KPSC: ಡಿ.29ಕ್ಕೆ KAS ಪರೀಕ್ಷೆ: ಪ್ರವೇಶ ಪತ್ರ ಬಿಡುಗಡೆ, ಡೌನ್‌ಲೋಡ್ ಮಾಡಿಕೊಳ್ಳಿ
ಬೆಂಗಳೂರು, ಡಿಸೆಂಬರ್ 20: ಕರ್ನಾಟಕ ಲೋಕಸೇವೆ ಆಯೋಗ (KPSC) ನಡೆಸುವ ಕರ್ನಾಟಕ ಆಡಳಿತ ಸೇವೆ (KAS) ನೇಮಕಾತಿಗೆ ಸಂಬಂಧಿಸಿದಂತೆ ಇದೇ ಡಿಸೆಂಬರ್ 29ರಂದು ನಡೆಯಲಿರುವ ಪರೀಕ್ಷೆಗಳಿಗೆ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದೆ. ಕೆಪಿಎಸ್‌ಸಿ ಶುಕ್ರವಾರ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಡ್ಮಿಟ್ ಕಾರ್ಡ್ ಬಿಡುಗಡೆಗೊಳಿಸಿದ್ದು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕೂಡಲೇ ಡೌನ್‌ಲೋಡ್ ಮಾಡಿಕೊಳ್ಳಬೇಕು.
2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ 'ಎ' ಮತ್ತು 'ಬಿ' ವೃಂದದ ಒಟ್ಟು 384 ಹುದ್ದೆಗಳಿಗೆ ಇದೇ ಡಿಸೆಂಬರ್ 29ರಂದು ಪರೀಕ್ಷೆಗಳು ನಡೆಯಲಿವೆ. ಈ ಪೂರ್ವಭಾವಿ ಮರುಪರೀಕ್ಷೆಯ ಪ್ರವೇಶ ಪತ್ರವನ್ನು ಕರ್ನಾಟಕ ಲೋಕಸೇವೆ ಆಯೋಗ (KPSC)ವು https://kpsc.kar.nic.in/ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ. ಡೌನ್‌ಲೋಡ್ ಮಾಡುವುದು ಹೇಗೆ ಎಂದು ಇಲ್ಲಿ ಪರಿಶೀಲಿಸಿ.

ಪರೀಕ್ಷೆ ವೇಳಾಪಟ್ಟಿ ಮಾಹಿತಿ
2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ 'ಎ' ಮತ್ತು 'ಬಿ' ವೃಂದದ 384 ಹುದ್ದೆಗಳ ಪೂರ್ವ ಭಾವಿ ಪರೀಕ್ಷೆಯು ಒಂದೇ ದಿನ ನಡೆಯಲಿದ್ದು, ಒಟ್ಟು ಎರಡು ಪ್ರಶ್ನೆ ಪತ್ರಿಕೆಗೆಳಿಗೆ ಲಕ್ಷಾಂತರ ಅಭ್ಯರ್ಥಿಗಳು ಉತ್ತರಿಸಲಿದ್ದಾರೆ.
* ಪತ್ರಿಕೆ ಒಂದು- ಬೆಳಗ್ಗೆ 10ಗಂಟೆಯಿಂದ 12 ಗಂಟೆವರೆಗೆ
* ಪತ್ರಿಕೆ ಎರಡು- ಮಧ್ಯಾಹ್ನ 2ರಿಂದ 04 ಗಂಟೆವರೆಗೆ
* ಪರೀಕ್ಷೆಗೆ ಪ್ರವೇಶ ಪತ್ರ ಕಡ್ಡಾಯವಾಗಿ ಒಯ್ಯಬೇಕು.
ಪ್ರವೇಶ ಪತ್ರ ಡೌನ್‌ಲೋಡ್ ಹೇಗೆ?
ಕರ್ನಾಟಕ ಲೋಕಸೇವಾ ಆಯೋಗದ ಸದರಿ ಪರೀಕ್ಷೆಗೆ ಹಾಜರಾಗುವವರು ಮೊದಲು ಈ ವೆಬ್‌ಸೈಟ್‌ಗೆ https://kpsc.kar.nic.in/ ಭೇಟಿ ನೀಡಬೇಕು. ಬಳಿಕ ಪರೀಕ್ಷೆ ನೋಂದಣಿ ಸಂಖ್ಯೆ, ಜನ್ಮದಿನ ವಿವರ ನಮೂದಿಸಿ ಲಾಗಿನ್ ಆಗಬೇಕು. ಬಳಿಕ ಪ್ರವೇಶ ಪತ್ರ ಕಾರ್ಡ್ ಕುರಿತು ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಪರದೆ ಮೇಲೆ ಕಾಣುವ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ಕೆಪಿಎಸ್‌ಸಿ
ಪರೀಕ್ಷೆ ಹೆಸರು: ಕೆಎಎಸ್
ಹುದ್ದೆಗಳು ಎಷ್ಟು: 384
ಪರೀಕ್ಷೆಗಳು: ಪ್ರಿಲಿಮ್‌ನರಿ ಮತ್ತು ಮೇನ್ಸ್
ಅರ್ಜಿ ಆಹ್ವಾನ ದಿನಾಂಕ: ಮಾರ್ಚ್ 14ರಿಂದ ಏಪ್ರಿಲ್ 15
ಪರೀಕ್ಷೆ ದಿನಾಂಕ: ಡಿಸೆಂಬರ್ 29
'ಭೂಮಾಪಕರ' ಹುದ್ದೆ ನೇಮಕಾತಿ ಅಪ್ಡೇಟ್
ಕೆಪಿಎಸ್ ವತಿಯಿಂದ ಕರ್ನಾಟಕ ಭೂಮಾಪನ ಕಂದಾಯ ವ್ಯವಸ್ಥೆ ಹಾಗೂ ಭೂ ದಾಖಲೆಗಳ ಇಲಾಕೆಯಲ್ಲಿ ಖಾಲಿ ಇರುವ 'ಭೂಮಾಪಕರ' ಹುದ್ದೆ ಸೇರಿ ಒಟ್ಟು ಸುಮಾರು 260ಕ್ಕೂ ಹಚ್ಚು ಉದ್ಯೋಗಗಳಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅಪ್ಡೇಟ್ ಗಾಗಿ, ಪರೀಕ್ಷೆ ದಿನಾಂಕಗಳಿಗಾಗಿ ಕಾಯುತ್ತಿದ್ದಾರೆ. ಸದರಿ ಕೆಎಎಸ್ ಪರೀಕ್ಷೆ ಪೂರ್ಣಗೊಳ್ಳುತ್ತಿದ್ದಂತೆ ಈ ಸರ್ವೇಯರ್ ಹುದ್ದೆಗಳ ಅಪ್ಡೇಟ್ ಸಿಗುವ ನಿರೀಕ್ಷೆ ಇದೆ.











Click it and Unblock the Notifications