ಮೋದಿ ಒಬ್ಬ ಹಿಟ್ಲರ್, ಡಿವಿಎಸ್ ಮೇಲೆ ಕೇಸ್ : ಸಿದ್ದು

ಬೆಂಗಳೂರು/ ಕೊಪ್ಪ,, ಮಾ.30: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರ ಪರ ಚುನಾವಣಾ ಪ್ರಚಾರ ಭಾಷಣಕ್ಕೆ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಮತ್ತೊಮ್ಮೆ ಹರಿ ಹಾಯ್ದಿದ್ದಾರೆ. ಮೋದಿ ಒಬ್ಬ ನರಹಂತಕ ಎಂದಿದ್ದ ಸಿದ್ದರಾಮಯ್ಯ ಅವರು ಮೋದಿಯನ್ನು ಹಿಟ್ಲರ್ ಗೆ ಹೋಲಿಸಿದ್ದಾರೆ.

ಮೋದಿ ಆರೆಸ್ಸೆಸ್ ನ ಹಾರ್ಡ್ ಕೋರ್ ಸದಸ್ಯ. ಅವರು 'ಹರ ಹರ ಮೋದಿ' ಅಲ್ಲ, 'ನರ ಹರ ಮೋದಿ' ಎಂದೆಲ್ಲ ಕರೆದಿದ್ದ ಸಿಎಂ ಸಿದ್ದರಾಮಯ್ಯ ಅವರು ಇಲ್ಲಿನ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ತಮ್ಮ ವಾಕ್ಸಮರ ಮುಂದುವರೆಸಿದರು. ತಮ್ಮ ಪ್ರಚಾರ ಭಾಷಣದಲ್ಲಿ ಮೋದಿ ಅವರನ್ನು ರಷ್ಯಾದ ಮುಸಲೋನಿ, ಜರ್ಮನಿಯ ಹಿಟ್ಲರ್ ಗೆ ಹೋಲಿಸಿದರು.

ಮೋದಿ ಒಬ್ಬ ಫ್ಯಾಸಿಸ್ಟ್, ಸ್ವಜನಾಂಗವೇ ಶ್ರೇಷ್ಠ ಎಂಬುವುದರಲ್ಲಿ ನಂಬಿಕೆ ಇರುವವರು. ಬೇರೆ ಧರ್ಮಿಯರನ್ನು ತೀವ್ರವಾಗಿ ವಿರೋಧ ಮಾಡುವುದರಲ್ಲಿ ಮೊದಲಿಗರು ಎಂದು ಟೀಕಿಸಿದರು. ಜತೆಗೆ, ಮೋದಿ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ಆರ್ಎಸ್ಎಸ್, ಸಂಘ ಪರಿವಾರದ ರಾಜಕೀಯದ ತಂತ್ರಗಾರಿಕೆ ಎಂದು ಆರೋಪಿಸಿದರು.

CM Siddaramaiah compares Modi to Hitler

ಡಿವಿಎಸ್ ವಿರುದ್ಧ ಕೇಸ್: ಬಿಬಿಎಂಪಿ ಅಧಿಕಾರಿಗಳಿಂದ ಹಫ್ತ ವಸೂಲಿ ಮಾಡಲಾಗುತ್ತಿದೆ ಎಂದು ಆಧಾರ ರಹಿತ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

ಚಿಕ್ಕಮಗಳೂರು ಪ್ರವಾಸ ಮುಗಿಸಿ ಹಿಂತಿರುಗಿದ ಮೇಲೆ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಬೇಜವಾಬ್ದಾರಿ ಆರೋಪಗಳನ್ನು ಸಹಿಸುವುದಿಲ್ಲ. ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ನನ್ನ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ತೀರ್ಮಾನ ಮಾಡಿದ್ದೇನೆ ಎಂದರು.

ಬಿಜೆಪಿ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ನಿನ್ನೆ ಸರ್ಕಾರದ ವಿರುದ್ಧ ಬಿಡುಗಡೆ ಮಾಡಿರುವ ಕಿರು ಹೊತ್ತಿಗೆ ಶುದ್ಧಾಂಗ ಸುಳ್ಳು. ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿರುವುದು ಸುಳ್ಳೆ. ಬಿಜೆಪಿಯವರು ಸುಖಾಸುಮ್ಮನೆ ಈ ರೀತಿ ಆರೋಪ ಮಾಡುವುದನ್ನು ಇನ್ನು ಮುಂದಾದರೂ ಬಿಡಬೇಕು. ನನ್ನ ವಿರುದ್ಧ ಹಗರಣ ಮತ್ತು ಭ್ರಷ್ಟಾಚಾರದ ಆರೋಪ ಮಾಡುವ ನಾಯಕರು ದಾಖಲೆಗಳನ್ನು ಬಿಡುಗಡೆ ಮಾಡಿ ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.

30 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ರಾಜಕೀಯ ಮಾಡಿದ್ದೇನೆ. ಬೇಕಾಬಿಟ್ಟಿ ಆರೋಪ ಮಾಡುವವರು ದಾಖಲೆ ಬಿಡುಗಡೆ ಮಾಡಿ ಸಾಬೀತು ಮಾಡಲಿ ಎಂದು ಪುನರುಚ್ಚರಿಸಿದರು. ಈ ಬಾರಿಯ ಚುನಾವಣೆಯಲ್ಲಿ ಹಳೆ ಮೈಸೂರು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+