ಐಷಾರಾಮಿ ಹೋಟೆಲ್‌ಗಳಲ್ಲಿ ಪ್ಯಾಂಟ್ ಜಿಪ್ ಬಿಚ್ಚೋ ರಾಜಕಾರಣಿಗಳಿಗೆ Z+ ಸೆಕ್ಯೂರಿಟಿ ಯಾಕೆ?-ಲಾಯರ್ ಜಗದೀಶ್ ಹೇಳಿದ್ದೇನು?
Lawyer K.N. Jagadesh Kumar: ಅವಾಚ್ಯ ಪದ ಬಳಕೆ ಹಿನ್ನೆಲೆ ಲಾಯರ್ ಜಗದೀಶ್ ಅವರನ್ನು ಬಿಗ್ ಬಾಸ್ ಕನ್ನಡ 11 ಸೀಸನ್‌ನಿಂದ ಹೊರಹಾಕಲಾಯಿತು. ಬಿಗ್ ಬಾಸ್ ಮನೆಯಿಲ್ಲಿದ್ದಾಲೇ ಅವರು ಕರ್ನಾಟಕದ ಕ್ಷಷ್ ಅಂತಲೇ ಗುರುತಿಸಿಕೊಂಡಿದ್ದು, ಇದೀಗ ಹೊರಗಡೆ ಮತ್ತಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಅಲ್ಲದೆ, ಇದೀಗ ಅವರು Z+ ಸೆಕ್ಯೂರಿಟಿ ಬಗ್ಗೆ ಮಾತನಾಡಿದ ಗಮನ ಸೆಳೆದಿದ್ದಾರೆ.
ಬಿಗ್‌ಬಾಸ್‌ಗೆ ಅವಾಜ್ ಹಾಕಿ ಮನೆಯಿಂದ ನೇರವಾಗಿ ನಾಮಿನೇಟ್ ಆಗಿ ಹೊರಬಂದ ಜಗದೀಶ್ ಅವರಿಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಅವರ ಮನೆ ಬಳಿ ಪೋಟೋಗಾಗಿ ಸಾವಿರಾರು ಅಭಿಮಾನಿಗಳ ದಂಡೇ ಬರುತ್ತಿದೆ. ಅಲ್ಲದೆ, ಯಾರೋ ಇಬ್ಬರು ಕುಡಿದು ಬಂದು ಗಲಾಟೆ ಮಾಡಿದ್ದರು. ನಾನು ಸ್ಟಾರ್ ಆದ್ದರಿಂದ ನನಗೆ ಭದ್ರತೆ ಬೇಕು ಎಂದು ರಾಜ್ಯ ಪೊಲೀಸ್ ಮಹಾ ನೀರ್ದೇಶಕರಿಗೂ ನಾನು ಮಾಹಿತಿ ನೀಡಿದ್ದೇನೆ.

"ಇದನ್ನೆಲ್ಲ ಇಂಟಲಿಜೆನ್ಸ್ ಪೊಲೀಸ್ ಅಧಿಕಾರಿಗಳು ನೋಡದೇ ನೋಡದ ರೀತಿ ಇರುವುದು ಸರಿಯಲ್ಲ. ಅವರು ಯಾಕೆ ಸುಮ್ಮನಿದ್ದಾರೆ ಅನ್ನೋದು ನನ್ನ ಪ್ರಶ್ನೆಯಾಗಿದೆ. ಇನ್ನು ಐಷಾರಾಮಿ ಹೋಟೆಲ್‌ಗಳೆಲ್ಲ ಪ್ಯಾಂಚ್ ಜಿಪ್ ಬಿಚ್ಚಿ ಅದನ್ನು ಮಾಡೋರಿಗೆಲ್ಲ Z+ ಸೆಕ್ಯೂರಿ ಕೊಡುತ್ತಿದ್ದಾರೆ. ಈ ಮೂಲಕ ಇಂಟಲಿಜೆನ್ಸ್ ಪೊಲೀಸರನ್ನು ದುರುಪಯೋಗಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ," ಎಂದು ಆಕ್ರೊಶ ಹೊರಹಾಕಿದರು.
"ಡಿಜಿಪಿ, ಕಮಿಷನರ್ ಇದನ್ನು ಆರ್ಡರ್ ಮಾಡಿದರೆ ಪೊಲೀದರು ಸೆಕ್ಯೂರಿಟಿ ಕೊಡೋದಿಲ್ಲ ಅಂತಾ ಹೇಳೊದಿಕ್ಕೆ ಆಗುತ್ತಾ? ಈ ಪರಿಸ್ಥಿತಿಯಲ್ಲಿ ಸರ್ಕಾರದ ಸೌಲತ್ತುಗಳನ್ನು ಅನುಭವಿಸುವ ರಾಜಕಾರಣಿಗಳು, ಬಿಸಿನೆಸ್‌ಮನ್‌ಗಳು ಇರಬೇಕಾದರೆ, ನನ್ನಂತಹ ಒಬ್ಬ ಪ್ರಾಮಾಣಿಕ ಹೋರಾಟಗಾರನಿಗೆ ಯಾಕೆ ಕೊಡಬಾರದು," ಎಂದು ಮನವಿ ಹೇಳಿದ್ದಾರೆ.
