ಮರಳು ಮಾಫಿಯಾ ಬೆದರಿಕೆ: ಅಧಿಕಾರಿ ಸ್ವಯಂನಿವೃತ್ತಿ

ಹಾಸನ, ಮೇ 9: ಮರಳು, ಲ್ಯಾಂಡ್, ಆಯಿಲ್ ಮಾಫಿಯಾ ದಂಧೆ ದೇಶದೆಲ್ಲಡೆ ಎಗ್ಗಿಲ್ಲದೇ ಸಾಗುತ್ತಿರುವ ಮಧ್ಯೆ, ಮರಳು ಮಾಫಿಯಾಗೆ ಬೆದರಿ ಅಧಿಕಾರಿಯೊಬ್ಬರು ಸ್ವಯಂ ನಿವೃತ್ತಿಗೆ ಮುಂದಾಗಿರುವ ಘಟನೆ ವರದಿಯಾಗಿದೆ.

ಹಾಸನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿಷ್ಟಾವಂತ ಅಧಿಕಾರಿ ದಿವಾಕರ್ ಮರಳು ಮಾಫಿಯಾ ಒಡ್ಡುತ್ತಿರುವ ಬೆದರಿಕೆಗೆ ಬೇಸತ್ತು ಸ್ವಯಂನಿವೃತ್ತಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

ಮರಳು ಮಾಫಿಯಾಕಾರರಿಗೆ ಸಿಂಹಸ್ವಪ್ನವಾಗಿದ್ದ ದಿವಾಕರ್, ಇದುವರೆಗೆ ಐವತ್ತಕ್ಕೂ ಹೆಚ್ಚು ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಿದ್ದರು. (ಮರಳು ಮಾಫಿಯಾ ಎಂದರೇನು, ಏನಿದರ ಮರ್ಮ)

Land mafia threaten, officer decided to quit in Hassan

ಇದರಿಂದ ಮಾಫಿಯಾ ಜಗತ್ತಿನಿಂದ ನಿರಂತರ ಜೀವ ಬೆದರಿಕೆ ಕರೆಗಳು ದಿವಾಕರ್ ಅವರಿಗೆ ಬರುತ್ತಿದ್ದವು. ಈ ಹಿನ್ನಲೆಯಲ್ಲಿ ಅವರು ಸ್ವಯಂ ನಿವೃತ್ತಿ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಕರ್ನಾಟಕದಲ್ಲಿ ಅವ್ಯಾಹತವಾಗಿ ಹಬ್ಬಿರುವ ಮರಳು ಮಾಫಿಯಾ ಜಾಲವನ್ನು ಹತ್ತಿಕ್ಕಲು ಐಎಎಸ್ ಅಧಿಕಾರಿ ಡಿಕೆ ರವಿ ಕಠಿಣ ಕ್ರಮಗಳನ್ನು ಕೈಗೊಂಡು ಎಲ್ಲರ ಗಮನ ಸೆಳೆದು, ದುರಂತ ಸಾವನ್ನಪ್ಪಿದ್ದು ನಮ್ಮ ಮುಂದಿದೆ.

ಉತ್ತರಪ್ರದೇಶದಲ್ಲಿ ದುರ್ಗಾಶಕ್ತಿ ನಾಗ್ ಪಾಲ್ ಅವರು ಮರಳು ಮಾಫಿಯಾ ವಿರುದ್ಧ ಸೆಣಸಿದ ಧೀರ ಅಧಿಕಾರಿಯಾಗಿದ್ದರು.

ಕರ್ನಾಟಕದ ಮಂಡ್ಯದಲ್ಲಿ ಡಿಸಿಪಿ ಕವಿತಾ ಹೂಗರ್ ಅವರನ್ನು ಕೊಲ್ಲಲು ಮರಳು ಮಾಫಿಯಾ ಯತ್ನಿಸಿ ವಿಫಲವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+