ಶ್ಯಾಂ ಭಟ್ ಬಗ್ಗೆ ರಾಜ್ಯಪಾಲರಿಗೆ ಲೋಕಾಯುಕ್ತ ವರದಿ

Written By:
Subscribe to Oneindia Kannada

ಬೆಂಗಳೂರು, ಜೂನ್ 07 : ಕೆಪಿಎಸ್‌ಸಿ ಅಧ್ಯಕ್ಷರಾಗಿ ಟಿ.ಶ್ಯಾಂ ಭಟ್ ನೇಮಕ ವಿಚಾರಕ್ಕೆ ಸಂಬಂಧಿಸಿ ಲೋಕಾಯುಕ್ತ ಸಂಸ್ಥೆ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ವರದಿ ಸಲ್ಲಿಕೆ ಮಾಡಿದೆ.

ಶ್ಯಾಂ ಭಟ್ ಅವರ ಮೇಲೆ 18 ಪ್ರಕರಣಗಳಿದ್ದು ಎರಡು ಪ್ರಕರಣಗಳ ವಿಚಾರಣೆ ಅಗತ್ಯವಿದೆ ಎಂದು ಲೋಕಾಯುಕ್ತ ಸಂಸ್ಥೆ ವರದಿ ಸಲ್ಲಿಕೆ ಮಾಡಿದೆ. [ಶ್ಯಾಂ ಭಟ್ ಯಾರು?]

kpsc

ಕರ್ನಾಟಕ ಸರ್ಕಾರ ಕೆಪಿಎಸ್ ಸಿ ಅಧ್ಯಕ್ಷ ಹುದ್ದೆಗೆ ಶ್ಯಾಂ ಭಟ್ ಹೆಸರನ್ನು ಸೂಚಿಸಿದ ನಂತರ ರಾಜ್ಯಪಾಲರು ಅಂಕಿತ ಹಾಕಿರಲಿಲ್ಲ. ಅಲ್ಲದೇ ಈ ಬಗ್ಗೆ ವರದಿ ಸಲ್ಲಿಕೆ ಮಾಡುವಂತೆ ಲೋಕಾಯುಕ್ತಕ್ಕೆ ಸೂಚನೆ ನೀಡಿದ್ದರು.[ಶ್ಯಾಂ ಭಟ್ ನೇಮಕಕ್ಕೆ ತಾತ್ಕಾಲಿಕ ತಡೆ]

ಶ್ಯಾಂ ಭಟ್ ಅವರ ಮೇಲೆ ಎರಡು ಗಂಭೀರ ಪ್ರಕರಣಗಳು ಇವೆ. ಅವುಗಳ ವಿಚಾರಣೆ ಅಗತ್ಯವಿದೆ ಎಂದು ಲೋಕಾಯುಕ್ತ ಸಂಸ್ಥೆ ವರದಿ ಸಲ್ಲಿಕೆ ಮಾಡಿದ್ದು ರಾಜ್ಯಪಾಲರು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಕಾಗೋಡು ಅಸಮಾಧಾನ:
ಶ್ಯಾಂ ಭಟ್ ಹೆಸರು ಸೂಚನೆ ಮಾಡಿದ್ದಕ್ಕೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಇಂಥವರ ಹೆಸರನ್ನು ಯಾಕೆ ಸೂಚನೆ ಮಾಡಿದೆ ಎಂಬುದೇ ಗೊತ್ತಾಗಲಿಲ್ಲ. ಆರೋಪಗಳು ಹೊತ್ತವರನ್ನು ಯಾಕೆ ಹೆಸರಿಸಬೇಕಿತ್ತು ಎಂದು ಕಾಗೋಡು ಹೇಳಿದ್ದಾರೆ. ಆದರೆ ಶ್ಯಾಂ ಭಟ್ ಹೆಸರು ಸೂಚನೆ ಮಾಡಿರುವುದನ್ನು ಸಿಎಂ ಸಿದ್ದರಾಮಯ್ಯ ಮತ್ತೆ ಸಮರ್ಥನೆ ಮಾಡಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Lokayukta submit report to Karnataka Governor Vajubai Vala regarding allegations of T. Sharm Bhat. Karnataka Government recommended BDA commissioner T.Sham Bhat name for chairman of KPSC. After this step Governor sought a detail report from Lokayukta.
Please Wait while comments are loading...