KSRTC ನಿಗಮಕ್ಕೆ ಸೇರ್ಪಡೆಯಾಗಿವೆ ವಿಶೇಷ ಟ್ರಕ್‌ಗಳು, ಡಿಸೆಂಬರ್‌ನಲ್ಲಿ ಕಾರ್ಯಾಚರಣೆ- ವೈಶಿಷ್ಟ್ಯಗಳೇನು ತಿಳಿಯಿರಿ.
ಬೆಂಗಳೂರು, ನವೆಂಬರ್ 15: ಕರ್ನಾಟಕದ ಜನರ ಪ್ರೀತಿ-ವಿಶ್ವಾಸಕ್ಕೆ ಪಾತ್ರವಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಹುದಿನಗಳ ಯೋಜನೆಯೊಂದು ಸಾಕಾರಗೊಳ್ಳುವ ಕಾಲ ಹತ್ತಿರವಾಗಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುವ ಜೊತೆಗೆ ನಿಗಮದ ಆದಾಯವೂ ಹೆಚ್ಚಾಗಲಿದೆ.
ಹೌದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯು ಆಕರ್ಷಕ ವಿನ್ಯಾಸದ ಸುಮಾರು 20 ಲಾರಿಗಳನ್ನು (ಟ್ರಕ್) ನಿಗಮಕ್ಕೆ ಸೇರಿಸಿಕೊಂಡಿದೆ. ಈ ಪ್ರಕ್ರಿಯೆ ಭಾಗವಾಗಿ ಈಗಾಗಲೇ ಟ್ರಕ್ ಗಳನ್ನು ಖರಿಸಿದಿರುವ ಸಂಸ್ಥೆ ಡಿಸೆಂಬರ್ ಮೊದಲ ಎರಡು ವಾರದೊಳಗಾಗಿ ಅವುಗಳ ಕಾರ್ಯಾಚರಣೆ ಮಾಡಲು ನೀರ್ಧರಿಸಿದೆ ಎಂದು 'ಪ್ರಜಾವಾಣಿ' ವರದಿ ಮಾಡಿದೆ.

KSRTC ಸಂಸ್ಥೆ ಪಾರ್ಸೆಲ್‌ಗಳಿಗಾಗಿ ಈ ಟ್ರಕ್‌ಗಳನ್ನು ಖರೀದಿಸಿದೆ. ದಶಕಗಳ ಹಿಂದೆ ಟ್ರಕ್‌ಗಳ ಮೂಲಕ ಪಾರ್ಸೆಲ್ ಒಯ್ಯುವ ಚಿಂತನೆ ಮಾಡಿದ್ದ ಸಂಸ್ಥೆಯು ಅದನ್ನು ಕಾರ್ಯರೂಪಕ್ಕೆ ತಂದಿರಲಿಲ್ಲ. ಸದ್ಯ ಗುರಿಯಂತೆ ಟ್ರಕ್‌ಗಳನ್ನು ಖರೀದಿಸಿ ಪಾರ್ಸೆಲ್ ತಲುಪಿಸುವ ಮೂಲಕ ಅಧಿಕ ಆದಾಯ ಗಳಿಕೆಗೆ ಮುಂದಾಗಿದೆ.
ಖಾಸಗಿ ಜತೆ ಕೆಎಸ್‌ಆರ್‌ಟಿಸಿ ಒಪ್ಪಂದ: ಕೋಟಿ ಆದಾಯ
ಪಾರ್ಸೆಲ್ ಕೊಂಡ್ಯೋಯ್ಯುವ ವ್ಯವಸ್ಥೆ ಸದ್ಯ ಕೆಎಸ್‌ಆರ್‌ಸಿ ಬಸ್‌ಗಳಲ್ಲಿ ಇದೆ. ಆರಂಭಿಕ ಹಂತದಲ್ಲಿ 100ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಪಾರ್ಸೆಲ್ ಸೇವೆ ಆರಂಭಿಸಿದ್ದ ಸಂಸ್ಥೆ ನಂತರ ಅವುಗಳನ್ನು ತನ್ನೆಲ್ಲ ಬಸ್ ನಿಲ್ದಾಣಗಳಿಗೆ ವಿಸ್ತರಿಸಿದೆ. ಬಸ್ ಡಿಕ್ಕಿಗಳಲ್ಲಿ ಪಾರ್ಸೆಲ್ ಒಯ್ಯುವ ಸೇವೆಯಿಂದ ವಾರ್ಷಿಕವಾಗಿ ಸುಮಾರು 04 ಕೋಟಿ ಆದಾಯ ಸಂಸ್ಥೆ ಗಳಿಸುತ್ತಿದೆ.

