ. ನರಭಕ್ಷಕ ಚಿರತೆಯನ್ನು ಹಿಡಿಯಲು ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.

ಚಿರತೆ ದಾಳಿಯ ಹಿಂದಿನ ಪ್ರಕರಣಗಳು

* ಹಾಸನ ತಾಲೂಕಿನ ನಾಗನಹಳ್ಳಿಯಲ್ಲಿ ಫೆಬ್ರವರಿಯಲ್ಲಿ ಚಿರತೆ ಬಾಲಕನನ್ನು ಕೊಂದು ಹಾಕಿತ್ತು.
* ಮೇ ತಿಂಗಳಿನಲ್ಲಿ ಮಂಡ್ಯದಲ್ಲಿ ಚಿರತೆ ದಾಳಿ ಮಾಡಿತ್ತು, ಮಗನನ್ನು ರಕ್ಷಿಸಿದ್ದ ತಂದೆ ಚಿರತೆಗೆ ಬಲಿಯಾಗಿದ್ದರು.
* ಆಗಸ್ಟ್‌ನಲ್ಲಿ ಬೆಂಗಳೂರಿನ ಯಲಹಂಕ ಬಳಿ ಚಿರತೆ ಪ್ರತ್ಯಕ್ಷವಾಗಿತ್ತು, ಅದನ್ನು ಸೆರೆಹಿಡಿಯಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+