ಬಾಲಕೋಟ್ ದಾಳಿ : ದಿನೇಶ್ ಗುಂಡೂರಾವ್ ಟ್ವೀಟ್ ಭಾರಿ ಪ್ರತಿಕ್ರಿಯೆ

ಬೆಂಗಳೂರು, ಮಾರ್ಚ್ 03 : ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಕೋಟ್ ಪ್ರದೇಶದಲ್ಲಿ ಫೆ.26ರಂದು ನಡೆಸಿದ್ದ ವಾಯುದಾಳಿಯ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ದಾಳಿಯಲ್ಲಿ ಉಗ್ರರ ಶಿಬಿರಗಳನ್ನು ನಾಶಪಡಿಸಿದ ಬಗ್ಗೆ ಸಾಕ್ಷಿಗಳನ್ನು ಸಹ ಕೇಳಲಾಗುತ್ತಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಈ ಕುರಿತು ಮಾಡಿರುವ ಒಂದು ಟ್ವೀಟ್‌ಗೆ ಹಲವು ಪ್ರತಿಕ್ರಿಯೆ ಬಂದಿದೆ. ಅಂತರಾಷ್ಟ್ರೀಯ ಮಾಧ್ಯಮಗಳ ವರದಿಗಳನ್ನು ಉಲ್ಲೇಖಿಸಿ ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮಾಡಿದ್ದಾರೆ.

ಬಾಲಕೋಟ್ ಪ್ರದೇಶದಲ್ಲಿ 300 ಉಗ್ರರು ಸಾವನ್ನಪ್ಪಿದ್ದಾರೆ ಎಂಬುದಕ್ಕೆ ರಕ್ಷಣಾ ಇಲಾಖೆ ಸಾಕ್ಷಿಗಳನ್ನು ಒದಗಿಸುತ್ತದೆ ಅಂದುಕೊಂಡಿದ್ದೇನೆ. ನಮ್ಮ ಯೋಧರ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

ಬಾಲಕೋಟ್ ಪ್ರದೇಶದಲ್ಲಿ ನಡೆಸಿದ ವಾಯುದಾಳಿಗೆ ಉಗ್ರರ ನೆಲೆಗಳು ಧ್ವಂಸವಾಗಿರುವ ಬಗ್ಗೆ ನಮ್ಮಲ್ಲಿ ಚಿತ್ರಗಳ ಸಾಕ್ಷಿ ಇದೆ. ಈ ಚಿತ್ರಗಳನ್ನು ಬಹಿರಂಗ ಪಡಿಸುವುದು ಸರ್ಕಾರಕ್ಕೆ ಬಿಟ್ಟ ನಿರ್ಧಾರ ಎಂದು ಭಾರತೀಯ ವಾಯುಪಡೆ ಹೇಳಿದೆ.

ಕಾಂಗ್ರೆಸ್‌ ಯಾಕೆ ಪ್ರೂಫ್ ಕೇಳಿಲ್ಲ

ಅನ್ಕೊಂಡೆ ಕಾಂಗ್ರೆಸ್ನೋರು ಯಾಕಿನ್ನು ಪ್ರೂಫ್ ಕೇಳಿಲ್ಲ ಅಂಥ...ಎಂದು ಪ್ರದೀಪ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಸ್ಪಷ್ಟ ಪಡಿಸೋದು ಮೋದಿ ಕರ್ತವ್ಯ

ಇವರಿಗೆ ಉಗ್ರರ ಶವ ಎಲ್ಲಿ ಎಂದು ಕೇಳೋದು ದೇಶದ್ರೋಹವಂತೆ.
ಸೈನಿಕರು ಹುತಾತ್ಮರಾದಗ ನಮ್ಮ ಪಕ್ಷಕ್ಕೆ 22 ಸೀಟು ಸಿಗುತ್ತೆ ಅನ್ನೋದು ಮಾತ್ರ ದೇಶಪ್ರೇಮ ಆಗಿರಬಹುದಾ? ಎಂದು ಟ್ವೀಟ್‌ಗೆ ರಿಪ್ಲೆ ಮಾಡಲಾಗಿದೆ.

ನಮೋ ಎಗೈನ್ ಎಂದು ರಿಪ್ಲೆ

ಸರ್ಕಾರ ಈ ಬಗ್ಗೆ ಸ್ಪಷ್ಟನೆ ಅಥವ ದಾಖಲೆ ಕೊಡುವುದು ಬೇಡ. ನಮಗೆ ಬಿಜೆಪಿ ಮೇಲೆ ನಂಬಿಕೆ ಇದೆ. 2019ರಲ್ಲೂ ಮರಳಿ ಅಧಿಕಾರಕ್ಕೆ ಬರುತ್ತಾರೆ. ನಮೋ ಎಗೈನ್

ಸೈನಿಕರ ಮಾತು ನಂಬುತ್ತಿಲ್ಲ

ಶತ್ರು ರಾಷ್ಟ್ರದ ಮಾತನ್ನು ನಂಬುತ್ತೀರಾ, ಆದರೆ ನಮ್ಮ ಹೆಮ್ಮೆಯ ಸೈನಿಕ‌ ನಾಯಕರ ಮಾತನ್ನು ನಂಬುತ್ತಿಲ್ಲ.‌ 2014 ಯಿಂದ ಭಾರತ ಅನ್ನುವ ದೇಶವಿತ್ತು ಅನ್ನುವುದಾದರು ನಂಬುತ್ತೀರಾ?

ಪಾಕಿಸ್ತಾನವೇ ಪ್ರೂಫ್ ಕೊಡುತ್ತಿತ್ತು

ಇನ್ನು ಸಿಕ್ಕಿದ ಅವಕಾಶ ಬಿಡುತ್ತಿದ್ದರೆ.ನಿಮ್ಮ ಮಿತ್ರ ಇಮ್ರಾನ್ ಖಂಡಿತವಾಗಿಯೂ ಏನೂ ನಾಶ ಆಗಿಲ್ಲ ಎನ್ನುವ ಪ್ರೂಫ್ ಕೊಡುತ್ತಿದ್ದ.

ಇನ್ನೂ ದೇಶದಲ್ಲಿ ಇದ್ದೀರಾ

ಸ್ವಾಮಿ ದಿನೇಶ್'ರವರೆ, ತಮ್ಮಂತಹವರು ಇನ್ನೂ ಈ ದೇಶದಲ್ಲಿ ಇದ್ದೀರಲ್ಲ ಅನ್ನುವುದೇ ನಮಗೆ ನಾಚಿಕೆಗೇಡಿನ ವಿಷಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+