ಸಾರಿಗೆ ನೌಕರರ ಮುಷ್ಕರ ಕುರಿತು ಡಿಸಿಎಂ ಲಕ್ಷ್ಮಣ ಸವದಿ ವಿವಾದಿತ ಹೇಳಿಕೆ!

ಬೆಂಗಳೂರು, ಡಿ. 11: ಸಾರಿಗೆ ಇಲಾಖೆ ಸಿಬ್ಬಂದಿ ರೈತ ಸಂಘದ ಪ್ರಮುಖರ ಮಾತಿನಿಂದ ಉತ್ತೇಜಿತರಾಗಿ ಈ ರೀತಿ ಬಂದ್ ಮಾಡಿದ್ದಾರೆ ಎಂದ ವಿವಾದೀತ ಹೇಳಿಕೆಯನ್ನು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಸಾರಿಗೆ ನಿಗಮಗಳ ಸಂಘನೆಗಳೊಂದಿಗೆ ಸಭೆ ನಡೆಸುವುದಕ್ಕೂ ಸ್ವಲ್ಪ ಹೊತ್ತಿಗೆ ಮೊದಲು ಮಾತನಾಡಿದ ಲಕ್ಷ್ಮಣ ಸವದಿ ಅವರು, ಸಾರಿಗೆ ನಿಗಮಗಳ ನೌಕರರ ಮುಷ್ಕರಕ್ಕೆ ರೈತ ಸಂಘದ ನಾಯಕರು ಕಾರಣ ಎಂದಂತಾಗಿದೆ.

ಇಂದು ಮಧ್ಯಾಹ್ನ ಸಾರಿಗೆ ನಿಗಮಗಳ ಸಂಘಟನೆಗಳ ನಾಯಕರ ಸಭೆ ಕರೆಯಲಾಗಿದೆ. ಅವರ ಬೇಡಿಕೆಗಳ ಬಗ್ಗೆ ಸಹಾನುಭೂತಿಯಿಂದ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಿದ್ಧರಿದ್ದೇವೆ. ಕೋವಿಡ್ ಲಾಕ್‌ಡೌನ್‌ನಂತಹ ಸಂಕಷ್ಟ ಕಾಲದಲ್ಲೂ ನವೆಂಬರ್ ತಿಂಗಳವರೆಗಿನ ವೇತನ ಪಾವತಿಸಲಾಗಿದೆ. ನಿನ್ನೆಯೂ ಸಹ ಯೂನಿಯನ್ ಲೀಡರ್‌ಗಳನ್ನು ಮಾತುಕತೆಗೆ ಕರೆದಿದ್ದೆ. ಆದರೆ ಅವರು ಬರಲಿಲ್ಲ. ನಮ್ಮ ಸಾರಿಗೆ ನೌಕರರ ಯೂನಿಯನ್ ನಾಯಕರ ಬಗ್ಗೆ ವಿಶ್ವಾಸವಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಜತೆ ಬೇಡಿಕೆ ಈಡೇರಿಸುವ ಕುರಿತು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.

Lakshmana Savadi controversial statement farmers leaders behind bus strike

ಡಿಸಿಎಂ ಲಕ್ಷ್ಮಣ ಸವದಿ ಅವರು ರೈತ ನಾಯಕರೇ ಸಾರಿಗೆ ನೌಕರರ ಮುಷ್ಕರಕ್ಕೆ ರೈತ ಸಂಘದ ನಾಯಕರೇ ಕಾರಣ ಎಂಬ ಹೇಳಿಕೆ ಕುರಿತು ರೈತ ಸಂಘಟನೆಗಳು ಏನು ಪ್ರತಿಕ್ರಿಯೆ ಕೊಡುತ್ತವೆ ಎಂಬುದನ್ನು ಕಾಯ್ದ ನೋಡಬೇಕಿದೆ.

Lakshmana Savadi controversial statement farmers leaders behind bus strike

ಗೃಹ ಸಚಿವ ಬಸವರಾಜ್ ಬೊಮ್ಮಯಿ ಹೇಳಿಕೆ: ಇನ್ನು ಮುಷ್ಕರದ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಸಾರಿಗೆ ನೌಕರರ ವಿಷಯದಲ್ಲಿ ನಮಗೆ ಸಹಾನುಭೂತಿ ಇದೆ. ಆದರೆ ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಸಾರ್ವಜನಿಕರ ಹಿತದೃಷ್ಟಿಯಿಂದ ಗಮನ ಹರಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

Recommended Video

      ಇನ್ಮುಂದೆ ಓಟ್ ಮಾಡಲು ಯಾವುದೇ ಐಡಿ ಕಾರ್ಡ್ ಬೇಕಿಲ್ಲ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+