ತಮಿಳುಗರ ಹಲ್ಲೆ, ಚಿಕಿತ್ಸೆಗೆ ಹಣವಿಲ್ಲದೆ ಕಂಗಾಲಾದ ಕನ್ನಡಿಗ
ಕುಂದಾಪುರ, ಸೆ. 21 : ಕಾವೇರಿ ವಿಚಾರವಾಗಿ ರಾಮೇಶ್ವರಂನಲ್ಲಿ ಹಲ್ಲೆಗೀಡಾಗಿದ್ದ ಕನ್ನಡಿಗ ಮಂಜುನಾಥ್ ಕುಲಾಲ್ ಅವರಿಗೆ ಚಿಕಿತ್ಸೆಗೆ ಆರ್ಥಿಕ ನೆರವು ಬೇಕಿದೆ. ಕುಂದಾಪುರದ ಗಂಗೊಳ್ಳಿ ಮೂಲದ ಮಂಜುನಾಥ್ ಸೆ. 17 ಕ್ಕೆ ಪೊಲೀಸ್ ಬಂದೋಬಸ್ತ್ ನಲ್ಲಿ ಸುರಕ್ಷಿತವಾಗಿ ಮನೆ ಸೇರಿಕೊಂಡಿದ್ದರು.
ಆದರೆ ರಾಮೇಶ್ವರಂನಲ್ಲಿ ತಮಿಳಿಗರು ಮಾಡಿದ ಹಲ್ಲೆಯಲ್ಲಿ ಮಂಜುನಾಥ ಭುಜದ ಮೂಳೆ ಮುರಿದಿದೆ. ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಹಣದ ಕೊರತೆ ಎದುರಾಗಿದ್ದು ಸೆ.20 ರಂದು ಮಂಜುನಾಥ್ ಪೂರ್ಣ ಚಿಕಿತ್ಸೆ ಪಡೆಯದೆ ಆಸ್ಪತ್ರೆಯಿಂದ ಮನೆಗೆ ವಾಪಸ್ಸಾಗಿದ್ದಾನೆ.

ಆಸ್ಪತ್ರೆ ಖರ್ಚು, ಔಷಧಕ್ಕೆ ಸಾವಿರಾರು ರೂಪಾಯಿ ವೆಚ್ಚವಾಗಲಿದೆ. ಇದರಿಂದ ಚಿಕಿತ್ಸೆಗಾಗಿ ಹಣ ತೆಗೆದುಕೊಂಡು ಹತ್ತು ದಿನಗಳಲ್ಲಿ ಚಿಕಿತ್ಸೆಗಾಗಿ ಬರುವೆ ಎಂದು ಆಸ್ಟತ್ರೆಯಲ್ಲಿ ಹೇಳಿ ಬಂದಿದ್ದಾನೆ.
ಟೆಂಪೋ ಓಡಿಸಿ ಜೀವನ ಸಾಗಿಸುವ ಮಂಜುನಾಥ್ ಗೆ ಚಿಕಿತ್ಸೆಗೆ ಹಣವಿಲ್ಲದೆ ದಿಕ್ಕು ತೋಚದಂತಾಗಿದೆ. ಈ ಬಡ ಕನ್ನಡಿಗನ ಚಿಕಿತ್ಸೆಗೆ ಸಹಾಯ ಬೇಕಾಗಿದೆ.












Click it and Unblock the Notifications