ಕರಕುಶಲ ಅಭಿವೃವೃದ್ಧಿ ನಿಗಮಕ್ಕೆ ಹೊಸ 'ರೂಪ': ಒಂದೇ ವರ್ಷದಲ್ಲಿ 7 ಕೋಟಿ ವಹಿವಾಟು ಹೆಚ್ಚಳ!
ಬೆಂಗಳೂರು, ಜೂ. 02: ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಕೈಗೊಂಡ ದಿಟ್ಟ ನಿರ್ಧಾರಗಳಿಂದ ಅಕ್ರಮದ ಕೂಪವಾಗಿದ್ದ ಕರ್ನಾಟಕ ಕರಕುಶಲ ನಿಗಮವು ಒಂದೇ ವರ್ಷದಲ್ಲಿ ಶೇ. 41 ರಷ್ಟು ಪ್ರಗತಿ ಸಾಧಿಸಿದೆ. ಒಂದು ವರ್ಷದಲ್ಲಿ ಬರೋಬ್ಬರಿ ಏಳು ಕೋಟಿ ರೂ. ವಹಿವಾಟು ವೃದ್ಧಿಯಾಗಿದೆ.
ಕರಕುಶಲ ನಿಗಮದ ಅಧ್ಯಕ್ಷ ಬೇಳೂರ ರಾಘವೇಂದ್ರ ಶೆಟ್ಟಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ ಅವರ ಆರೋಪ ಮತ್ತು ಪ್ರತ್ಯಾರೋಪ ದೂರುಗಳು ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಗಳ ತಲುಪಿವೆ. ಈ ಹಿನ್ನೆಲೆಯಲ್ಲಿ ನಿಗಮವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಕೈಗೊಂಡಿರುವ ನಿರ್ಧಾರಗಳು ಮತ್ತು ನಿಮಗದ ಪ್ರಗತಿಯ ವರದಿ ಬಹಿರಂಗಗೊಂಡಿದೆ.
2018 ರಲ್ಲಿ ನಿಗಮದಲ್ಲಿ 25 ಕೋಟಿ ರೂ. ದುರುಪಯೋಗವಾಗಿತ್ತು. ಹಣಕಾಸು ವಿಭಾಗದ ಅಧಿಕಾರಿ ಕಿಶೋರ್ ಕುಮಾರ್ ಈ ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತಾಗಿತ್ತು. ಈ ಅಕ್ರಮ ಸಂಬಂಧ ಸಿಬಿಐ ಹಾಗೂ ಸಿಐಡಿ ಪ್ರತ್ಯೇಕ ಕೇಸು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದವು. ಈ ಬೆಳವಣಿಗೆಯಿಂದ ಸತತ ಮೂರು ವರ್ಷ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವಹಿವಾಟು ಕ್ಷೀಣಿಸಿತ್ತು. ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ರೂಪಾ ಅವರು ಎಂಟ್ರಿ ಕೊಟ್ಟ ನಂತರ ನಿಗಮದ ವಹಿವಾಟಿನಲ್ಲಿ ಸಾಕಷ್ಟು ಬದಲಾವಣೆಯಾಗಿದೆ.

ಲಾಕ್‌ಡೌನ್ ನಡುವೆಯೂ 7 ಕೋಟಿ ರೂ. ಹೆಚ್ಚು ವಹಿವಾಟು
2021 ಮಾರ್ಚ್ 31 ಕ್ಕೆ ಮುಕ್ತಾಯಗೊಂಡಿದ್ದ ಹಣಕಾಸು ವರ್ಷದಲ್ಲಿ ಕರ್ನಾಟಕ ರಾಜ್ಯ ಕರಕುಶಲ ನಿಗಮ ಕೇವಲ 16.88 ಕೋಟಿ ರೂಪಾಯಿ ವಹಿವಾಟು ನಡೆಸಿತ್ತು. 2022 ಮಾರ್ಚ್ 31 ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ನಿಗಮದ ಆದಾಯ ಶೇ. 41 ರಷ್ಟು ಹೆಚ್ಚಾಗಿತ್ತು. ಮೂರು ತಿಂಗಳ ಕೊರೊನಾ ಲಾಕ್‌ಡೌನ್ ನಡುವೆಯೂ ಏಳು ಕೋಟಿ ರೂ. ಹೆಚ್ಚು ವಹಿವಾಟು ನಡೆಸುವ ಮೂಲಕ ಕರಕುಶಲ ನಿಗಮ ಸಾಧನೆ ತೋರಿದೆ. ಇದಕ್ಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕೈಗೊಂಡ ತೀರ್ಮಾನಗಳೇ ಕಾರಣ ಎಂಬುದು ನಿಗಮದ ವಾರ್ಷಿಕ ವರದಿಯಲ್ಲಿ ಉಲ್ಲೇಖವಾಗಿದೆ.

ಆನ್‌ಲೈನ್ ತಾಣಗಳಲ್ಲಿ ಲಭ್ಯ
ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಉತ್ಪನ್ನಗಳು ಅಮೇಜಾನ್, ಫ್ಲಿಪ್ ಕಾರ್ಟ್ ದೈತ್ಯ ಆನ್‌ಲೈನ್ ವಹಿವಾಟು ವೆಬ್ ತಾಣದಲ್ಲಿ ಲಭ್ಯವಾಗುವಂತೆ ರೂಪಾ ಅವರು ಕ್ರಮ ಕೈಗೊಂಡಿದ್ದರು. ರಾಜ್ಯದಲ್ಲಿ ಆರು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಉತ್ಪನ್ನಗಳ ಮಾರಾಟ ಮೇಳವನ್ನು ಆಯೋಜಿಸಿದ್ದರು. ಹೊರ ರಾಜ್ಯಗಳಲ್ಲಿ 9 ಮಾರಾಟ ಮೇಳ ಆಯೋಜಿಸಿದ್ದರಿಂದ ಅತಿ ಹೆಚ್ಚು ಉತ್ಪನ್ನಗಳು ಮಾರಾಟವಾಗಿ ಹೆಚ್ಚಿನ ಆದಾಯವನ್ನು ನಿಗಮಕ್ಕೆ ತಂದುಕೊಟ್ಟಿತ್ತು.

ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಜತೆ ಒಡಂಬಡಿಕೆ
ಇದಲ್ಲದೇ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಉತ್ಪನ್ನಗಳ ಮಾರಾಟ ಮಾಡುವ ಸೇಲ್ಸ್ ಮೆನ್ ಗಳಿಗೆ ಹೆಚ್ಚುವರಿ ಗಳಿಕೆಗೆ ಅವಕಾಶ ನೀಡಿದ್ದರಿಂದ ಹೆಚ್ಚು ಉತ್ಪನ್ನಗಳು ಮಾರಾಟ ಆಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ಮತ್ತು ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿ ಜತೆ ಒಡಂಬಡಿಕೆಯಿಂದಲೂ ನಿಗಮದ ವಹಿವಾಟು ಹೆಚ್ಚಳಗೊಂಡಿದೆ. ಇದರ ಜತೆಗೆ ಸಾಮಾಜಿಕ ಜಾಲ ತಾಣದಲ್ಲಿ ಅತಿ ಹೆಚ್ಚು ಪ್ರಚಾರ ಪಡಿಸಿ ನಿಗಮದ ಉತ್ಪನ್ನಗಳು ಜನ ಸಾಮಾನ್ಯರಿಗೆ ತಲುಪುವಂತೆ ಮಾಡುವಲ್ಲಿ ಯಶಸ್ವಿ ಕಾರ್ಯಗಳನ್ನು ರೂಪಾ ಅವರು ತೆಗೆದುಕೊಂಡಿದ್ದಾರೆ.

KTPP ಕಾಯ್ದೆ ಉಲ್ಲಂಘನೆ ಮಾಡಿಲ್ಲ
"ಕರ್ನಾಟಕ ಪಾರದರ್ಶಕ ಕಾಯ್ದೆಗಳನ್ನು ಉಲ್ಲಂಘನೆ ಮಾಡಿ ರೂಪಾ ಅವರು ಟೆಂಡರ್ ಗಳನ್ನು ಕರೆದಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಡಿ. ರೂಪಾ ಅವರು, ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಅವರು ನಾನು 6 ಕೋಟಿ ಟೆಂಡರ್ ಕರೆದಿದ್ದೇನೆ ಎಂದು ಹೇಳಿ ಅದೇ ದೊಡ್ಡ ಆರೋಪದ ರೀತಿ ಬಿಂಬಿಸಿರುವದು ಅವರ ಅಜ್ಞಾನಕ್ಕೆ ಕನ್ನಡಿ ಹಿಡಿದಂತಿದೆ. ಇಂಥವರು ಅಧ್ಯಕ್ಷರು! ಟೆಂಡರ್ ಕರೆಯುವುದು ಪಾರದರ್ಶಕ ಹಾಗೂ ಸರಿಯಾದ ಪದ್ಧತಿ. ನಾನು ಎಂದೂ KTPP ಕಾಯ್ದೆ ಉಲ್ಲಂಘನೆ ಮಾಡಿಲ್ಲ. ಕಾಯ್ದೆ ಪ್ರಕಾರವೇ e - portal ನಲ್ಲಿ ಟೆಂಡರ್ ಕರೆದಿದ್ದೇನೆ. ಅಲ್ಲದೇ, ನಿಗಮದ ವ್ಯವಸ್ಥಾಪಕರು ಪ್ರಧಾನ ಕಾರ್ಯದರ್ಶಿಗೆ ವರದಿ ಮಾಡಬೇಕು. ಅದು ಸರ್ಕಾರ. ಒಬ್ಬ ಅಧ್ಯಕ್ಷನಿಗೆ ಎಂಡಿ ಉತ್ತರ ನೀಡುವ ಅಗತ್ಯವಿಲ್ಲ. ಟೆಂಡರ್ ಕರೆಯಲು ಚೇರ್ಮನ್ ಪರ್ಮಿಷನ್ ಬೇಕಿಲ್ಲ. ಚೇರ್ಮನ್ ರಾಘವೇಂದ್ರ ಶೆಟ್ಟಿ ಮತ್ತೂ ಅಜ್ಞಾನಿ ಯಂತೆ ವರ್ತಿಸುತ್ತಾ ಇದ್ದಾರೆ. ಅವರಿಗೆ ಸರ್ಕಾರದ ಆದೇಶ ಗೊತ್ತಿಲ್ಲವೆ? ಸರ್ಕಾರದ ಆದೇಶ DDPER 35 ARU 2003 ಪ್ರಕಾರ ನಿಗಮದ ದೈನಂದಿನ ಚಟುವಟಿಕೆಗಳಲ್ಲಿ ಚೇರ್ಮನ್ ಗೆ ಯಾವ ಅಧಿಕಾರವೂ ಇರುವುದಿಲ್ಲ." ಎಂದು 'ಒನ್‌ಇಂಡಿಯಾ ಕನ್ನಡ'ಕ್ಕೆ ಡಿ ರೂಪಾ ಅವರು ಸ್ಪಷ್ಟನೆ ನೀಡಿದ್ದಾರೆ.
Recommended Video
-
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ












Click it and Unblock the Notifications