KPSC: PDO ಪರೀಕ್ಷೆ ಕಟ್ ಆಫ್ ಅಂಕಗಳು, ಅಭ್ಯರ್ಥಿಗಳ ಜಾತಿವಾರು ಪಟ್ಟಿ
ಬೆಂಗಳೂರು, ಡಿಸೆಂಬರ್ 09: ಕರ್ನಾಟಕ ಲೋಕಸೇವಾ ಆಯೋಗವು (KPSC) ಇದೇ ಡಿಸೆಂಬರ್ 7 ಮತ್ತು 8ರಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO Exam) ಹುದ್ದೆಗಳಿಗೆ ಪರೀಕ್ಷೆ ನಡೆಸಿತ್ತು. ಒಟ್ಟು 200 ಅಂಕಗಳಿಗೆ ಪರೀಕ್ಷೆ ಎದರಿಸಿದ್ದ ಅಭ್ಯರ್ಥಿಗಳು ಯಾವಾಗ ಫಲಿತಾಂಶ ಪ್ರಕಟವಾಗುತ್ತದೆ. ಮೆರಿಟ್ ಪಟ್ಟಿ, ಕಟ್ ಆಫ್ ಅಂಕಗಳ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ನಿಮಗಾಗಿ ನಿರೀಕ್ಷಿತ ಕಟ್ ಆಫ್ ಅಂಕಗಳೂ ಕಳೆದ ವರ್ಷ ಎರಡು ಪ್ರಶ್ನೆ ಪತ್ರಿಕೆಗಳಿಗೆ ಬಿಡುಗಡೆ ಆಗಿದ್ದ ಕಟ್ ಆಫ್ ಅಂಕಗಳ ಮಾಹಿತಿ ಇಲ್ಲಿದೆ.
ಆಯೋಗವು ಶೀಘ್ರವೇ ಕರ್ನಾಟಕ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರೀಕ್ಷೆ 2024ರ ಅಂತಿಮ ಫಲಿತಾಂಶ ಬಿಡುಗಡೆ ಮಾಡಲಿದೆ. ಪರೀಕ್ಷೆ ಬರೆದವರು ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಹೋಗಿ ಅಪ್ಡೇಟ್ ಚೆಕ್ ಮಾಡುತ್ತಿದ್ದಾರೆ. ಆಗಾಗ ಜಾಲತಾಣ ಪರಿಶೀಲಿಸುತ್ತಾರೆ.

ಆಯೋದ ವೆಬ್‌ಸೈಟ್‌ನಲ್ಲಿ ಕಟ್ ಆಫ್ ಅಂಕ ಬಿಡುಗಡೆ ಮಾಡಲಿದೆ. ಈ ಅಂಕಗಳ ನೇಮಕಾತಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ. ಅರ್ಹರು ನೇಮಕಾತಿಗೆ ಕನಿಷ್ಠ ಅಂಕ ಎಷ್ಟು, ಅವರ ಅರ್ಹತೆಯನ್ನು ಈ ಅಂಕಗಳು ಸೂಚಿಸುತ್ತವೆ. ಈ ಕಟ್-ಆಫ್ ಅಂಕಗಳನ್ನು ಮೊದಲೆ ತಿಳಿದರೆ ಅಂತಿಮ ಫಲಿತಾಂಶ, ಮೌಲ್ಯಮಾಪನಕ್ಕೆ ಸಹಾಯವಾಗುತ್ತದೆ.
ಕರ್ನಾಟಕ ಲೋಕಸೇವಾ ಆಯೋಗವು ತನ್ನ https://kpsc.kar.nic.in/ ಅಧಿಕೃತ ವೆಬ್‌ಸೈಟ್ ಪಿಡಿಒ ಪರೀಕ್ಷೆ ಫಲಿತಾಂಶ, ಮೆರಿಟ್ ಲಿಸ್ಟ್ ಬಿಡುಗಡೆಗೂ ಮುನ್ನ ಕಟ್ ಆಫ್ ಅಂಕ ಪ್ರಕಟಿಸಲಿದೆ. ಅದ್ಯ ರಿಲೀಸ್ ದಿನಾಂಕ ಗೊತ್ತಾಗಬೇಕಿದೆ. ಅಭ್ಯರ್ಥಿಗಳು ಈ ಲೇಖನದಲ್ಲಿ ನಿರೀಕ್ಷಿತ ಫಲಿತಾಂಶಗಳು ಹಾಗೂ ಜಾತಿ ಆಧಾರಿತ ಹಿಂದಿನ ವರ್ಷ ಕಟ್ ಆಫ್ ಅಂಕಗಳ ಪಟ್ಟಿ ಮುಂದಿದೆ.
PDO exam 2024ರ ನಿರೀಕ್ಷಿತ ಕಟ್ ಆಫ್ ಅಂಕಗಳು
ಸಾಮಾನ್ಯ ವರ್ಗ: 70-75
ಒಬಿಸಿ: 65-70
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ 55-60
ಇಡಬ್ಲುಎಸ್: 60-65
ಈ ಮೇಲೆ ತಿಳಿಸಲಾದ ಅಂಕಗಳು ಆಯಾ ಜಾತಿ ವರ್ಗದ ಅಭ್ಯರ್ಥಿಗಳಿಗೆ ಪಿಡಿಒ ನೇಮಕಾತಿಗೆ ಅರ್ಹತೆ ನೀಡುವ ಅಂಕಗಳಾಗಿವೆ. ಇದು ನಿರೀಕ್ಷಿತ ಕಟ್ ಆಫ್ ಅಂಕಗಳು ಆಗಿದ್ದು, ಕೆಪಿಎಸ್‌ಸಿ ಅಧಿಕೃತ ಪಟ್ಟಿ ಬಿಡುಗಡೆ ಮಾಡಲಿದೆ.
ಹಳೆಯ ಪಿಡಿಒ ಪರೀಕ್ಷೆಯ ಕಟ್ ಆಫ್ ಅಂಕಗಳ ಪಟ್ಟಿ
ಪಿಡಿಒ ಪರೀಕ್ಷೆಗಳನ್ನು ಬರೆದ ಅಭ್ಯರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಳೆಯ ಪಿಡಿಒ ಪರಿಕ್ಷೆ ಎರಡು ಪತ್ರಿಕೆಗಳ ಕಟ್ ಆಫ್ ಅಂಕಗಳನ್ನು ಇಲ್ಲಿ ಒದಗಿಸಲಾಗಿದೆ. ಇದರ ಮೇಲೆ ನೇಮಕಾತಿ ಅರ್ಹತೆಯ ಅಂಕಗಳನ್ನು ನೀವು ಲೆಕ್ಕಾಚಾರ ಹಾಕಿಕೊಳ್ಳಬಹುದಾಗಿದೆ. ಇದು ಸುಮಾರು ಆರು ವರ್ಷಗಳ ಹಳೆಯ ಪರೀಕ್ಷೆಯ ಕಟ್ಆಪ್ ಅಂಕಗಳಾಗಿವೆ.
ಜಾತಿವಾರು ಕಟ್ ಆಫ್ ಅಂಕಗಳು (ಕ್ರಮವಾಗಿ ಪತ್ರಿಕೆ 1& 2)
ಜನರಲ್ : 134-140 & 120-124
ಒಬಿಸಿ: 130-134 & 116-118
ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ: 120-126 & 110-112
ಇಎಸ್‌ಎಂ: 110-120 & 100-104












Click it and Unblock the Notifications