"ನನ್ನನ್ನು ಕರ್ನಾಟಕದ ಜನತೆ ಪ್ರೀತಿಯಿಂದ ವಕೀಲ್ ಸಾಬ್.. ಕ್ರಷ್ ಆಫ್ ಕರ್ನಾಟಕ, ವಾಯ್ಸ್ ಆಫ್ ಕರ್ನಾಟಕ ಅಂತಾ ಕರೆಯುತ್ತಾರೆ. ಇದೀಗ ಪಂಚರ್ ಆಫ್ ಕರ್ನಾಟಕ ಅಂತಾರೆ.. ಯಾಕೆಂದರೆ, ಇವರಿಗೆಲ್ಲ ಪಂಚರ್ ಮಾಡೋಕೆ ಬಂದಿದ್ದೇನೆ. ಏನೇ ಆಗಲಿ ಸೆಕ್ಯೂರಿಟಿ ನನಗೆ ಕೊಟ್ಟರೆ ನಿಮಗೆ ಕೊಟ್ಟ ರೀತಿ. ಮುಂದಿನ ದಿನಗಳಲ್ಲಿ ನಿಮಗೂ ತೊಂದರೆ ಆದರೆ, ಕೊಡಿಸುತ್ತೇನೆ. ಸಾಮಾನ್ಯ ಜನರು, ವಿಐಪಿ ಎಲ್ಲಾರೂ ಒಂದೇ," ಅಂತಲೂ ಹೇಳಿದರು.
"ಅದರಲ್ಲೂ ಪೊಲೀಸ್ ಕಾನ್ಸ್‌ಟೇಬಲ್ ಫೀಲ್ಡ್‌ನಲ್ಲಿರುತ್ತಾರೆ. ಕ್ರೈಂ ಡ್ಯೂಟಿ, ಸಿಎಂಗೆ ಡ್ಯೂಟಿ ಕೊಡುತ್ತಾ ಅದರಲ್ಲೇ ಇಡೀ ದಿನ ಕಾಲ ಕಳೆಯುವಂತಹ ಪರಿಸ್ಥಿತಿ ಪೊಲೀಸ್ ಕಾನ್ಸ್ ಟೇಬಲ್‌ಗಳದ್ದಾಗಿದೆ. ಹೀಗೆ ಎಲ್ಲಾ ರೀತಿಯ ಡ್ಯೂಟಿ ಅವರು ಮಾಡುತ್ತಾರೆ. ಆದ್ದರಿಂದ ಪೊಲೀಸ್ ಕಾನ್ಸ್ ಟೇಬಲ್‌ಗಳಿಗೆ ಆರಂಭಿಕ ಸಂಬಳ 80,000 ಕೊಡಬೇಕುಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ," ಅಂತಾ ಹೇಳಿದ್ದಾರೆ.
"ಮಾನವೀಯತೆ ದೃಷ್ಟಿಯಿಂದ ನೋಡುವುದಾದರೆ, ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ಹೆಚ್ಚು ಸಮಯ ದುಡಿಸಿಕೊಳ್ಳುತ್ತಾರೆ. ಕೆಲವು ವೇಳೆ ಅವರು ಇಡೀ ದಿನಗಟ್ಟಲೇ ಕೆಲಸ ಮಾಡುತ್ತಾರೆ. ಇದರತ್ತ ಸರ್ಕಾರ ಗಮನಹರಿಸಬೇಕಾಗುತ್ತದೆ. ಕರ್ನಾಟಕದ ಬಜೆಟ್ 3 ಲಕ್ಷದ 71,000 ರೂಪಾಯಿ ಕೋಟಿ ಆಗಿದ್ದು, ಇದರಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ಗಂತಲೇ 2-3 ಕೋಟಿ ಎತ್ತಿಡಿ," ಎಂದು ಸಲಹೆ ನೀಡಿದರು.
ಇತ್ತೀಚೆಗಷ್ಟೇ ನಟ ಸುದೀಪ್ ಮನೆ ಬಳಿ ಹೋದಾಗ ಜನರು ಮುತ್ತಿಗೆ ಹಾಕಿದ್ದರು. ಆದ್ದರಿಂದ ಸಮಸ್ಯೆ ಆಗಬಾರದೆಂದು ಪೊಲೀಸ್ ಕಮಿಷನರ್‌ಗೆ ಮಾಹಿತಿ ನೀಡಿದ್ದೇನೆ. ನಾನು ಒಬ್ಬ ಪಬ್ಲಿಕ್ ಪೊಲೀಸ್ ಪಬ್ಲಿಕ್ ಸರ್ವೆಂಟ್. ಆದ್ದರಿಂದ ಮಾಹಿತಿ ನೀಡಿದ್ದೇನೆ ಎಂದು ಲಾಯರ್ ಜಗದೀಶ್ ಅವರು ಪೊಲೀಸ್ ಕಮಿಷನರ್ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಕೂಡ ಸೆಕ್ಯೂರಿಟಿ ಬಗ್ಗೆ ಮಾಹಿತಿ ನೀಡಿದ್ದೇನೆ. ಸಿಎಂ ಸಿದ್ದರಾಮಯ್ಯರಿಗೂ ಕೂಡ ಮಾಹಿತಿ ನೀಡಿದ್ದೇನೆ. ನಾನು ಹೊರ ಜಿಲ್ಲೆಗಳಿಗೆ ಹೋಗುತ್ತಿರುತ್ತೇನೆ. ಏನಾದರೂ ಸಮಸ್ಯೆ ಆಗಬಹುದು, ಆದರಿಂದ ನನಗೆ ಭದ್ರತೆ ಬೇಕೆಂದು ಮನವಿ ಮಾಡುತ್ತಿಲ್ಲ, ಯಾವುದೇ ದೂರನ್ನು ನೀಡುತ್ತಿಲ್ಲ ಬದಲಾಗಿ ಮಾಹಿತಿ ನೀಡಿದ್ದೇನೆ ಎಂದಯ ಹೇಳಿದ್ದಾರೆ.












Click it and Unblock the Notifications