ಇದೇನಪ್ಪಾ ಇದು... ನಗು ಕಲಿಯೋಕೂ ಬಂತು ವಿಶ್ವವಿದ್ಯಾಲಯ
ಚಿಕ್ಕಬಳ್ಳಾಪುರ, ಮೇ 08: ನಗು ನಮ್ಮ ಆರೋಗ್ಯ ಕಾಪಾಡುತ್ತದೆ, ನಗುನಗುತಾ ಇರಬೇಕು ಎಂಬೆಲ್ಲ ಮಾತುಗಳು ಯಾವಾಗಲೂ ಕೇಳಿಬರುತ್ತಿರುತ್ತವೆ, ನಾವು ಹೇಳುತ್ತಿರುತ್ತೇವೆ. ಮೇ ತಿಂಗಳ ಮೊದಲ ಭಾನುವಾರವನ್ನು ನಗು ದಿನ ಎಂದು ಆಚರಣೆ ಮಾಡಿದ್ದು ಆಗಿದೆ.
ಆದರೆ ನಗುವಿಗಾಗಿ ವಿಶ್ವ ವಿದ್ಯಾಲಯವೊಂದನ್ನು ತೆರೆದರೆ ಹೇಗಿರಬಹುದು? ಹೌದು.. ಇಂಥ ಒಂದು ಚಿಂತನೆ ಇದಾಗಲೇ ಆರಂಭವಾಗಿದ್ದು ಮುಂಬೈ ಮೂಲದ ವೈದ್ಯ ಮದನ್ ಕಟಾರಿಯಾ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಗು ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇನ್ನು ಮೂರು ತಿಂಗಳಲ್ಲಿ ಈ ಬಗೆಯ ಕೆಲಸಗಳು ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.['ಮೋದಿ ಯೋಗ ದಿನಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ']

ನಗು ಮತ್ತು ಯೋಗ ಇಲ್ಲಿ ಜತೆಜತೆಯಾಗಿ ಸಾಗುತ್ತದೆ, ವಿಶ್ವವಿದ್ಯಾಲಯ ಶಾಲಾ, ಕಾಲೇಜುಗಳಲ್ಲಿ ಮತ್ತು ಖಾಸಗಿ ಕಂಪನಿಗಳಲ್ಲಿ ಸೆಮಿನಾರ್ ಗಳನ್ನು ಆಯೋಜಿಸಲಿದೆ. ಅಲ್ಲದೇ ವಿವಿ ವಿವಿಧ ಕೋರ್ಸ್ ಗಳಿಗೂ ಆಹ್ವಾನ ನೀಡಲಿದೆ ಎಂದು ತಿಳಿಸಿದ್ದಾರೆ.[ಬಯಲುಸೀಮೆಗೆ ಕುಡಿಯುವ ನೀರು ಕೊಡಿ ಸ್ವಾಮೀ!]
ನಿಮಗೆ ಈ ವಿವಿ ಯಾವ ಪದವಿ ನೀಡಬಹುದು ಎಂದು ಆಶ್ಚರ್ಯವಾಗಬಹುದು. ಇದಕ್ಕೆಲ್ಲ ಸದ್ಯವೇ ಉತ್ತರ ನೀಡಲಿದ್ದೇನೆ ಎಂದು 1995 ರಿಂದ ಯೋಗ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಮದನ್ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 18 ಎಕರೆ ಜಾಗವನ್ನು ತೆಗೆದುಕೊಳ್ಳಲು ತೀರ್ಮಾನ ಮಾಡಲಾಗಿದೆ. ಇದಕ್ಕೆ ಸರ್ಕಾರ ಮತ್ತು ಯುಜಿಸಿ ಸಹಕಾರವನ್ನು ಪಡೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.












Click it and Unblock the Notifications