ಕೆಎಸ್ಆರ್‌ಟಿಸಿಗೆ 121 ಐರಾವತ ಕ್ಲಬ್ ಕ್ಲಾಸ್ ಬಸ್ಸುಗಳ ಸೇರ್ಪಡೆ

Posted By: Gururaj
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 14 : 121 ಕ್ಲಬ್ ಕ್ಲಾಸ್ ಐರಾವತ ಬಸ್ಸುಗಳು ಕೆಎಸ್ಆರ್‌ಟಿಸಿಗೆ ಡಿಸೆಂಬರ್ ವೇಳೆಗೆ ಹೊಸದಾಗಿ ಸೇರ್ಪಡೆಗೊಳ್ಳಲಿವೆ. ವೋಲ್ವೊ ಬಿ.ಎಸ್ 4 ಎಂಜಿನ್ ಬಸ್ ಸೇವೆ ಆರಂಭಿಸಿದ ಮೊದಲ ಸಾರ್ವಜನಿಕ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಕೆಎಸ್ಆರ್‌ಟಿಸಿ ಪಾತ್ರವಾಗಿದೆ.

'ಐರಾವತ ಡೈಮಂಡ್ ಕ್ಲಾಸ್ ಬಸ್' ಗಳಿಗೆ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್

ವಿಧಾನಸೌಧದ ಆವರಣದಲ್ಲಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 23 ಕ್ಲಬ್ ಕ್ಲಾಸ್ ಐರಾವತ ಬಸ್ಸುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಡಿಸೆಂಬರ್ ವೇಳೆಗೆ ಇನ್ನೂ 121 ಬಸ್ಸುಗಳು ಕೆಎಸ್ಆರ್‌ಟಿಸಿಗೆ ಸೇರ್ಪಡೆಯಾಗಲಿವೆ.

KSRTC to induct 121 new Volvo buses by December 2017

'23 ಬಸ್ಸುಗಳ ಪೈಕಿ ಬೆಂಗಳೂರು ಕೇಂದ್ರ ವಿಭಾಗ, ಮೈಸೂರು ವಿಭಾಗದಿಂದ 8 ಬಸ್ಸುಗಳು, ಮಂಗಳೂರು ವಿಭಾಗದಿಂದ 7 ಬಸ್ಸುಗಳು ಸಂಚಾರ ನಡೆಸಲಿವೆ' ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದ್ದಾರೆ.

'ರಾಮಲಿಂಗಾ ರೆಡ್ಡಿ ಅವರು ಸಾರಿಗೆ ಸಚಿವರಾಗಿದ್ದಾಗಲೇ 121 ಬಸ್ಸುಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಡಿಸೆಂಬರ್ ವೇಳೆಗೆ ಹೊಸ ಬಸ್ಸುಗಳು ಕೆಎಸ್ಆರ್‌ಟಿಯನ್ನು ಸೇರಿಕೊಳ್ಳಲಿವೆ' ಎಂದು ಸಚಿವರು ಮಾಹಿತಿ ನೀಡಿದರು.

KSRTC to induct 121 new Volvo buses by December 2017

ಬಸ್ಸುಗಳ ಮಾರ್ಗ : ಬುಧವಾರ ಸಂಚಾರ ಆರಂಭಿಸಿದ 23 ಬಸ್ಸುಗಳಲ್ಲಿ ಬೆಂಗಳೂರಿನಿಂದ ಕ್ಯಾಲಿಕಟ್, ಕೊಯಿಕ್ಕೋಡ್, ಚೆನ್ನೈ, ವಿಜಯವಾಡ, ಶ್ರೀಹರಿಕೋಟಾ, ಮಣಿಪಾಲ್ ಮತ್ತು ಮಂಗಳೂರಿಗೆ ಬಸ್ಸುಗಳು ಸಂಚಾರ ನಡೆಸಲಿವೆ.

ಮಂಗಳೂರು-ಮುಂಬೈ, ವಿರಾಜಪೇಟೆ-ಬೆಂಗಳೂರು, ಮಡಿಕೇರಿ-ಬೆಂಗಳೂರು, ಮೈಸೂರು-ಬೆಂಗಳೂರು ನಡುವೆ ಹೊಸ ಬಸ್ಸುಗಳು ಸಂಚಾರ ನಡೆಸಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka transport minister H.M.Revanna said, Karnataka State Road Transport Corporation (KSRTC) will induct 121 new Volvo buses by December, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