ಬಸ್ ಸಂಚಾರ ಆರಂಭ; ಮೊದಲ ದಿನ ಸಂಚಾರ ನಡೆಸಿದವರೆಷ್ಟು?

ಬೆಂಗಳೂರು, ಮೇ 19 : ಕರ್ನಾಟಕ ಸರ್ಕಾರದ ಒಪ್ಪಿಗೆ ಬಳಿಕ ಸರ್ಕಾರಿ ಬಸ್ ಸಂಚಾರ ಮಂಗಳವಾರದಿಂದ ಆರಂಭವಾಗಿದೆ. ಒಂದೇ ದಿನ 53,476 ಜನರು ಬಸ್‌ಗಳಲ್ಲಿ ಸಂಚಾರ ನಡೆಸಿದ್ದಾರೆ ಎಂದು ಕೆಎಸ್ಆರ್‌ಟಿಸಿ ಹೇಳಿದೆ.

Recommended Video

      BMTC : ಬೆಂಗಳೂರಿನ ಸಂಚಾರಿ ಜೀವನಾಡಿ ಬಿಎಂಟಿಸಿ ಇಂದಿನಿಂದ ಆರಂಭ | Karnataka | Oneindia Kannada

      ಮಂಗಳವಾರ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಸಂಚಾರ ಆರಂಭವಾಗಿದೆ. ಸೋಮವಾರ 1500 ಬಸ್‌ ಸಂಚಾರ ನಡೆಸಲು ಕೆಎಸ್ಆರ್‌ಟಿಸಿ ಯೋಜನೆ ರೂಪಿಸಿತ್ತು. ಆದರೆ, ಮಂಗಳವಾರ 1606 ಬಸ್‌ಗಳು ಸಂಚಾರ ನಡೆಸಿವೆ.

      ಬೆಂಗಳೂರು ನಗರವೊಂದರಿಂದಲೇ 213 ಬಸ್‌ಗಳು ಸಂಚಾರ ನಡೆಸಿವೆ. 6 ಸಾವಿರ ಪ್ರಯಾಣಿಕರು ವಿವಿಧ ಸ್ಥಳಗಳಿಗೆ ತೆರಳಿದ್ದಾರೆ. ಬಸ್ ನಿಲ್ದಾಣದಲ್ಲಿ ಆಗುವ ದಟ್ಟಣೆ ತಪ್ಪಿಸಲು ಆನ್ ಲೈನ್ ಮೂಲಕ ಮೊದಲೇ ಟಿಕೆಟ್ ಬುಕ್ ಮಾಡಿ ಎಂದು ಕೆಎಸ್ಆರ್‌ಟಿಸಿ ಪ್ರಯಾಣಿಕರಿಗೆ ಮನವಿ ಮಾಡಿದೆ.

      20/5/2020ರಂದು ಸರ್ಕಾರಿ ಬಸ್‌ಗಳಲ್ಲಿ ಸಂಚಾರ ನಡೆಸಲು 3760 ಜನರು ಈಗಾಗಲೇ ಮುಂಗಡ ಟಿಕೆಟ್ ಬುಕ್ ಮಾಡಿದ್ದಾರೆ. ಬಸ್‌ಗಳಲ್ಲಿ ಸಂಚಾರ ನಡೆಸುವ ಜನರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಮಾಸ್ಕ್ ಧರಿಸದಿದ್ದರೆ ಬಸ್ ಹತ್ತಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

      ಸರ್ಕಾರಿ ಬಸ್ ಸಂಚಾರ ಆರಂಭ

      ಸರ್ಕಾರಿ ಬಸ್ ಸಂಚಾರ ಆರಂಭ

      ಕೆಎಸ್ಆರ್‌ಟಿಸಿ ಮಂಗಳವಾರ ಬೆಳಗ್ಗೆ 7ರಿಂದ ಸಂಜೆ 7ಗಂಟೆ ತನಕ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ 1606 ಬಸ್‌ಗಳ ಸಂಚಾರ ನಡೆಸಿದೆ. ಮೊದಲ ದಿನ 53,476 ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಬೆಂಗಳೂರು ನಗರದಿಂದ 600 ಸಾವಿರ ಪ್ರಯಾಣಿಕರು ಸಂಚರಿಸಿದ್ದಾರೆ.

      ಯಾವ-ಯಾವ ಜಿಲ್ಲೆಗೆ ಪ್ರಯಾಣ

      ಯಾವ-ಯಾವ ಜಿಲ್ಲೆಗೆ ಪ್ರಯಾಣ

      ಬೆಂಗಳೂರು ನಗರದಿಂದ ಮಂಗಳವಾರ 213 ಬಸ್‌ಗಳು ಸಂಚಾರ ನಡೆಸಿವೆ. ಶಿವಮೊಗ್ಗ, ಬೆಳಗಾವಿ, ರಾಯಚೂರು, ಬಳ್ಳಾರಿ, ಹೊಸಪೇಟೆ, ಮಂಗಳೂರು, ಚಿಕ್ಕಮಗಳೂರು, ಕಲಬುರಗಿ, ಬಾಗಲಕೋಟೆ, ಕೊಪ್ಪಳ, ಹುಬ್ಬಳ್ಳಿ, ಧಾರವಾಡ, ಶಿರಸಿ, ದಾವಣಗೆರೆಗೆ ಬಸ್‌ಗಳು ಸಂಚರಿಸಿವೆ.

      ಮುಂಗಡ ಟಿಕೆಟ್ ಬುಕ್ಕಿಂಗ್ ಮಾಹಿತಿ

      ಮುಂಗಡ ಟಿಕೆಟ್ ಬುಕ್ಕಿಂಗ್ ಮಾಹಿತಿ

      ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿ ಸಂಚಾರ ನಡೆಸಲು ಪ್ರಯಾಣಿಕರು ಆಸಕ್ತಿ ತೋರಿದ್ದಾರೆ. 19/5/2020ರಂದು 1992 ಮುಂಗಡ ಟಿಕೆಟ್ ಬುಕ್ ಆಗಿತ್ತು. 20/5/2020ಕ್ಕೆ 3760 ಟಿಕೆಟ್ ಬುಕ್ ಆಗಿದೆ ಎಂದು ಕೆಎಸ್ಆರ್‌ಟಿಸಿ ಹೇಳಿದೆ.

      ಎಲ್ಲಿಗೆ ಪ್ರಯಾಣ ಮಾಡಲು ಬುಕ್?

      ಎಲ್ಲಿಗೆ ಪ್ರಯಾಣ ಮಾಡಲು ಬುಕ್?

      ಬುಧವಾರ ಬೆಂಗಳೂರು ನಗರದಿಂದ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಬಳ್ಳಾರಿ, ಕುಂದಾಪುರ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಹೊಸಪೇಟೆ, ಹಾವೇರಿ, ಹರಪನಹಳ್ಳಿ, ಕೊಪ್ಪಳ, ಕಾರವಾರ, ಮಂಗಳೂರು, ಮಡಿಕೇರಿ, ಮೈಸೂರು, ರಾಯಚೂರು, ಶಿವಮೊಗ್ಗಕ್ಕೆ ಸಂಚಾರ ನಡೆಸಲು ಮುಂಗಡ ಟಿಕೆಟ್ ಬುಕ್ಕಿಂಗ್ ಆಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+