ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯಗೆ ಎಚ್‌ಡಿಕೆ ಟಾಂಗ್, ಶಾಧಿ ಭಾಗ್ಯಕ್ಕೆ ಅನುದಾನ ಕಡಿತ

By Manjunatha
|
Google Oneindia Kannada News

ಬೆಂಗಳೂರು, ಆಗಸ್ಟ್ 09: ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ತೆರೆಮರೆ ಯುದ್ಧ ಮುಂದುವರೆದಿದೆ. ಕುಮಾರಸ್ವಾಮಿ ಆಡಳಿತದಲ್ಲಿ, ಸಿದ್ದರಾಮಯ್ಯ ಅವರ ಯೋಜನೆಗಳು ಒಂದೊಂದಾಗಿ ನೇಪಥ್ಯಕ್ಕೆ ಸರಿಯುತ್ತಿವೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಮುಸ್ಲಿಂ ಸಮುದಾಯಕ್ಕಾಗಿ ನೀಡಿದ್ದ ಶಾದಿ ಭಾಗ್ಯ ಯೋಜನೆಗೆ ಕುಮಾರಸ್ವಾಮಿ ಸರ್ಕಾರ ಅನುದಾನ ಕಡಿತ ಮಾಡಿದೆ. ಅಲ್ಪಸಂಖ್ಯಾತ ಸಮುದಾಯದ ಬಡ ಹೆಣ್ಣುಮಕ್ಕಳ ವಿವಾಹಕ್ಕಾಗಿ ಈ ಯೋಜನೆಯನ್ನು ಸಿದ್ದರಾಮಯ್ಯ ಜಾರಿಗೆ ತಂದಿದ್ದರು.

ಸಿದ್ದರಾಮಯ್ಯ, ಎಚ್‌ಡಿಕೆಗೆ ಪುಂಖಾನುಪುಂಖವಾಗಿ ಪತ್ರ ಬರೆಯಲು ಕಾರಣವೇನು? ಸಿದ್ದರಾಮಯ್ಯ, ಎಚ್‌ಡಿಕೆಗೆ ಪುಂಖಾನುಪುಂಖವಾಗಿ ಪತ್ರ ಬರೆಯಲು ಕಾರಣವೇನು?

ಸಿದ್ದರಾಮಯ್ಯ ಅವರು ತಮ್ಮ ಅಂತಿಮ ಬಜೆಟ್‌ನಲ್ಲಿ ಶಾದಿ ಭಾಗ್ಯ ಯೋಜನೆಗೆಂದು 120 ಕೋಟಿ ಹಣ ಮೀಸಲಿಟ್ಟಿದ್ದರು. ಆದರೆ ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ಕೇವಲ 55 ಕೋಟಿ ಮೀಸಲಿಡಲಾಗಿದೆ. ಇದು ಅತ್ಯಂತ ಕಡಿಮೆ ಮೊತ್ತವಾಗಿದ್ದು ಯೋಜನೆಯ ಫಲಾನುಭವಿಗಳು ಹೆಚ್ಚಿದ್ದಾರೆ.

ಯೋಜನೆಗೆ ಸಾವಿರಾರು ಅರ್ಜಿಗಳು ಬಂದಿವೆ

ಯೋಜನೆಗೆ ಸಾವಿರಾರು ಅರ್ಜಿಗಳು ಬಂದಿವೆ

ಯೋಜನೆಯ ಲಾಭಕ್ಕೆಂದು ಈಗಾಗಲೇ ಸಾವಿರಾರು ಅರ್ಜಿಗಳು ಬಂದಿದ್ದು, ಅವುಗಳಲ್ಲಿಯೇ 23,000ಕ್ಕೂ ಅಧಿಕ ಅರ್ಜಿಗಳು ವಿಲೇವಾರಿಯಾಗದೇ ಬಾಕಿ ಇವೆ. ಇನ್ನೂ 10000 ಹೊಸ ಅರ್ಜಿ ಸಲ್ಲಿಕೆಯಾಗುವ ಅಂದಾಜಿದೆ ಆದರೆ ಈ ಹಂತದಲ್ಲಿ ಅನುದಾನ ಕಡಿತ ಮಾಡಿರುವುದರಿಂದ ಯೋಗ್ಯ ಫಲಾನುಭವಿಗಳಿಗೆ ನಷ್ಟ ಉಂಟಾಗಲಿದೆ.

