ಕೋಲಾರ ಸೇರಿ 4 ಜಿಲ್ಲೆಗಳಿಗೆ 24 ಟಿಎಂಸಿ 'ಜಲಭಾಗ್ಯ' : ಸಿದ್ದರಾಮಯ್ಯ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 06: ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಯ ಜನತೆಗೆ ಕುಡಿಯುವ ನೀರು ಒದಗಿಸಲು ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಸಂಶಯಬೇಡ. ವಿವಿಧ ಯೋಜನೆಗಳಿಂದ ಈ ನಾಲ್ಕು ಜಿಲ್ಲೆಗಳಿಗೆ 24 ಟಿಎಂಸಿ ನೀರನ್ನು ಹರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಭಾನುವಾರ(ಮಾರ್ಚ್ 06) ನಡೆದ ರೈತ ಪ್ರಮುಖರ ಸಭೆಯ ನಂತರ ಬರ ಪೀಡಿತ ಜಿಲ್ಲೆಗಳಿಗೆ ಕಾಂಗ್ರೆಸ್ ಸರ್ಕಾರ 'ಜಲ ಭಾಗ್ಯ' ಘೋಷಿಸಿದೆ.[ನಾಲ್ಕು ಜಿಲ್ಲೆಗಳ ಕುಡಿಯುವ ನೀರಿನ ಕನಸು ನನಸು!]

ರೈತ ಪರ ಕಾಳಜಿ: ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ, ರೈತರ ಸಮಸ್ಯೆಗಳನ್ನು ಎಂದಿಗೂ ನಿರ್ಲಕ್ಷಿಸಿಲ್ಲ. ರೈತರ ಹೋರಾಟ ಹತ್ತಿಕ್ಕುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ನಾನು ಕೂಡ ರೈತ ಕುಟುಂಬದಿಂದಲೇ ಬಂದವನು. ಹೀಗಾಗಿ ರೈತರ ಮೇಲೆ ಯಾವುದೇ ರೀತಿಯಲ್ಲಿ ಬಲ ಪ್ರಯೋಗಿಸುವುದಿಲ್ಲ. ಕನಸಿನಲ್ಲೂ ಬಲ ಪ್ರಯೋಗದ ಬಗ್ಗೆ ಯೋಚಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.[ಲಾಠಿ ಚಾರ್ಜ್: ರೈತರ ಮೇಲಿನ ಎಲ್ಲ ಪ್ರಕರಣ ಹಿಂದಕ್ಕೆ]

ಚಳವಳಿ ಕೈಬಿಡುವಂತೆ ರೈತ ಹೋರಾಟಗಾರರಲ್ಲಿ ಮನವಿ. ರೈತರ ವಿರುದ್ಧದ ಎಲ್ಲಾ ಕೇಸುಗಳನ್ನು ಹಿಂಪಡೆಯುವುದು ಎಲ್ಲವೂ ಸುದ್ದಿಗೋಷ್ಠಿ ಮುಖ್ಯಾಂಶವಾಗಿತ್ತು. ಇನ್ನಷ್ಟು ವಿವರಕ್ಕಾಗಿ ಮುಂದೆ ಓದಿ..

ಸಿಎಂ ಸಿದ್ದರಾಮಯ್ಯ ಅವರ ಸುದ್ದಿಗೋಷ್ಠಿ ವಿವರ

ಸಿಎಂ ಸಿದ್ದರಾಮಯ್ಯ ಅವರ ಸುದ್ದಿಗೋಷ್ಠಿ ವಿವರ

* ಎತ್ತಿನ ಹೊಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಪ್ರತ್ಯೇಕ ನೀರಾವರಿ ನಿಗಮ ರಚನೆ. * * ಶರಾವತಿ, ಕೃಷ್ಣಾ ಸೇರಿದಂತೆ ಇತರ ನೀರಿನ ಮೂಲಗಳಿಂದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಹರಿಸುವ ಸಾಧ್ಯತೆ ಬಗ್ಗೆ ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆ.
* ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ನೀರು ತುಂಬುವ ಯೋಜನೆ ಬಗ್ಗೆ ಸಮನ್ವಯ ಸಮಿತಿ ರಚನೆ

