ಕತ್ತು ಸೀಳಿ ಅವಿವಾಹಿತ ಒಬ್ಬಂಟಿ ಮಹಿಳೆಯ ಕೊಲೆ

kolar-home-alone-unmarried-woman-brutally-murdered
ಕೋಲಾರ, ಜೂನ್ 2: ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಧ್ಯವಯಸ್ಸಿನ ಮಹಿಳೆಯನ್ನು ಕ್ರೂರವಾಗಿ ಕೊಲೆ ಮಾಡಲಾಗಿದೆ. ಮೃತ ಮಹಿಳೆ ಅವಿವಾಹಿತತಾಗಿದ್ದು, ಒಬ್ಬಂಟಿಯಾಗಿ ವಾಸವಾಗಿದ್ದರು.

43 ವರ್ಷದ ಮಂಜುಳಾ ಬರ್ಬರವಾಗಿ ಹತ್ಯೆಯಾದ ಮಹಿಳೆ. ಇವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ತಾತ್ಕಾಲಿಕ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು.

ಗೌರಿಪೇಟೆಯಲ್ಲಿ ತಾಯಿಯೊಂದಿಗೆ ವಾಸವಿದ್ದ ಮಂಜುಳಾ ಕಳೆದ ಮೂರು ತಿಂಗಳ ಹಿಂದಷ್ಟೇ ಮಹಾಲಕ್ಷ್ಮಿ ಬಡಾವಣೆಯಲ್ಲಿ ಬಾಡಿಗೆ ಮನೆ ಮಾಡಿ, ನಾಲ್ಕನೆಯ ಮಹಡಿಯಲ್ಲಿ ವಾಸವಾಗಿದ್ದರು. ಇವರ ತಾಯಿ ಮಹಡಿ ಮನೆಗೆ ಬಾರದೆ ಪ್ರತ್ಯೇಕಕವಾಗಿ ವಾಸವಾಗಿದ್ದಾರೆ. (ಆನೇಕಲ್ಲಿನಲ್ಲು ನಡೆದಿದೆ ಅಮಾನುಷ ರೇಪ್ ಹತ್ಯೆ)

ಭಾನುವಾರ ರಾತ್ರಿ ವೇಳೆ ಮನೆಗೆ ಬಂದ ಆಗಂತಕರು ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ 9.30ರಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಎಎಸ್‌ಪಿ ಜಮೀಲ್, ಸಿಪಿಐ ಶಿವಕುಮಾರ್, ನಗರ ಠಾಣೆ ಎಸ್‌ಐ ಸುಧಾಕರ್, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಹತ್ಯೆಗೆ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಹಂತಕರು ಯಾರು ಎಂಬುದೂ ಇನ್ನೂ ಪತ್ತೆಯಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+