KS Eshwarappa: ಮುಸ್ಲಿಂ ಗೂಂಡಾಗಳ ಮೇಲಿನ ಕೇಸ್ ವಾಪಸ್ ಪಡೆಯದಂತೆ ಈಶ್ವರಪ್ಪ ಎಚ್ವರಿಕೆ
ಶಿವಮೊಗ್ಗ, ಜುಲೈ 26: ಕೋಮು ಗಲಭೆ ಮಾಡುವವರಿಗೆ ಸರ್ಕಾರ ನೇರ ಬೆಂಬಲ ಕೊಡುತ್ತಿದೆ. ಕಾಂಗ್ರೆಸ್ ಸರ್ಕಾರ ಈ ರೀತಿಯ ಕೆಲಸಕ್ಕೆ ಬೆಂಬಲ ಕೊಡೋದು ಸಾಬೀತಾಗುತ್ತಿದೆ. ಹೀಗಾಗಿ ಮುಸ್ಲಿಂ ಗೂಂಡಾಗಳ ಮೇಲಿನ ಕೇಸ್ ವಾಪಸ್ ಪಡೆಯದಂತೆ ಮಾಜಿ ಕೆ ಎಸ್ ಈಶ್ವರಪ್ಪ ಎಚ್ವರಿಕೆ ನೀಡಿದರು.
ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕೆಜಿ ಹಳ್ಳಿ, ಡಿಜೆ ಹಳ್ಳಿ, ಹುಬ್ಬಳ್ಳಿ, ಶಿವಮೊಗ್ಗದಲ್ಲೂ ಗಲಾಟೆಯಾಗಿತ್ತು. ಇವೆಲ್ಲವೂ ಮುಸಲ್ಮಾನ ಗುಂಡಾಗಳು ಮಾಡಿದ ಕೃತ್ಯಗಳು. ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯುವ ಕೆಲಸ ಮಾಡಬಾರದು. ಹಾಗಾದ್ರೆ ಮತ್ತೆ ಅದೇ ರೀತಿ ಕೆಲಸ ಮಾಡ್ತಾರೆ ಎಂದು ಈಶ್ವರಪ್ಪ ಹೇಳಿದರು.

ಬಿಜೆಪಿ ಸರ್ಕಾರ ಇದ್ದಾಗ ಹಿಂದುಳಿದ ವರ್ಗದ ಅನೇಕ ಕಾಮಗಾರಿ ಅಗಿದೆ. ನೀರಾವರಿ ಇಲಾಖೆ, ದಲಿತರಿಗೆ, ಸಮಾಜ ಕಲ್ಯಾಣ ಇಲಾಖೆಯಡಿ ಕೆಲಸ ಅಗಿದೆ. ಅವುಗಳಲ್ಲಿ ಕೆಲವು ಪೂರ್ಣ ಅದ್ರೇ, ಕೆಲವು ಅಪೂರ್ಣ ಆಗಿದೆ. ಹೊಸ ಸರ್ಕಾರ ಬಂದು ಆ ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಿದೆ. ಆರಂಭವಾಗಿರುವ ಕಾಮಗಾರಿ ಸರ್ಕಾರ ತ್ವರಿತವಾಗಿ ಪೂರ್ಣ ಮಾಡಬೇಕು ಎಂದು ಆಗ್ರಹಿಸಿದರು.
ನಿಮ್ಮ ಹಣಕಾಸಿನ ಪರಿಸ್ಥಿತಿ ನಮಗೆ ಅರ್ಥ ಆಗುತ್ತೆ. ಗ್ಯಾರಂಟಿಗಳಿಗೆ ಕೊಡಬೇಕು ಅನ್ನೊದು ಗೊತ್ತಾಗಿದೆ. ಶಾಸಕರು ಅನುದಾನ ನಿರೀಕ್ಷೆ ಮಾಡದ ಪರಿಸ್ಥಿತಿ ಇದು. ಕಾಮಗಾರಿ ಪೂರ್ಣಗೊಳಿಸಲು ಸಿಎಂ ಹಾಗೂ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಹೊಸ ಕಾಮಗಾರಿಗೆ ಹಣ ಕೊಡಿ ಎಂದು ನಾವು ಕೇಳಲ್ಲ. ಅರ್ಧ ಅಗಿರುವುದು ಪೂರ್ಣ ಮಾಡಿ ಎಂದು ಒತ್ತಾಯಿಸಿದರು.
