ಪರಿಷತ್ ಉಪ ಚುನಾವಣೆ : ಸಿ.ಎಂ.ಇಬ್ರಾಹಿಂ ನಾಮಪತ್ರ ಸಲ್ಲಿಕೆ

Posted By: Gururaj
Subscribe to Oneindia Kannada

ಬೆಂಗಳೂರು, ಆ.21 : ವಿಧಾನಪರಿಷತ್ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಎಂ.ಇಬ್ರಾಹಿಂ ನಾಮಪತ್ರ ಸಲ್ಲಿಸಿದರು. ಆಗಸ್ಟ್ 31ರಂದು ಒಂದು ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ.

ಪರಿಷತ್ ಉಪ ಚುನಾವಣೆ, ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ಅಭ್ಯರ್ಥಿ

ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮುಂತಾದ ನಾಯಕರೊಂದಿಗೆ ಆಗಮಿಸಿ ಸಿ.ಎಂ.ಇಬ್ರಾಹಿಂ ನಾಮತ್ರ ಸಲ್ಲಿಸಿದರು. ವಿಧಾನಸಭೆಯಲ್ಲಿನ ಶಾಸಕರು ಪರಿಷತ್ತಿಗೆ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಳುಹಿಸಲಿದ್ದಾರೆ.

cm ibrahim

ಆಗಸ್ಟ್ 31ರಂದು ವಿಧಾನಪರಿಷತ್ ಉಪ ಚುನಾವಣೆ

ಪರಿಷತ್ ಸದ್ಯರಾಗಿದ್ದ ವಿಮಲಾ ಗೌಡ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಬಹುಮತ ಹೊಂದಿರುವುದರಿಂದ ನಿರಾತಂಕವಾಗಿ ಅಭ್ಯರ್ಥಿ ಆಯ್ಕೆಯಾಗಿ ಪರಿಷತ್ ಪ್ರವೇಶಿಸಲಿದ್ದಾರೆ.

ಸಿ.ಎಂ.ಇಬ್ರಾಹಿಂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರು. ಅವರನ್ನು ವಿಧಾನಪರಿಷತ್ ಅಭ್ಯರ್ಥಿಯನ್ನಾಗಿಮಾಡುವ ಮೂಲಕ ಶಕ್ತಿಸೌಧ ಪ್ರವೇಶಿಸಲು ಅನುಕೂಲ ಮಾಡಿಕೊಡಲಾಗಿದೆ. ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಸಿ.ಎಂ.ಇಬ್ರಾಹಿಂ ಅವರು ಕಳೆದ ವಾರ ರಾಜೀನಾಮೆ ನೀಡಿದ್ದರು.

ಸಿದ್ದರಾಮಯ್ಯ ಅವರ ಜೊತೆ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್‌ಗೆ ಬಂದವರು ಸಿ.ಎಂ.ಇಬ್ರಾಹಿಂ. ಸಿದ್ದರಾಮಯ್ಯ ಅವರ ಆಪ್ತ ವಯಲದಲ್ಲಿ ಗುರುತಿಸಿಕೊಂಡವರು. 2013ರ ಚುನಾವಣೆಯಲ್ಲಿ ಕ್ಷೇತ್ರದ ಹಾಲಿ ಶಾಸಕ ಸಂಗಮೇಶ್ ಅವರನ್ನು ಕಡೆಗಣಿಸಿ ಭದ್ರಾವತಿಯಲ್ಲಿ ಇಬ್ರಾಹಿಂ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ, ಸೋಲು ಕಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
C.M.Ibrahim accompanied by Chief Minister Siddaramaiah and Congress leaders files nomination papers for Legislative council by election. There is one casual vacancy in council due to death of following sitting member Vimala Gowda. Election will be held on August 31, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X