KRS Dam: ಐತಿಹಾಸಿಕ ದಾಖಲೆ ಬರೆದ ಕೆಆರ್‌ಎಸ್ ಡ್ಯಾಂ; ಇದುವರೆಗೂ ಬಾಗಿನ ಅರ್ಪಿಸಿದ ಮುಖ್ಯಮಂತ್ರಿಗಳು, ಭರ್ತಿಯಾಗದ ವರ್ಷಗಳ ಪಟ್ಟಿ
KRS Dam: ಭಾರೀ ಮಳೆ ಮುಂದುವರೆದ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರಮುಖ ಜಲಾಶಯಗಳ ಒಳಹರಿವು ಹೆಚ್ಚಾಗುತ್ತಲಿದೆ. ಮತ್ತೊಂದೆಡೆ ಈಗಾಗಲೇ ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿ ಕೆಆರ್‌ಎಸ್ ಅಣೆಕಟ್ಟು ತುಂಬಿದ್ದು, ಸಿಎಂ ಸಿದ್ದರಾಮಯ್ಯ ಅವರು ಸೋಮವಾರ (ಜೂನ್ 30) ಬಾಗಿನ ಅರ್ಪಣೆ ಮಾಡಲಿದ್ದಾರೆ. ಹಾಗಾದ್ರೆ ಇದುವರೆಗೂ ಎಷ್ಟು ಬಾರಿ ಯಾರೆಲ್ಲಾ ಬಾಗಿನ ಅರ್ಪಿಸಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಈ ಬಾರಿ ರಾಜ್ಯಕ್ಕೆ ಅವಧಿಗೂ ಮುನ್ನವೇ ಮುಂಗಾರು ಎಂಟ್ರಿ ಕೊಟ್ಟು ಆರ್ಭಟಿಸಿದ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಕೆರೆ-ಕಟ್ಟೆ, ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಮತ್ತೊಂದೆಡೆ ಕೆಲವು ಪ್ರಮುಖ ಜಲಾಶಯಗಳು ಭರ್ತಿಯಾಗುವ ಹಂತವನ್ನು ತಲುಪಿದ್ದರೆ, ಮತ್ತೊಂದೆಡೆ ಕೆಆರ್‌ಎಸ್ (ಕೃಷ್ಣರಾಜ ಸಾಗರ) ತುಂಬಿ ಬಾಗಿನ ಅರ್ಪಣೆಗೆ ಸಿದ್ಧವಾಗಿದೆ.

ಕಳೆದ ಬಾರಿಯೂ ಕೂಡ ಮುಂಗಾರು ಆರ್ಭಟಕ್ಕೆ ಈ ಜಲಾಶಯ ತುಂಬಿದಾಗ ಸಿಎಂ ಸಿದ್ದರಾಮಯ್ಯ ಅವರೇ ಬಾಗಿನ ಅರ್ಪಿಸಿದ್ದು, 2025ರಲ್ಲೂ ಕೂಡ ಅವರಿಗೇ ಈ ಅದೃಷ್ಟ ಇಲಿದುಬಂದಿದೆ. ಹಾಗಾದ್ರೆ ಇದುವರೆಗೂ ಯಾವ್ಯಾವ ವರ್ಷ ಯಾವ ದಿನಾಂಕದಂದು ಯಾರೆಲ್ಲಾ ಬಾಗಿನ ಅರ್ಪಣೆ ಮಾಡಿದ್ದಾರೆ ಹಾಗೂ ಯಾವಗೆಲ್ಲಾ ಡ್ಯಾಂ ಭರ್ತಿ ಆಗಿಲ್ಲ ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿ ನೀಡಲಾಗಿದೆ.
ಯಾವಾಗ ಯಾರಿಂದ ಬಾಗಿನ ಅರ್ಪಣೆ?
