KSRTC ಸಮರ: ಕೊನೆಗೂ ಕರ್ನಾಟಕಕ್ಕೆ ಗೆಲುವು, ಕೇರಳಕ್ಕೆ ಮುಖಭಂಗ: ಏನಿದು?- ಇಲ್ಲಿದೆ ವಿವರ
ಬೆಂಗಳೂರು, ಡಿಸೆಂಬರ್ 15: ಕರ್ನಾಟಕದ ಸಾರಿಗೆ (KSRTC) ಹೆಸರು ಬಳಕೆಯನ್ನು ಪ್ರಶ್ನಿಸಿ ಕೇರಳ ಆರ್‌ಟಿಸಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಇಂದು (ಡಿಸೆಂಬರ್ 15) ವಜಾ ಮಾಡಿದೆ. ಈ ಮೂಲಕ ಕರ್ನಾಟಕ ಕೆಎಸ್‌ಆರ್‌ಟಿಸಿಗೆ ಜಯ ಸಿಕ್ಕಿದ್ದು, ಕೇರಳಕ್ಕೆ ಭಾರೀ ಮುಖಭಂಗ ಆದಂತಾಗಿದೆ.
ಕರ್ನಾಟಕ ಹಾಗೂ ಕೇರಳ ಸಾರಿಗೆ ಬಸ್‌ಗಳ ಹೆಸರು ಕೆಎಸ್‌ಆರ್‌ಟಿಸಿ ಅಂತಾ ಇತ್ತು. ಅದಕ್ಕೆ ಈ ಹಸರು ಬದಲಾವಣೆ ಮಾಡಿಕೊಳ್ಳಲು ಕೇರಳ ಆಗಾಗಾ ಕರ್ನಾಟಕದ ವಿರುದ್ಧ ತರಾಟೆಗೆ ಬರುತ್ತಿತ್ತು. ಅಲ್ಲದೆ ಇದನ್ನು ಪ್ರಶ್ನಿಸಿ ತಕರಾರು ಕೂಡ ಸಲ್ಲಿಕೆ ಮಾಡಿದ್ದು, ಇದನ್ನು ಇಂದು ಮದ್ರಾಸ್ ಹೈಕೋರ್ಟ್ ವಜಾ ಮಾಡಿದೆ. ಇದರಿಂದ ಕೆಣಕಿದ ಕೇರಳ ಕೊನೆಗೂ ಮುಖಭಂಗಕ್ಕೆ ಒಳಗಾಗಿದೆ.

ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಚೆನ್ನೈನಲ್ಲಿರುವ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯ ಮುಂದೆ ಕೇರಳ ಸಾರಿಗೆ ನಿಗಮದಿಂದ ಪ್ರಶ್ನೆ ಮಾಡಲಾಗಿದೆ. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 42 ವರ್ಷಗಳಿಂದ ಕರ್ನಾಟಕ ರಸ್ತೆ ಸಾರಿಗೆ ನಿಮಗದಿಂದ ಟ್ರೇಡ್ ಮಾರ್ಕ್ ಅನ್ನು ಬಳಸುವುದರ ಬಗ್ಗೆ ತಿಳಿದಿರುತ್ತದೆ. ಆದ್ದರಿಂದ ಕೇರಳದ ಕೆಎಸ್‌ಆರ್‌ಟಿಸಿಯು ಪಡೆದಿರುವ ಟ್ರೇಡ್ ಮಾರ್ಕ್ ನೋಂದಣಿ ಅಮಾನ್ಯವಾಗಿದೆ ಎಂದು ಅರ್ಜಿ ಸಲ್ಲಿಸಲು ನೀವು ಅರ್ಹರಾಗಿರುವುದಿಲ್ಲ ಎಂದು ಕರ್ನಾಟಕ ಕೆಎಸ್‌ಆರ್‌ಟಿಸಿ ವಾದ ಮಾಡಿದೆ.
ಕರ್ನಾಟಕ ಪಡೆದಿರುವ ಕೆಎಸ್‌ಆರ್‌ಟಿಸಿ ಟ್ರೇಡ್ ಮಾರ್ಕ್ ನೋಂದಣಿ ಅಮಾನ್ಯವಾಗಿದೆ. ಹೀಗಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ ಎಂದು ಕೇರಳ RTC ವಾದಿಸಿತ್ತು. ಕೆಎಸ್‌ಆರ್‌ಟಿಸಿ, ಕೇರಳ ಆರ್‌ಟಿಸಿ ವಾದ ಆಲಿಸಿದ ಕೋರ್ಟ್ ಕೇರಳ ಸಾರಿಗೆ ಸಂಸ್ಥೆ ಅರ್ಜಿ ವಜಾ ಮಾಡಿದೆ. ಕೇರಳ KRTC ಕೂಡ 2019ರಲ್ಲಿ KSRTCಗೂ ಹಿಂದಿನಿಂದ ಸಂಕ್ಷಿಪ್ತ ಹೆಸರನ್ನು ಬಳಸುತ್ತಿರುವ ಕುರಿತು ನೋಂದಣಿಯನ್ನು ಪಡೆದುಕೊಂಡಿದೆ.
