ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ. 15 ರಂದು ಬಸವನಬಾಗೇವಾಡಿಯಿಂದ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಆರಂಭ

By Sachhidananda Acharya
|
Google Oneindia Kannada News

ಬೆಂಗಳೂರು, ಅಕ್ಟೋಬರ್ 20: ಮುಖ್ಯಮಂತ್ರಿಯಾಗಿದ್ದಾಗ ತಮಗೆ ಅತ್ಯಂತ ಜನಪ್ರಿಯತೆ ತಂದುಕೊಟ್ಟ ಗ್ರಾಮ ವಾಸ್ತವ್ಯಕ್ಕೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮತ್ತೆ ಮೊರೆ ಹೋಗಿದ್ದಾರೆ. ಆದರೆ ಈ ಬಾರಿಯ ಗ್ರಾಮ ವಾಸ್ತವ್ಯಕ್ಕೆ ಐಶಾರಾಮಿ ಬಸ್ ಸಾಥ್ ನೀಡಲಿದೆ ಎನ್ನುವುದೇ ವಿಶೇಷ.

ಕುಮಾರಸ್ವಾಮಿ ರಾಜ್ಯ ಪ್ರವಾಸಕ್ಕೆ ಹೈಟೆಕ್ ಬಸ್, ವಿಶೇಷತೆ ಏನು?ಕುಮಾರಸ್ವಾಮಿ ರಾಜ್ಯ ಪ್ರವಾಸಕ್ಕೆ ಹೈಟೆಕ್ ಬಸ್, ವಿಶೇಷತೆ ಏನು?

ಸದ್ಯ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡಿರುವ ಕುಮಾರಸ್ವಾಮಿ ನವೆಂಬರ್‌ 15 ರಿಂದ ತಮ್ಮ ಗ್ರಾಮ ವಾಸ್ತವ್ಯ ಆರಂಭಿಸಲಿದ್ದು, ಮೊದಲ ಗ್ರಾಮ ವಾಸ್ತವ್ಯ ಬಸವನಬಾಗೇವಾಡಿಯಲ್ಲಿ ನಡೆಯಲಿದೆ.

Kumaraswamy Village stay starts from Basavanabagewadi on Nov 15th

ಒಟ್ಟು 50 ವಿಧಾನಸಭಾ ಕ್ಷೇತ್ರಗಳ 62 ತಾಲೂಕುಗಳಲ್ಲಿ ತಲಾ ಒಂದೊಂದು ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಈ ವೇಳೆ ದಿನಕ್ಕೆ 20 ಗ್ರಾಮಗಳಿಗೆ ಭೇಟಿ ನೀಡುವ ಉದ್ದೇಶವನ್ನು ಕುಮಾರಸ್ವಾಮಿ ಹೊಂದಿದ್ದಾರೆ.

ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯಕ್ಕೆ ಅವರ ಅಗತ್ಯಕ್ಕೆ ತಕ್ಕಂತೆ 1 ಕೋಟಿ ರೂಪಾಯಿಯ ಐಷಾರಾಮಿ ಹೈಟೆಕ್‌ ವಾಹನ ಸಿದ್ಧಪಡಿಸಲಾಗುತ್ತಿದೆ. ಸಣ್ಣ ಮನೆಯಂತೆ ಈ ಬಸ್ ವಿನ್ಯಾಸ ಮಾಡಲಾಗಿದೆ. ಬೆಡ್ ರೂಮ್, ಚಿಕ್ಕ ಮೀಟಿಂಗ್ ಹಾಲ್, ಅಡುಗೆ ಮನೆ, ಶೌಚಾಲಯ, ಸ್ನಾನ ಗೃಹ, ಬಸ್ಸಿನಲ್ಲಿಯೇ ನಿಂತು ಭಾಷಣ ಮಾಡಲು ಅನುಕೂಲವಾಗುವಂತ ವಿನ್ಯಾಸ ಇದರಲ್ಲಿದೆ.

Kumaraswamy Village stay starts from Basavanabagewadi on Nov 15th

ಗ್ರಾಮ ವಾಸ್ತವ್ಯದ ಸಂದರ್ಭ ವೈದ್ಯರು, ಯೋಗ ತರಬೇತುದಾರರು ಹಾಗೂ ಅಡುಗೆಯವರು ಕುಮಾರಸ್ವಾಮಿ ಜತೆಗಿರಲಿದ್ದಾರೆ. ಆರೋಗ್ಯ ಸಮಸ್ಯೆಯ ಕಾರಣಕ್ಕೆ ಈ ಎಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ.

ಜುಲೈನಿಂದ ಬಸ್ ವಿನ್ಯಾಸ ಕಾರ್ಯ ಸೇಲಂನಲ್ಲಿ ನಡೆಯುತ್ತಿದೆ. ಪಕ್ಷದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮೋಹಿತ್ ಅಲ್ತಾಫ್ ನೇತೃತ್ವದಲ್ಲಿ ಬಸ್ ವಿನ್ಯಾಸ ಕಾರ್ಯ ನಡೆಯುತ್ತಿದೆ. ಅವರೇ ಇದನ್ನು ಕುಮಾರಸ್ವಾಮಿಯವರಿಗೆ ಕೊಡುಗೆಯಾಗಿ ನೀಡುತ್ತಿದ್ದಾರೆ.

English summary
JDS state president HD Kumaraswamy is recovering from heart surgery . He will begin his village stay on November 15th. The first village stay will be held at Basavanabavevadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X