ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂ ಸ್ವಾಧೀನ ಕಾಯ್ದೆ : ತಿರುಗೇಟು ಕೊಡಲು ಬಿಜೆಪಿ ಸಿದ್ಧ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏ.4 : 2013ರ ಭೂ ಸ್ವಾಧೀನ ಮತ್ತು ಪುನರ್ವಸತಿ ಕಾಯಿದೆಗೆ ತಿದ್ದುಪಡಿ ತರಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿರುವ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಕಾರ್ಯಕರ್ತರು ಮತ್ತು ನಾಯಕರು ಗ್ರಾಮಗಳಿಗೆ ಭೇಟಿ ನೀಡಿ ಈ ಕಾಯ್ದೆ ಬಗ್ಗೆ ಜನರಿಗೆ ಮಾಹಿತಿ ನೀಡಲಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಕಾರ್ಯಕಾರಿಣಿ ಸಭೆಯ ಎರಡನೇ ದಿನವಾದ ಶನಿವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಕುರಿತು ಸಭೆಯಲ್ಲಿ ಮಾತನಾಡಿದರು. ಕಾಯ್ದೆ ಬಗ್ಗೆ ಜನರಿಗೆ ಮಾಹಿತಿ ನೀಡಿ ಪ್ರತಿಪಕ್ಷ ಕಾಂಗ್ರೆಸ್ ಈ ಬಗ್ಗೆ ಅಪಪ್ರಚಾರ ಮಾಡದಂತೆ ತಡೆಯಬೇಕು ಎಂದರು. [ಭೂ ಸ್ವಾಧೀನ ಕಾಯ್ದೆ ವಿರುದ್ಧ ಹೋರಾಟ]

Gadkari

ಪಕ್ಷ ಭೂ ಸ್ವಾಧೀನ ಕಾಯ್ದೆ ಬಗ್ಗೆ ಜನರಿಗೆ ಮಾಹಿತಿ ನೀಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಕಾರ್ಯಕರ್ತರು ಮತ್ತು ರಾಜ್ಯ ಮಟ್ಟದ ನಾಯಕರು ಪ್ರತಿ ಗ್ರಾಮಗಳಿಗೂ ಹೋಗಿ ಜನರಿಗೆ ಕಾಯ್ದೆ ಬಗ್ಗೆ ಮಾಹಿತಿ ನೀಡಲಿದ್ದಾರೆ. [ಮೋದಿಗೆ ಸದ್ಯದಲ್ಲೇ ಜನ ಪಾಠ ಕಲಿಸಲಿದ್ದಾರೆ]

ಪ್ರತಿಪಕ್ಷ ಕಾಂಗ್ರೆಸ್ ಭೂ ಸ್ವಾಧೀನ ಕಾಯ್ದೆಯ ಬಗ್ಗೆ ಅಪಪ್ರಚಾರವನ್ನು ಮಾಡುತ್ತಾ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಆದ್ದರಿಂದ ತಕ್ಷಣ ಕಾರ್ಯಕರ್ತರು ಈ ಬಗ್ಗೆ ಜನರಿಗೆ ಸರಿಯಾದ ಮಾಹಿತಿಯನ್ನು ತಲುಪಿಸಬೇಕು ಎಂದು ಗಡ್ಕರಿ ಹೇಳಿದರು. ['ಬಿಜೆಪಿ ತಪ್ಪು ಹುಡುಕುವ ಬದಲು ರಾಹುಲ್ ಗಾಂಧಿ ಹುಡುಕಿ']

ರೈತ ವಿರೋಧಿಯಲ್ಲ : ಭೂ ಸ್ವಾಧೀನ ಕಾಯ್ದೆ ಉದ್ಯಮಿಗಳ ಪರವಾಗಿದೆ. ಇದು ರೈತ ವಿರೋಧಿಯಾಗಿದೆ ಎಂಬ ತಪ್ಪು ಸಂದೇಶವನ್ನು ಪ್ರತಿಪಕ್ಷ ಜನರಿಗೆ ತಲುಪಿಸುತ್ತಿದೆ. ಆದ್ದರಿಂದ ರೈತರಿಗೆ ಈ ಕಾಯ್ದೆ ಹೇಗೆ ಸಹಾಯಕವಾಗುತ್ತದೆ ಎಂಬುದನ್ನು ತಿಳಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

Nitin Gadkari

ದೇಶಾದ್ಯಂತ ಸಮಾವೇಶಗಳು : ಪ್ರತಿರಾಜ್ಯ ಘಟಕಗಳು ಸಮಾವೇಶಗಳನ್ನು ಆಯೋಜಿಸುವ ಮೂಲಕ ಜನರಿಗೆ ಭೂ ಸ್ವಾಧ್ವೀನ ಕಾಯ್ದೆಯ ಬಗ್ಗೆ ಮಾಹಿತಿ ತಲುಪಿಸಲಿವೆ. ಏ.6ರಂದು ಮೊದಲ ಸಮಾವೇಶ ರಾಂಚಿಯಲ್ಲಿ ನಡೆಯಲಿದ್ದು, ನಂತರ ಪ್ರತಿ ರಾಜ್ಯದಲ್ಲಿ ಸಮಾವೇಶ ಆಯೋಜನೆ ಮಾಡಲಾಗುತ್ತದೆ.

English summary
The Land Bill by the Government clearly scores over the the version put out by the UPA, Nitin Gadkari, Union Minister said at the BJP’s National Executive Meet today at Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X