ಸಂಸ್ಥೆ ಖಾಸಗಿ ಏಜೆನ್ಸಿಗಳ ಜೊತೆಗೆ ಕಾರ್ಗೊ ಸೇವೆ ಕುರಿತು ಒಡಂಬಡಿಕೆ ಮಾಡಿಕೊಂಡಿದೆ. ಇದರಿಂದ ಒಟ್ಟು ಆದಾಯದಲ್ಲಿ ಶೇಕಡಾ 80ರಷ್ಟು (ತಿಂಗಳಿಗೆ 1ಕೋಟಿಗೆ ಹೆಚ್ಚು) ಆದಾಯ ಬರುತ್ತಿದೆ. ಬಸ್‌ಗಳು ಒಂದೆಡೆಯಿಂದ ಮತ್ತೊಂದೆಡೆ ಪಾರ್ಸೆಲ್ ಒಯ್ದರೆ ನಿಲ್ದಾಣಗಳಿಗೆ ಬಂದು ಅವುಗಳನ್ನು ತೆಗೆದುಕೊಂಡು ಹೋಗಬೇಕಾದ ವ್ಯವಸ್ಥೆ ಇದೆ.
ಉದ್ದೇಶಿತ ಪಾರ್ಸೆಲ್ ಟ್ರಕ್‌ಗಳ ಸೇವೆ ಆರಂಭವಾದರೆ ನಿಗದಿತ ಸ್ಥಳಗಳವರೆಗೂ ಈ ನೂತನ ಟ್ರಕ್‌ಗಳು ಸೇವೆ ನೀಡುತ್ತವೆ. ಇದರಿಂದ ಸಾರ್ವಜನಿಕರಿಗೆ ಇನ್ನಷ್ಟು ಅನುಕೂಲವಾಗಿದೆ. ಈ ವ್ಯವಸ್ಥಿತ, ಸುಧಾರಿತ ಸೇವೆಯಿಂದ ನಿಗಮಕ್ಕೆ ಸದ್ಯಕ್ಕಿಂತಲೂ ಹತ್ತು ಪಟ್ಟು ಹೆಚ್ಚು ಆದಾಯ ಬರುತ್ತದೆ.
ಪಾರ್ಸೆಲ್ ಸೇವೆ ವಿಸ್ತರಣೆ ಗುರಿ
KSRTC ಯು ಹಾಲಿ ತನ್ನ 800 ಬಸ್‌ಗಳಲ್ಲಿ ಪಾರ್ಸೆಲ್ ಸೇವೆ ಒದಗಿಸುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು 4000 ಬಸ್‌ಗೆ ವಿಸ್ತರಣೆ ಮಾಡುವ ಗುರಿ ಇಟ್ಟುಕೊಂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ 20 ಟ್ರಕ್‌ಗಳನ್ನು ಪಾರ್ಸೆಲ್ ಸೇವೆಗೆ ಡಿಸೆಂಬರ್ 15ರಂದು ನಿಯೋಜಿಸಲಿದೆ. ಎಲ್ಲವು ಅಂದುಕೊಂಡಂತಾಗಿ ಉತ್ತಮ ಸ್ಪಂದನೆ ವ್ಯಕ್ತವಾದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಲಾರಿಗಳನ್ನು ಖರೀದಿಸಲಾಗುವುದು ಎಂದು ನಿಗಮದ ವ್ಯವಸ್ಥಾಪಕ ಅನ್ಬುಕುಮಾರ್ ತಿಳಿಸಿದರು.
ಈ ಪಾರ್ಸೆಲ್ ಸೇವೆಯಲ್ಲಿ ಕೃಷಿ ಟೆಕ್ಸ್‌ಟೈಲ್ಸ್, ಆಟೋ ಮೊಬೈಲ್‌ಗೆ ಬೇಡಿಕೆ ಇದ್ದೇ ಇದೆ. ಅವರಿಗೆ ಭಾರಿ ವಾಹನಗಳು ಬೇಕಾಗಿಲ್ಲ. ಬದಲಾಗಿ ಸುಮಾರು 6 ಟನ್‌ನಷ್ಟು ಪಾರ್ಸೆಲ್ ಒಯ್ಯುವ ವಾಹನಗಳು ಬೇಕಿವೆ. ಹೀಗಾಗಿಯೇ ನಾವು ಈ ಹಿಂದೆ ಯೋಚಿಸಿದ್ದ ಟ್ರಕ್ ಖರೀದಿ, ಸೇವೆನಯನ್ನು ಇದೀಗ ಕಾರ್ಯರೂಪಕ್ಕೆ ತಂದಿದೆ. ಒಂದೇ ಸ್ಥಳದಲ್ಲಿ ಹೆಚ್ಚು ಪಾರ್ಸೆಲ್‌ಗಳು ಬರುವಂತಿದ್ದರೆ ಅಲ್ಲಿ ಹೆಚ್ಚು ಬಸ್‌ಗಳ ನಿಯೋಜಿಸುತ್ತೇವೆ. ಬೇಡಿಕೆ ಆಧಾರದಲ್ಲಿ ಲಾರಿ ಸಂಖ್ಯೆ ಹೆಚ್ಚಿಸುತ್ತೇವೆ ಎಂದರು.












Click it and Unblock the Notifications