ಎಚ್ಡಿಕೆಗೆ ಮೈತ್ರಿ ಧರ್ಮ ಕಲಿಸುತ್ತೇನೆ ಎಂದು ಗುಡುಗಿದ ಸಿದ್ದರಾಮಯ್ಯ ಎಚ್ಡಿಕೆಗೆ ಮೈತ್ರಿ ಧರ್ಮ ಕಲಿಸುತ್ತೇನೆ ಎಂದು ಗುಡುಗಿದ ಸಿದ್ದರಾಮಯ್ಯ

ಬಜೆಟ್‌ಗೂ ಮುನ್ನಾ ಮನವಿ ಮಾಡಿದ್ದರು

ಬಜೆಟ್‌ಗೂ ಮುನ್ನಾ ಮನವಿ ಮಾಡಿದ್ದರು

ಬಜೆಟ್‌ಗೂ ಮುನ್ನಾ ಅಲ್ಪಸಂಖ್ಯಾತ ಸಮುದಾಯದವರು ಯೋಜನೆಯ ಅನುದಾನವನ್ನು ಕಡಿತ ಮಾಡದಂತೆ ಮನವಿ ಮಾಡಿದ್ದರು, ಆದರೂ ಮುಖ್ಯಮಂತ್ರಿಗಳು ಈ ಯೋಜನೆಗೆ ಅನುದಾನ ಕಡಿತ ಮಾಡಿದ್ದಾರೆ.

ಸಿಎಂ ಕುಮಾರಸ್ವಾಮಿಗೆ ಕಿರುಕುಳ ನೀಡುತ್ತಿರುವ ಕಾಂಗ್ರೆಸ್ ನಾಯಕರ್ಯಾರು?!ಸಿಎಂ ಕುಮಾರಸ್ವಾಮಿಗೆ ಕಿರುಕುಳ ನೀಡುತ್ತಿರುವ ಕಾಂಗ್ರೆಸ್ ನಾಯಕರ್ಯಾರು?!

ಅನ್ನಭಾಗ್ಯ ಕಡಿತಕ್ಕೆ ಚಿಂತಿಸಲಾಗಿತ್ತು

ಅನ್ನಭಾಗ್ಯ ಕಡಿತಕ್ಕೆ ಚಿಂತಿಸಲಾಗಿತ್ತು

ಈ ಮುಂಚೆ ಅನ್ನಭಾಗ್ಯ ಯೋಜನೆಯಲ್ಲಿ ವಿತರಿಸಲಾಗುವ ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡುವ ಬಗ್ಗೆ ಕುಮಾರಸ್ವಾಮಿ ಹೇಳಿದ್ದರು. ಆದರೆ ಸಾರ್ವಜನಿಕರಿಂದ ಮತ್ತು ಸ್ವತಃ ಸಿದ್ದರಾಮಯ್ಯ ಅವರಿಂದ ವಿರೋಧ ವ್ಯಕ್ತವಾಗಿದ್ದರಿಂದ ಯೋಚನೆ ಕೈಬಿಟ್ಟಿದ್ದರು.

ಇಂದಿಯಾ ಕ್ಯಾಂಟೀನ್‌ಗೂ ಅನುದಾನ ಕಡಿತ

ಇಂದಿಯಾ ಕ್ಯಾಂಟೀನ್‌ಗೂ ಅನುದಾನ ಕಡಿತ

ಇಂದಿರಾ ಕ್ಯಾಂಟೀನ್‌ಗೆ ಸಹ ಅನುದಾನವನ್ನು ಕಡಿತ ಮಾಡಿರುವ ಬಗ್ಗೆಯೂ ಕೇಳಿಬರುತ್ತಿದ್ದು, ಸರ್ಕಾರ ಇನ್ನೂ ಇಂದಿರಾ ಕ್ಯಾಂಟೀನ್‌ಗಳಿಗೆ ಅನುದಾನ ಬಿಡುಗಡೆಯನ್ನೂ ಮಾಡಿಲ್ಲ. ಇದೆಲ್ಲಾ ಸಿದ್ದರಾಮಯ್ಯ.

ಅಧಿಕಾರಿಗಳ ವರ್ಗಾವಣೆ

ಅಧಿಕಾರಿಗಳ ವರ್ಗಾವಣೆ

ಅಧಿಕಾರಿಗಳ ವರ್ಗಾವಣೆಯಲ್ಲಿಯಂತೂ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ಸರಿಯಾಗಿ ಟಾಂಗ್ ನೀಡುತ್ತಿದ್ದಾರೆ. ಇದೇ ವಿಷಯಕ್ಕೆ ಇಬ್ಬರ ನಡುವೆ ಮನಸ್ಥಾಪ ಏರ್ಪಟ್ಟಿದೆ. ಇದೇ ವಿಷಯ ಕುರಿತಂತೆ ಸಿದ್ದರಾಮಯ್ಯ ಅವರು ಹಲವು ಪತ್ರಗಳನ್ನೂ ಕುಮಾರಸ್ವಾಮಿಗೆ ಬರೆದಿದ್ದಾರೆ.

English summary
CM Kumaraswamy cut off the grant for Shadhi Bagya scheme. This is scheme was introduced by Siddaramaiah. then Cm Siddaramaiah allotted 120 crore for this scheme but in Kumaraswamy budget only 55 crore given to the scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X