ಲೋಕಸಭೆ ಚುನಾವಣೆಗೆ ಯುವ ಪಡೆ ಕಟ್ಟುತ್ತಿದ್ದಾರೆ ದಿನೇಶ್ ಗುಂಡೂರಾವ್
ಬೆಂಗಳೂರು, ಜುಲೈ 13: 'ಪಡೆಯ ಕಟ್ಟು ವೀರ ಸಮರ ಕಾದಿದೆ..' ಹಾಡಿನಂತೆ ನೂತನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕಾರ್ಯೋನ್ಮುಖರಾಗಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಬಲ ಎದಿರೇಟು ನೀಡಲು ಯುವಪಡೆಯನ್ನು ಕಟ್ಟಲು ದಿನೇಶ್ ಗುಂಡೂರವ್ ಅವರು ಯೋಜಿಸಿದ್ದಾರೆ. ಹೈಕಮಾಂಡ್‌ನಿಂದಲೂ ಯುವಕರಿಗೆ ಅವಕಾಶ ನೀಡುವಂತೆ ಸೂಚನೆ ಸಹ ಕೆಪಿಸಿಸಿಗೆ ಬಂದಿದೆ.
ತಾಲ್ಲೂಕು ಮಟ್ಟದಿಂದ ಕೆಪಿಸಿಸಿ ಪದಾಧಿಕಾರಿಗಳ ಬದಲಾವಣೆಗೆ ದಿನೇಶ್ ಗುಂಡೂರಾವ್ ಯೋಜಿಸಿದ್ದು, ಹೆಚ್ಚಿನ ಪಾಲು ಯುವಕರಿಗೆ ಆದ್ಯತೆ ನೀಡುವ ಉಮೇದು ಹೊಂದಿದ್ದಾರೆ. ಪದಾಧಿಕಾರಿಗಳ ಬದಲಾವಣೆ ಕಾರ್ಯ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ.

ಜಿ.ಪರಮೇಶ್ ಅವರು ಸತತ 8 ವರ್ಷಗಳ ಕಾಲ ಕೆಪಿಸಿಸಿ ಗದ್ದುಗೆಯಲ್ಲಿದ್ದರು ಹಾಗಾಗಿ ಪದಾಧಿಕಾರಿಗಳ ಬದಲಾವಣೆಗೆ ದೊಡ್ಡ ಮಟ್ಟದಲ್ಲಿ ಆಗಿಲ್ಲ. ಈಗ ಕೆಪಿಸಿಸಿ ಚುಕ್ಕಾಣಿ ದಿನೇಶ್ ಅವರ ಕೈಗೆ ಬಂದಿದ್ದು ಅವರು ಪದಾಧಿಕಾರಿಗಳ ಬದಲಾವಣೆಗೆ ಮುಂದಡಿ ಇಟ್ಟಿದ್ದಾರೆ.
ಕೆಪಿಸಿಸಿ ಚುಕ್ಕಾಣಿಯನ್ನೂ ನಡುವಯಸ್ಸಿನವರಿಗೇ ನೀಡಿರುವ ಹೈಕಮಾಂಡ್ ಸಹ ಯುವಕರಿಗೆ ಹೆಚ್ಚಿನ ಅವಕಾಶ ನೀಡುವಂತೆ ಸೂಚನೆ ನೀಡಿದೆ ಹಾಗಾಗಿ ಪದಾಧಿಕಾರಿಗಳ ಬದಲಾವಣೆ ಹಾಗೂ ಚುನಾವಣಾ ಸಮಿತಿಗಳಲ್ಲಿ ಬಿಳಿ ತಲೆಗಳ ಬದಲಾಗಿ ಕರಿ ತಲೆಗಳನ್ನೇ (ಯುಕವರನ್ನೇ) ಹೆಚ್ಚಾಗಿ ಕಾಣುವ ಸಾಧ್ಯತೆ ದಟ್ಟವಾಗಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆ ಅವರು ಮೊನ್ನೆಯಷ್ಟೆ ಅಧಿಕಾರ ಸ್ವೀಕರಿಸಿದ್ದಾರೆ.












Click it and Unblock the Notifications