2ನೇ ಹಂತದ ಲಾಕ್ ಡೌನ್; ಕೆಎಸ್ಆರ್‌ಟಿಸಿ ಬುಕ್ಕಿಂಗ್ ರದ್ದು

ನವದೆಹಲಿ, ಏಪ್ರಿಲ್ 12 : ಕರ್ನಾಟಕದಲ್ಲಿ ಲಾಕ್ ಡೌನ್ ವಿಸ್ತರಣೆಯಾಗುವ ಸುಳಿವು ಸಿಕ್ಕಿದೆ. ಏಪ್ರಿಲ್ 30ರ ತನಕ ಸರ್ಕಾರಿ ಬಸ್‌ಗಳ ಸಂಚಾರ ಇರುವುದಿಲ್ಲ. ಏಪ್ರಿಲ್ 14ರ ಬಳಿಕ ಬುಕ್ ಅಗಿದ್ದ ಎಲ್ಲಾ ಟಿಕೆಟ್‌ಗಳನ್ನು ಕೆಎಸ್ಆರ್‌ಟಿಸಿ ರದ್ದುಗೊಳಿಸಿದೆ.

ಕೊರೊನಾ ಹರಡದಂತೆ ತಡೆಯಲು ಏಪ್ರಿಲ್ 30ರ ತನಕ ಲಾಕ್ ಡೌನ್ ವಿಸ್ತರಣೆ ಮಾಡುವುದು ಅನಿವಾರ್ಯ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ. ಈಗ ಕೆಎಸ್ಆರ್‌ಟಿಸಿ ಮುಂಗಡವಾಗಿ ಬುಕ್ ಆಗಿದ್ದ ಟಿಕೆಟ್ ರದ್ದು ಮಾಡಿದೆ.

ಏಪ್ರಿಲ್ 14ರ ಬಳಿಕ ಲಾಕ್ ಡೌನ್ ತೆರವಾಗಲಿದೆ ಎಂಬ ಅಂದಾಜಿನಲ್ಲಿ 5222ಕ್ಕೂ ಅಧಿಕ ಟಿಕೆಟ್ ಬುಕ್ ಅಗಿದ್ದವು. ಏಪ್ರಿಲ್ 15ರ ಒಂದೇ ದಿನ ವಿವಿಧ ಪ್ರದೇಶಗಳಿಗೆ ತೆರಳಲು 4600 ಟಿಕೆಟ್ ಬುಕ್ ಮಾಡಲಾಗಿತ್ತು.

KSRTC Cancelled All Advanced Ticket Bookings

ಈಗ ಲಾಕ್ ಡೌನ್ ವಿಸ್ತರಣೆ ಆಗುವುದರಿಂದ ಎಲ್ಲಾ ಟಿಕೆಟ್‌ಗಳನ್ನು ರದ್ದುಗೊಳಿಸಲಾಗುತ್ತಿದೆ. ಟಿಕೆಟ್ ಬುಕ್ ಮಾಡಿದರಿಗೆ ಹಣವನ್ನು ವಾಪಸ್ ಮಾಡುವ ಪ್ರಕ್ರಿಯೆಗೆ ಕೆಎಸ್ಆರ್‌ಟಿಸಿ ಚಾಲನೆ ನೀಡಿದೆ.

ಈ ಕುರಿತು ಭಾನುವಾರ ಕೆಎಸ್ಆರ್‌ಟಿಸಿ ಫೇಸ್ ಬುಕ್‌ ಪೋಸ್ಟ್ ಹಾಕಿದೆ. 'ಕೆ. ಎಸ್. ಆರ್‌. ಟಿ. ಸಿ ಮುಂಗಡ ಕಾಯ್ದಿರಿಸುವ ಟಿಕೆಟ್ ಬುಕ್ಕಿಂಗ್ ಅನ್ನು ಮುಂದಿನ ಆದೇಶದ ತನಕ ರದ್ದುಗೊಳಿಸಲಾಗಿದೆ. ಬುಕ್ಕಿಂಗ್ ಆಗಿರುವ ಎಲ್ಲಾ ಟಿಕೆಟ್‌ಗಳನ್ನು ರದ್ದುಗೊಳಿಸಿ ಹಣ ವಾಪಸ್ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ' ಎಂದು ತಿಳಿಸಲಾಗಿದೆ.

ಲಾಕ್ ಡೌನ್ ಹಿನ್ನಲೆಯಲ್ಲಿ ಎಲ್ಲಾ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದು ಕೆಎಸ್ಆರ್‌ಟಿಸಿಗೆ ಸುಮಾರು 182 ಕೋಟಿ ನಷ್ಟವಾಗಿದೆ. ಏಪ್ರಿಲ್ 30ರ ತನಕ ಲಾಕ್ ಡೌನ್ ಮುಂದುವರೆದರೆ ಸಂಸ್ಥೆಗೆ ಮತ್ತಷ್ಟು ನಷ್ಟವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+