ಕ್ಷೇತ್ರದ ಅಭಿವೃದ್ಧಿಗೆ 10 ರಿಂದ 100 ಕೋಟಿ ವರೆಗೂ ಅನುದಾನ ಕೇಳುತ್ತಿದ್ದಾರೆ.! ಸ್ವತ ಡಿ ಕೆ ಶಿವಕುಮಾರ್ ಶಾಸಕರಿಗೆ ಹಣ ಕೊಡಲು ಆಗುತ್ತಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಎರಡು ತಿಂಗಳಾಗಿಲ್ಲ. ಪಕ್ಷದೊಳಗೆ ಬೇಗುದಿಗಳು ಆರಂಭವಾಗಿವೆ. ಕಾಂಗ್ರೆಸ್ ಪಕ್ಷದೊಳಗೆಯೇ ಸುಮಾರು 30ಕ್ಕೂ ಹೆಚ್ಚು ಸಾಸಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿಗಳಿಗೆ ಬಹಿರಂಗವಾಗಿಯೇ ಪತ್ರ ಬರೆದಿದ್ದು, ವೈರಲ್ ಆಗಿದೆ. ಪತ್ರ ನಕಲಿಯಾಗಿರಲು ಸಾಧ್ಯವೇ ಇಲ್ಲ. ನಕಲಿಯಾಗಿದ್ದರೆ ತನಿಖೆ ಆಗಲಿ. ಕಾಂಗ್ರೆಸ್‌ನವರೇ ಮಾಡುತ್ತಿದ್ದಾರೊ ಬೇರೆ ಪಕ್ಷದವರು ಮಾಡುತ್ತಿದ್ದಾರೊ ಅದನ್ನು ಬಹಿರಂಗಪಡಿಸಲಿ ಎಂದರು.
ಸಿಎಂ ಮಾಡುವುದು ಗೊತ್ತು ಇಳಿಸುವುದು ಗೊತ್ತು ಎಂದು ಬಿ.ಕೆ.ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಮಾತನಾಡಿ, ಹರಿಪ್ರಸಾದ್ ಅವರ ಹೇಳಿಕೆ ಸಾಮಾನ್ಯವಾಗಿ ಪರಿಗಣಿಸುವುದು ಬೇಡ. ಹರಿಪ್ರಸಾದ್ ಏನು ಸಾಮಾನ್ಯ ಕಾರ್ಯಕರ್ತರಲ್ಲ. ಕಾಂಗ್ರೆಸ್ ರಾಷ್ಟ್ರೀಯ ನಾಯಕರಲ್ಲಿ ಅವರು ಕೂಡ ಒಬ್ಬರು. ಹೇಳಿಕೆ ಹಗುರವಾಗಿ ಪರಿಗಣಿಸಬಾರದು ಎಂದರು.
ಡಿಕೆ ಶಿವಕುಮಾರ್ ಕೂಡ ಸರ್ಕಾರದ ಪತನಕ್ಕೆ ಸಿಂಗಾಪೂರ್ ದಲ್ಲಿ ಷಡ್ಯಂತ್ರ ವಿಚಾರವಾಗಿ ಉತ್ತರಿಸಿ, ಕಾಂಗ್ರೆಸ್ ನವರೇ ಮಾಡ್ತಿದ್ದಾರೋ. ಬೇರೆ ಪಕ್ಷದವರು ಮಾಡ್ತಿದ್ದಾರೋ. ಈ ಬಗ್ಗೆ ಡಿ.ಕೆ. ಶಿವಕುಮಾರ್ ಅವರೇ ಸ್ಪಷ್ಟ ಪಡಿಸಬೇಕು. ಜೊತೆಗೆ ಸಿಎಂ ಕೈಯಲ್ಲೇ ಇಂಟಲಿಜೆನ್ಸ್ ಕೂಡ ಇದೆ. ಇದರ ಬಗ್ಗೆ ಮಾಹಿತಿ ಪಡೆದು, ತನಿಖೆ ಮಾಡಲಿ ಎಂದು ಆಗ್ರಹಿಸಿದರು.












Click it and Unblock the Notifications