ಕೆಪಿಎಸ್‌ಸಿ ಸಂದರ್ಶನದ ಅನುಪಾತ 1:5ಕ್ಕೆ ಹೆಚ್ಚಳ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 23 : ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಆಯ್ಕೆಗಾಗಿ ನಡೆಸುವ ಸಂದರ್ಶನದ ಅನುಪಾತವನ್ನು 1 : 5ಕ್ಕೆ ಹೆಚ್ಚಿಸಲು ಮುಂದಾಗಿದೆ. ಇದರಿಂದಾಗಿ ಗ್ರಾಮೀಣ ಮತ್ತು ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಸಹಾಯಕವಾಗಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕರ್ನಾಟ ಲೋಕಸೇವಾ ಆಯೋಗದ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ನಿರ್ದೇಶ ನೀಡಲಾಗಿದೆ. ಈಗಿರುವ 1:3 ಅನುಪಾತವನ್ನು 1:5ಕ್ಕೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳು ಸೂಚನೆ ಕೊಟ್ಟಿದ್ದಾರೆ.[KPSC ಅಧ್ಯಕ್ಷರಾಗಿ ಶ್ಯಾಂ ಭಟ್ ನೇಮಕ]

KPSC interview ratio to go up to 1:5

ಲೋಕಸೇವಾ ಆಯೋಗ ನಡೆಸುವ ಮುಖ್ಯಪರೀಕ್ಷೆಉಲ್ಲಿ ಉತ್ತೀರ್ಣರಾದವರನ್ನು ಸಂದರ್ಶನಕ್ಕೆ ಆಹ್ವಾನಿಸುವಾಗ 1:3 ಅನುಪಾತವಿದೆ. ಅಂದರೆ, 1 ಹುದ್ದೆಗೆ ತಲಾ ಮೂವರು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತಿತ್ತು. ಸಂದರ್ಶನದಲ್ಲಿಗಳಿಸುವ ಅಂಕ ಆಧರಿಸಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿತ್ತು.[ಕನ್ನಡದಲ್ಲೇ ಯುಪಿಎಸ್ಸಿ ಬರೆದ ಭೈರಪ್ಪ ಸಂದರ್ಶನ]

ಈ ಅನುಪಾತವನ್ನು 1:5ಕ್ಕೆ ಹೆಚ್ಚಿಸಲು ಮುಖ್ಯಮಂತ್ರಿಗಳು ಸೂಚನೆ ಕೊಟ್ಟಿದ್ದಾರೆ. ಇದರಿಂದಾಗಿ ಹೆಚ್ಚಿನ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಲು ಅನುಕೂಲವಾಗುತ್ತದೆ. ಎಲ್ಲ ವರ್ಗಗಳು ಅದರಲ್ಲೂ ವಿಶೇಷವಾಗಿ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ಇದರಿಂದ ಸಹಾಯಕವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka government has decided to amend the gazetted probationers rules 1996, paving way for more number of gazetted probationers to appear for interviews conducted by the Karnataka Public Service Commission (KPSC). At present only three persons can be interviewed for a post. The ratio has been increased to 1:5.
Please Wait while comments are loading...