ಚಳಿಗಾಲದ ವಿಶೇಷ ಪ್ಯಾಕೇಜ್ : ಗೋವಾ ಗೋಕರ್ಣ ಪ್ರವಾಸಕ್ಕೆ ತೆರಳಿ

ಬೆಂಗಳೂರು, ಸೆ18: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರಿಗೆ ರಾಜ್ಯ ಹಾಗೂ ಅಂತಾರಾಜ್ಯದ ವಿವಿಧ ಪ್ರವಾಸಿ ತಾಣಗಳಿಗೆ ವ್ಯವಸ್ಥಿತ ಪ್ರವಾಸಗಳನ್ನು ಏರ್ಪಡಿಸಿದ್ದು, ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.

ಈ ನಿಟ್ಟಿನಲ್ಲಿ ನಿಗಮವು ಮುಂಬರುವ ಋತುಮಾನ ದಿನಗಳಲ್ಲಿ ಅಂದರೆ ಅಕ್ಟೋಬರ್-ಜನವರಿ ತಿಂಗಳಲ್ಲಿ ಉತ್ತರ ಕರ್ನಾಟಕ ಪಾರಂಪರಿಕ ಸ್ಥಳಗಳಿಗೆ 05 ದಿನಗಳ ವ್ಯವಸ್ಥಿತ ಪ್ರವಾಸವನ್ನು ಆಯೋಜಿಸುತ್ತಿದೆ, ಈ ಪ್ರವಾಸವು ಪ್ರತಿ ಗುರುವಾರ ಆರಂಭವಾಗಿ ಸೋಮವಾರ ಬೆಳಿಗ್ಗೆ ಕೊನೆಗೊಳ್ಳುತ್ತದೆ. ಸದರಿ ಪ್ರವಾಸಕ್ಕೆ ಒಬ್ಬರಿಗೆ ರೂ.5170/- (ಸಾರಿಗೆ ಮತ್ತು ವಸತಿ ಸೌಲಭ್ಯ ಸೇರಿ) ಆಗಲಿದೆ.

ಸಮುದ್ರತೀರ ಪ್ರವಾಸವಾಗಿ ಗೋವಾ-ಗೋಕರ್ಣಕ್ಕೆ ಪ್ರವಾಸವನ್ನು ಅಯೋಜಿಸಲಿದ್ದು, ಇದು 05 ದಿನಗಳ ಪ್ರವಾಸವಾಗಿರುತ್ತದೆ. ಈ ಪ್ರವಾಸವು ಪ್ರತಿ ಗುರುವಾರ ಆರಂಭವಾಗಿ ಸೋಮವಾರ ಬೆಳಿಗ್ಗೆ ಕೊನೆಗೊಳ್ಳುತ್ತದೆ. ಸದರಿ ಪ್ರವಾಸಕ್ಕೆ ಒಬ್ಬರಿಗೆ ರೂ. 6599/- (ಸಾರಿಗೆ ಮತ್ತು ವಸತಿ ಸೌಲಭ್ಯ ಸೇರಿ) ಆಗಲಿದೆ.

KSTDC winter package tour: Goa- Gokarna Five days

ಈ ಪ್ರವಾಸಗಳನ್ನು ಎ.ಸಿ ಡಿಲಕ್ಸ್ ವಾಹನ ಸೌಲಭ್ಯದೊಂದಿಗೆ ಆಚರಿಸುತ್ತಿದ್ದು, ಮುಂಗಡ ಬುಕ್ಕಿಂಗ್ ವ್ಯವಸ್ಥೆಯನ್ನು ನಿಗಮದ ಬುಕ್ಕಿಂಗ್ ಕೌಂಟರ್ ಗಳು ಕೆ.ಎಸ್.ಆರ್.ಟಿ.ಸಿ ಅವತಾರ್ ಪೋರ್ಟಕ್ ಹಾಗೂ ರೆಡ್‍ಬಸ್ ಪೋರ್ಟಲ್ ಮುಖಾಂತರ ಮಾಡಲಾಗುತ್ತಿದೆ.

ಪ್ರವಾಸದ ಬುಕ್ಕಿಂಗ್‍ಗಾಗಿ ಯಶವಂತಪುರದಲ್ಲಿರುವ ಪ್ರಧಾನ ಬುಕ್ಕಿಂಗ್ ಕೇಂದ್ರವನ್ನು ಹಾಗೂ ಕೆಂಪೇಗೌಡ ಬಸ್‍ನಿಲ್ದಾಣದಲ್ಲಿನ ನಿಗಮದ ಕೌಂಟರನ್ನು ಸಂಪರ್ಕಿಸಬಹುದಾಗಿದೆ. ಅಲ್ಲದೆ, ನಿಗಮದ ಅಧಿಕೃತ ಏಜೆಂಟ್ ಮುಖಾಂತರ ಬುಕ್ಕಿಂಗ್ ಮಾಡಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ದೂರವಾಣಿಗಳನ್ನು ಸಂಪರ್ಕಿಸಬಹುದಾಗಿದೆ. ಆನ್‍ಲೈನ್ ಬುಕ್ಕಿಂಗ್ www.kstdc.comಗೆ ಭೇಟಿ ನೀಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+