ವಿಡಿಯೋ : ಕೊಪ್ಪಳದಲ್ಲಿ ಬಿಜೆಪಿ ಮುಖಂಡನ ಐಟಂ ಡ್ಯಾನ್ಸ್

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಕೊಪ್ಪಳ, ಮಾರ್ಚ್ 17 : ಕೊಪ್ಪಳ ಜಿಲ್ಲೆಯ ಬಿಜೆಪಿ ಮುಖಂಡರೊಬ್ಬರ ಐಟಂ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಐಟಂ ಡ್ಯಾನ್ಸ್ ಮಾಡಲು ಯುವತಿಯನ್ನು ಬಾದಾಮಿಯಿಂದ ಕರೆತರಲಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ಬಿಜೆಪಿ ಮುಖಂಡ, ವಿಧಾನ ಪರಿಷತ್ ಮಾಜಿ ಸದಸ್ಯ ಹಾಲಪ್ಪ ಆಚಾರ್ ಅವರ ಶಿಷ್ಯ ರಾಜು ಪಲ್ಲೇದ್ ಎಂಬಾತ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದಾರೆ. ವೇದಿಕೆಯ ಮೇಲೆ ಯುವತಿ ಜೊತೆ ರಾಜು ಅವರು ಕುಣಿದು ಕುಪ್ಪಳಿಸಿರುವ ದೃಶ್ಯ ಇಂದು ಎಲ್ಲಾ ಕಡೆ ಹರಿದಾಡುತ್ತಿದೆ. [ಪಾಕಿಸ್ತಾನ ಗೆದ್ದು ಬಿಟ್ರೆ ಬಟ್ಟೆ ಬಿಚ್ತಾರಂತೆ ಈ ರೂಪದರ್ಶಿ!]

koppal

ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದಲ್ಲಿ ಇತ್ತೀಚಿಗೆ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಆ ನಾಟಕ ಪ್ರದರ್ಶನ ನೋಡಲು ಹೋಗಿದ್ದ ರಾಜು, ನಾಟಕದಲ್ಲಿ ಐಟಂ ಡ್ಯಾನ್ಸ್ ಮಾಡಲು ಕರೆತಂದಿದ್ದ ಯುವತಿಯ ಜೊತೆ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾರೆ. [ಕ್ಯಾಪ್ಟನ್ ಕೂಲ್ ಧೋನಿ ಧೋತಿ ಡ್ಯಾನ್ಸ್ ವಿಡಿಯೋ]

ಎರಡು ತಿಂಗಳ ಹಿಂದೆ ನಾಟಕ ಆಯೋಜನೆ ಮಾಡಲಾಗಿತ್ತು, ಅಲ್ಲಿ ಬಿಜೆಪಿ ಮುಖಂಡ ಹಾಗೂ ವಕೀಲನಾಗಿರುವ ರಾಜು ಪಲ್ಲೇದ್ ನೃತ್ಯಗಾರ್ತಿಯೊಂದಿಗೆ ಐಟಂ ಡ್ಯಾನ್ಸ್ ಮಾಡಿದ್ದಾನೆ. ಸಾಮಾಜಿಕ ತಾಣದಲ್ಲಿ ಇದಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Raja Palled BJP leader of Koppal district, Karnataka is seen having a good time with a dancer. The person dancing along with the woman is said to be a close aid of Former MLC. This footage has gone viral on social media.
Please Wait while comments are loading...