• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೀಪಾವಳಿಗೆ ಕೆಎಸ್‌ಆರ್‌ಟಿಸಿ ಇಂದ 1500 ಹೆಚ್ಚುವರಿ ಬಸ್‌

|

ಬೆಂಗಳೂರು, ನವೆಂಬರ್ 01: ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ರಾಜ್ಯದ ವಿವಿದ ಜಿಲ್ಲೆಗಳಿಗೆ ಕೆಎಸ್‌ಆರ್‌ಟಿಸಿಯು 1500 ಹೆಚ್ಚುವರಿ ಬಸ್‌ಗಳ ಸೇವೆ ಕಲ್ಪಿಸಿದೆ.

ನವೆಂಬರ್ 2 ರಿಂದಲೇ 1500 ಹೆಚ್ಚುವರಿ ಬಸ್‌ಗಳು ಕರಾವಳಿ, ಉತ್ತರ ಕರ್ನಾಟಕ ಸೇರಿ ಹೊರ ರಾಜ್ಯಗಳಿಗೂ ಸಂಚಾರ ಪ್ರಾರಂಭಿಸಿವೆ. ಹಬ್ಬದ ಸಮಯದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಆಯುಧ ಪೂಜೆಗೆ ಬಸ್ ಅಲಂಕಾರಕ್ಕೆ ಹಣನೀಡುವಲ್ಲಿ ಸಾರಿಗೆ ಇಲಾಖೆ ಜಿಪುಣತನ

ಕೆಂಪೇಗೌಡ ಬಸ್ ನಿಲ್ದಾಣದಿಂದ ಶಿವಮೊಗ್ಗ, ಹಾಸನ, ಮಂಗಳೂರು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಕುಂದಾಪುರ, ಹೊರನಾಡು, ಬೆಳಗಾವಿ, ವಿಜಯಪುರ, ರಾಯಚೂರು, ದಾವಣಗೆರೆ, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ಹುಬ್ಬಳ್ಳಿ, ಧಾರವಾಡ, ಗೋಕರ್ಣ, ಶಿರಸಿ, ಕಾರವಾರ, ತಿರುಪತಿ ಮೊದಲಾದ ಸ್ಥಳಗಳಿಗೆ ಹೆಚ್ಚುವರಿ ಬಸ್ ಸೇವೆ ಕಲ್ಪಿಸಲಾಗಿದೆ.

ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆಗೆ ಹಾಗೂ ಶಾಂತಿನಗರದ ಕೇಂದ್ರ ಘಟಕ 2 ಮತ್ತು 4ರ ಮುಂಭಾಗದಿಂದ ತಮಿಳುನಾಡು ಮತ್ತು ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ವಿವಿಧ ಸ್ಥಳಗಳಿಗೆ ಬಸ್‌ಗಳು ಸಂಚರಿಸಲಿವೆ.

ಶರನ್ನವರಾತ್ರಿಯ 21ನೇ ದಿನಕ್ಕೇ ದೀಪಾವಳಿ; ಏನಿದು ರಾಮಾಯಣ ನಂಟು?

ಹಬ್ಬಗಳ ಸಮಯದಲ್ಲಿ ಸ್ವಂತ ಊರಿಗೆ ಹೋಗುವ ಪ್ರಯಾಣಿಕರು ಅತಿ ಹೆಚ್ಚು ಇರುವ ಕಾರಣ ಪ್ರಯಾಣಿಕರು ಪರದಾಡದಂತೆ ಕೆಎಸ್‌ಆರ್‌ಟಿಸಿಯು ಪ್ರತಿ ಹಬ್ಬದ ಸಮಯದಲ್ಲಿ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸುತ್ತದೆ.

English summary
KSRTC deploying 1500 buses to Karnataka's different districts from Bengaluru for Diwali season. These buses will travel to main cities of Karnataka some will travel to interstate also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X