ಸಭೆಯಲ್ಲಿ ಮುಖಂಡರಿಗೆ ಮಾತ್ರ ಅವಕಾಶ

ಸಭೆಯಲ್ಲಿ ಮುಖಂಡರಿಗೆ ಮಾತ್ರ ಅವಕಾಶ

ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆಂಜನೇಯ ರೆಡ್ಡಿ, ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಜಲ ಸಂಪನ್ಮೂಲ ಖಾತೆ ಸಚಿವರಾದ ಎಂ.ಬಿ. ಪಾಟೀಲ್, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜನ ಪ್ರತಿನಿಧಿಗಳು, ರೈತ ಹೋರಾಟಗಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಿದ್ದರಾಮಯ್ಯ ಅವರ ಭರವಸೆಯಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರು ಸಂತಸದಲ್ಲಿದ್ದರು. ಆದರೆ, 2 ವರ್ಷದಲ್ಲಿ ಯೋಜನೆ ಮುಕ್ತಾಯ ಸಾಧ್ಯವೆ ಎಂದಾಗ ಸಿಎಂ ಅವರು ಕಾಲಮಿತಿ ಬಗ್ಗೆ ಭರವಸೆ ನೀಡಲಾರೆ ಎಂದು ಬಿಟ್ಟರು.

ಎತ್ತಿನ ಹೊಳೆ ಯೋಜನೆಯಿಂದ 24 ಟಿಎಂಸಿ

ಎತ್ತಿನ ಹೊಳೆ ಯೋಜನೆಯಿಂದ 24 ಟಿಎಂಸಿ

ಸುಮಾರು 13 ಸಾವಿರ ಕೋಟಿ ವೆಚ್ಚದ ಎತ್ತಿನ ಹೊಳೆ ಯೋಜನೆಯಿಂದ 24 ಟಿಎಂಸಿ ಒದಗಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ತುಮಕೂರು ಜಿಲ್ಲೆಗೆ 14 ಟಿಎಂಸಿ ಅಡಿ ನೀಡಲಾಗುತ್ತದೆ. ಕೊರಟಗೆರೆ, ಮಧುಗಿರಿ, ಪಾವಗಡ ತಾಲೂಕಿನ ಬರ ಇದರಿಂದ ನೀಗಲಿದೆ. ದೇವರಾಯನ ದುರ್ಗದಲ್ಲಿ 10 ಟಿಎಂಸಿ ಅಡಿ ಜಲಾಗಾರ ನಿರ್ಮಿಸಲು ಯೋಜಿಸಲಾಗಿದೆ. ಇದರಿಂದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಹರಿಸಲಾಗುತ್ತದೆ.

ಡಾ: ಪರವಶಿವಯ್ಯ ಅವರ ವರದಿ ಆಧಾರಿತ

ಡಾ: ಪರವಶಿವಯ್ಯ ಅವರ ವರದಿ ಆಧಾರಿತ

ರಾಜ್ಯಕ್ಕೆ 41 ನೀರಾವರಿ ಯೊಜನೆಗಳನ್ನು ನೀಡಿ ಯಶಸ್ವಿಯಾಗಿರುವ ನೀರಾವರಿ ತಜ್ಞ ಡಾ: ಪರವಶಿವಯ್ಯ ಅವರ ವರದಿಯಂತೆ ಎತ್ತಿನಹೊಳೆ ಯೋಜನೆಯೊಂದೇ ಕೋಲಾರ ಜಿಲ್ಲೆ ಬರಕ್ಕೆ ಪರಿಹಾರವಾಗಬಲ್ಲುದು ಎಂದು ಆ ಭಾಗದ ರೈತರು, ಜನ ಸಾಮಾನ್ಯರು ನಂಬಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಳ್ಳಲು ಎಲ್ಲಾ ರೈತರಿಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳುತ್ತಿದ್ದಂತೆ, ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ಆರಂಭವಾಯಿತು. ಈ ಕಹಿ ಘಟನೆ ನಡುವೆ ಸಭೆ ಮುಕ್ತಾಯವಾಯಿತು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Siddaramaiah led Congress government on Sunday(March 06) assured the drought hit Kolar, Chikkaballapur, Bengaluru rural and Tumakuru districts will get 24 TMC of water from various sources including Yettinahole, Upper Bhadra project.
Please Wait while comments are loading...