ವಿಧಾನ ಪರಿಷತ್ತಿನ ನತ್ತ ಹೊರಟ ಕೆಎಸ್ ಈಶ್ವರಪ್ಪ?

Posted By:
Subscribe to Oneindia Kannada

ಬೆಂಗಳೂರು, ಏ. 24 : ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಂದ ತೆರವಾಗುವ ವಿಧಾನಪರಿಷತ್ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಕೆಎಸ್ ಈಶ್ವರಪ್ಪ ಅವರನ್ನು ಆಯ್ಕೆ ಮಾಡಲು ಬಿಜೆಪಿ ನಿರ್ಧರಿಸಿದೆ. ಜೂನ್ ನಲ್ಲಿ ಸದಾನಂದ ಗೌಡರ ಪರಿಷತ್ ಸದಸ್ವತ್ವದ ಅವಧಿ ಪೂರ್ಣಗೊಳ್ಳಲಿದೆ.

ವಿಧಾನ ಪರಿಷತ್ತಿನ ಹಾಲಿ ಪ್ರತಿಪಕ್ಷದ ನಾಯಕ ಡಿ.ವಿ.ಸದಾನಂದ ಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದ್ದರಿಂದ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದಲ್ಲಿ ಅವರ ಜಾಗಕ್ಕೆ ಈಶ್ವರಪ್ಪ ಅವರನ್ನು ತರಲು ಬಿಜೆಪಿ ಚಿಂತಿಸುತ್ತಿದೆ.

KS Eshwarappa

ಡಿವಿ ಸದಾನಂದಗೌಡರು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸದ ಮೇಲೆ ಬಿಜೆಪಿ ಈ ಕಾರ್ಯತಂತ್ರ ರೂಪಿಸಿದೆ. ಆದರೆ, ಮೇ 16ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಈ ಕುರಿತು ಕಾರ್ಯಗಳನ್ನು ಆರಂಭಿಸಲು ಪಕ್ಷದ ಪ್ರಮುಖರು ನಿರ್ಧರಿಸಿದ್ದಾರೆ.[ ಸದಾನಂದ ಗೌಡರ ಸಂದರ್ಶನ]

ಈಶ್ವರಪ್ಪಗೆ ಸ್ಥಾನ-ಮಾನವಿಲ್ಲ : ರಾಜ್ಯದ ಪ್ರಮುಖ ನಾಯಕರ ಪೈಕಿ ಕೆಎಸ್ ಈಶ್ವರಪ್ಪ ಅವರಿಗೆ ಸೂಕ್ತ ಸ್ಥಾನಮಾನವಿಲ್ಲ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಉಪ ಮುಖ್ಯಮಂತ್ರಿಯಾಗಿದ್ದ ಕೆಎಸ್ ಈಶ್ವರಪ್ಪ, ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ನಂತರ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. [ಜೂನ್ ನಲ್ಲಿ ಪರಿಷತ್ ಚುನಾವಣೆ]

ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಈಶ್ವರಪ್ಪ ಅವರಿಗೆ ಪಕ್ಷದ ನಾಯಕರು ಸಲಹೆ ನೀಡಿದ್ದರು. ಆದರೆ, ಬಿಎಸ್ ಯಡಿಯೂರಪ್ಪ ಅವರು ಬಿಜೆಪಿಗೆ ಮರಳಿದ್ದರಿಂದ ಈಶ್ವರಪ್ಪ ಅವರು ಶಿವಮೊಗ್ಗದಿಂದ ಸ್ಪರ್ಧಿಸಲು ಒಪ್ಪಿಗೆ ನೀಡರೆ, ಪಕ್ಷ ಸಂಘಟನೆಯಲ್ಲಿ ತೊಡಗಿದರು.

ವಿಧಾನಸಭೆಯಿಂದ ಪರಿಷತ್ತಿಗೆ ಆಯ್ಕೆ ಆಗುವ ಆರು ಸ್ಥಾನಗಳ ಪೈಕಿ ಒಂದು ಸ್ಥಾನ 46 ಶಾಸಕ ಬಲ ಹೊಂದಿರುವ ಬಿಜೆಪಿಗೆ ಲಭಿಸಲಿದೆ. ಈ ಸ್ಥಾನಕ್ಕೆ ಈಶ್ವರಪ್ಪ ಅವರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಆದರೆ, ಈ ಕುರಿತು ಅಂತಿಮ ನಿರ್ಧಾರ ಮೇ.16ರ ನಂತರ ಪ್ರಕಟವಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Deputy Chief Minister KS Eshwarappa may elected as legislative council member. DV Sadananda Gowda council membership comes to an end on June. Eshwarappa may elected for this post.
Please Wait while comments are loading...