2005 ಆಗಸ್ಟ್ 8 - ಎನ್.ಧರ್ಮಸಿಂಗ್
2006 ಜುಲೈ 26 - ಎಚ್‌ಡಿ ಕುಮಾರಸ್ವಾಮಿ
2007 ಜುಲೈ 20 - ಎಚ್‌ಡಿ ಕುಮಾರಸ್ವಾಮಿ
2008 ಆಗಸ್ಟ್ 15 - ಬಿಎಸ್ ಯಡಿಯೂರಪ್ಪ
2009 ಜುಲೈ 24 - ಬಿಎಸ್ ಯಡಿಯೂರಪ್ಪ
2010 ಅಕ್ಟೋಬರ್ 18- ಬಿಎಸ್ ಯಡಿಯೂರಪ್ಪ
2011 ಆಗಸ್ಟ್ 17 - ಡಿ.ವಿ.ಸದಾನಂದಗೌಡ
2013 ಆಗಸ್ಟ್ 1 - ಸಿದ್ದರಾಮಯ್ಯ
2014 ಆಗಸ್ಟ್ 6 - ಸಿದ್ದರಾಮಯ್ಯ
2018 ಜುಲೈ 20 - ಎಚ್‌ಡಿ ಕುಮಾರಸ್ವಾಮಿ
2019 ಆಗಸ್ಟ್ 29 - ಬಿಎಸ್ ಯಡಿಯೂರಪ್ಪ
2020 ಆಗಸ್ಟ್ 21 - ಬಿಎಸ್ ಯಡಿಯೂರಪ್ಪ
2021 ನವೆಂಬರ್ 2 - ಬಸವರಾಜ ಬೊಮ್ಮಾಯಿ
2022 ಜುಲೈ 20 - ಬಸವರಾಜ ಬೊಮ್ಮಾಯಿ
2024 ಜುಲೈ 29 - ಸಿದ್ದರಾಮಯ್ಯ
2025 ಜೂನ್ 30ರಂದು ಸಿಎಂ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಲಿದ್ದಾರೆ
ಬಾಗಿನ ಅರ್ಪಿಸಿದ ಮುಖ್ಯಮಂತ್ರಿಗಳ ವಿವರ: ಮುಖ್ಯಮಂತ್ರಿಗಳಾದ ಅವಧಿಯಲ್ಲಿ ಅತೀ ಹೆಚ್ಚು ಬಾಗಿನ ಅರ್ಪಿಸಿದವರು ಬಿಎಸ್ ಯಡಿಯೂರಪ್ಪ ಆಗಿದ್ದಾರೆ. ಇವರು 5 ಬಾರಿ ಬಾಗಿನ ಅರ್ಪಿಸಿದ್ದಾರೆ. ಇನ್ನೂ ನಾಳೆ ಅಂದರೆ 2025 ಜೂನ್ 30ಕ್ಕೆ ಸಿಎಂ ಸಿದ್ದರಾಮಯ್ಯ ಸರದಿ ಬಂದಿದ್ದು, ನಾಲ್ಕನೇ ಬಾರಿ ಬಾಗಿನ ಅರ್ಪಣೆ ಮಾಡುವ ಮೂಲಕ ಎರಡನೇ ಸ್ಥಾನ ಅಲಂಕರಿಸಲಿದ್ದಾರೆ. ಧರ್ಮಸಿಂಗ್ 1, ಎಚ್‌ಡಿ ಕುಮಾರಸ್ವಾಮಿ 3, ಡಿವಿ ಸದಾನಂದಗೌಡ 1, ಬಸವರಾಜ ಬೊಮ್ಮಾಯಿ 2 ಬಾರಿ ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿದ್ದಾರೆ.
ಕೆಆರ್‌ಎಸ್ ಜಲಾಯಶಯ ಭರ್ತಿಯಾಗದ ವರ್ಷಗಳು: ಕೃಷ್ಣರಾಜ ಸಾಗರ ಜಲಾಶಯ (ಕೆಆರ್‌ಎಸ್)ವು 1986, 1987, 1997, 1998, 2001, 2002, 2003, 2015, 2017, 2023ರಲ್ಲಿ ಭರ್ತಿಯಾಗಿಲ್ಲ. ಇನ್ನುಳಿದಂತೆ 2024 ಹಾಗೂ 2025 ಸತತ ಎರಡೂ ವರ್ಷವೂ ಭರ್ತಿಯಾಗಿ ರೈತರ ಮುಖದಲ್ಲಿ ಮಂದಾಹಾಸ ಮೂಡಿಸಿದೆ.
ಕೆಆರ್‌ಎಸ್ ಡ್ಯಾಂ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಭರ್ತಿ ಆಗಿದೆ. ಈ ಹಿನ್ನೆಲೆ ಸೋಮವಾರ (ಜೂನ್ 30) ಸಿಎಂ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಿ ಜೂನ್‌ನಲ್ಲಿ ಬಾಗಿನ ಅರ್ಪಿಸಿದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಸೋಮವಾರ ಬೆಳಗ್ಗೆ 11:30ರ ಅಭಿಜಿನ್ ಮೂಹೂರ್ತದಲ್ಲಿ ಬಾಗಿನ ಅರ್ಪಣೆ ಕಾರ್ಯಕ್ರಮ ನಡೆಯಲಿದೆ. ವೈದಿಕ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯಲಿದ್ದು, ಈಗಾಗಲೇ ಪೂಜೆಗೆ ಭರ್ಜರಿ ಸಿದ್ಧತೆ ನಡೆದಿದೆ.
-
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್












Click it and Unblock the Notifications