ಕೊಪ್ಪಳ : ವಿಷ ಸೇವಿಸಿದ ಸ್ವಾಮೀಜಿ ಸ್ಥಿತಿ ಚಿಂತಾಜನಕ

ಕೊಪ್ಪಳ, ಫೆ. 21 : ಕೊಪ್ಪಳದಲ್ಲಿ ಸ್ವಾಮೀಜಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ವಾಮೀಜಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

ಹರ್ಲಾಪುರದ ನಗರಗಡ್ಡಿ ಮಠದ ಶಾಂತಲಿಂಗೇಶ್ವರ ಸ್ವಾಮೀಜಿ (35) ಶುಕ್ರವಾರ ಬೆಳಗ್ಗೆ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದಾರೆ. ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಸ್ವಾಮೀಜಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ಹೇಳಿದ್ದಾರೆ.

police

ವಿಷ ಸೇವನೆ ಏಕೆ : ಪ್ರಾಥಮಿಕ ಮಾಹಿತಿಯಂತೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ವಿಷ ಸೇವಿಸಿದ್ದಾರೆ ಎಂದು ತಿಳಿದುಬಂದಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಸ್ವಾಮೀಜಿಗೆ ಸೇರಿದ 25 ಎಕರೆ ಜಮೀನು ಇದೆ. [ಕೊಪ್ಪಳ : ಸುಟ್ಟ ಗಾಯವಾಗಿದ್ದ ಶಿವಾನಂದ ಶ್ರೀ ಇನ್ನಿಲ್ಲ]

ಕೆಲವು ದಿನಗಳ ಹಿಂದೆ ಜಮೀನನ್ನು ಮಠಕ್ಕೆ ಪಡೆಯಲು ಸ್ವಾಮೀಜಿ ಸಿದ್ಧತೆ ನಡೆಸಿದ್ದರು. ಜಮೀನಿನಲ್ಲಿ ವ್ಯವಸಾಯ ಮಾಡುತ್ತಿರುವವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ, ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. [ಬೀದರ್ ಚೌಳಿ ಮಠದ ಮತ್ತೊಬ್ಬ ಸ್ವಾಮೀಜಿ ಸಾವು]

ಶಿವರಾತ್ರಿ ದಿನ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದ ಜನರು ಜಮೀನನ್ನು ಮಠಕ್ಕೆ ಪಡೆಯದಂತೆ ಒತ್ತಡ ಹೇರಿದ್ದರು. ಈ ಒತ್ತಡದಿಂದ ಬೇಸತ್ತ ಸ್ವಾಮೀಜಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಶಿವಾನಂದ ಸ್ವಾಮೀಜಿ ಪ್ರಕರಣ : ಕೆಲವು ದಿನಗಳ ಹಿಂದೆ ಶರಣೆಯೊಬ್ಬರು ಮೈಮೇಲೆ ಸೀಮೆ­ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ಹೋಗಿ ಗಂಭೀರವಾಗಿ ಗಾಯಗೊಂಡಿದ್ದ ಶಿವಾನಂದ ಸ್ವಾಮೀಜಿ ಮೃತಪಟ್ಟಿದ್ದ ಘಟನೆ ಕೊಪ್ಪಳದಲ್ಲಿ ನಡೆದಿತ್ತು. ಯಲಬುರ್ಗಾ ತಾಲ್ಲೂಕಿನ ಮರಕಟ್ಟೆ ಗ್ರಾಮದಲ್ಲಿರುವ ಗದಗದ ಶಿವಾನಂದ ಸ್ವಾಮಿ ಶಾಖಾ ಮಠದ ಶಿವಾನಂದ ಸ್ವಾಮೀಜಿ ಬಾಗಲ­ಕೋಟೆಯ ಕುಮಾರೇಶ್ವರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+