ನಂತರ ಕೇಂದ್ರ ಸರ್ಕಾರವು ಐಪಿಎಬಿಯನ್ನು ರದ್ದುಗೊಳಿಸಿದ್ದು, ಐಪಿಎಬಿ ಮುಂದೆ ಬಾಕಿ ಉಳಿದಿದ್ದ ಪ್ರಕರಣಗಳನ್ನು ಚೆನ್ನೈನಲ್ಲಿರುವ ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಈ ಪ್ರಕರಣ ಡಿಸೆಂಬರ್ 12ರಂದು ಮದ್ರಾಸ್ ಹೈಕೋರ್ಟ್ ಮುಂದೆ ಬಂದಿದ್ದು, ಇದೀಗ ಕೇರಳ RTC ಸಲ್ಲಿಸಿದ ಅರ್ಜಿಗಳನ್ನು ಹೈಕೋರ್ಟ್ ವಜಾ ಮಾಡಿದೆ ಎಂದು ತಿಳಿದುಬಂದಿದೆ.
ಪ್ರಕರಣದ ಹಿನ್ನೆಲೆ
ಕರ್ನಾಟಕ ಕೆಎಸ್ಆರ್‌ಟಿಸಿ ಎಂದು ಸಂಕ್ಷಿಪ್ತ ಬಳಕೆಗಾಗಿ ಟ್ರೇಡ್ ಮಾರ್ಕ್ ಪ್ರಮಾಣ ಪತ್ರವನ್ನು ನೀಡಲು ಅರ್ಜಿ ಸಲ್ಲಿಸಿ ಭಾರತ ಸರ್ಕಾರದ ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಿಂದ 201 ರಲ್ಲಿ ಟ್ರೇಡ್ ಮಾರ್ಕ್ ಪ್ರಮಾಣಪತ್ರವನ್ನು ಪಡೆದುಕೊಂಡಿತ್ತು. ಸಂಸ್ಥೆಯು 1.11.1973 ಯಿಂದ ಬಳಸುತ್ತಿರುವುದನ್ನು ಮಂಜೂರು ಮಾಡಲಾಗಿರುತ್ತದೆ.
ಭಾರತ ಸರ್ಕಾರದ ರಿಜಿಸ್ಟ್ರಾರ್ ಆಫ್ ಕಾಪಿ ರೈಟ್ಸ್ ಅವರಿಂದ KSRTC ಲೋಗೋ ಮತ್ತು ಗಂಡಭೇರುಂಡ ಗುರುತು ಬಳಕೆಗಾಗಿ ಕಾಪಿ ರೈಟ್ ಅನ್ನು ಸಹ ಪಡೆಯಲಾಗಿರುತ್ತದೆ. ಆದರೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಚೆನ್ನೈನಲ್ಲಿರುವ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿ ಇದನ್ನು ಪ್ರಶ್ನಿಸಿತ್ತು. ಆದರೆ ಕೊನೆಗೂ ಇದು ತಲೆಕೆಳಗಾಗಿ ಕೇರಳಕ್ಕೆ ತೀವ್ರ ಮುಖಭಂಗ ಆಗಿದೆ.
ಒಟ್ಟಿನಲ್ಲಿ ರಾಜ್ಯಕ್ಕೆ ಒಂದು ಕಡೆಯಿಂದ ತಮಿಳುನಾಡು ಕಾವೇರಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿದ್ದರೆ, ಮತ್ತೊಂದೆಡೆ ಕೇರಳ ನಮ್ಮ ಕರುನಾಡ ಸಾರಿಗೆಯ KSRTC ಹೆಸರನ್ನು ಬದಲಾಯಿಸುವಂತೆ ತಕರಾರು ತೆಗೆಯುತ್ತಲೇ ಇತ್ತು. ಆದರೆ ಇಂದು ಮದ್ರಾಸ್ ಹೈಕೋರ್ಟ್ ಕೇರಳ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ತಿರಸ್ಕರಿಸುವ ಮೂಲಕ ಈ ಸಮಸ್ಯೆಗೆ ಫುಲ್‌ಸ್ಟಾಪ್ ಇಟ್ಟಿದೆ.












Click it and Unblock the Notifications