ರಾಜ್ಯದಿಂದ ಪ್ರತ್ಯೇಕವಾಗಲು ಕೊಡವರ ಹೋರಾಟಕ್ಕೆ ವೇದಿಕೆ ಸಜ್ಜು

Kodavas demanding for seperate state, huge protest organized on Jan 21
ಬೆಂಗಳೂರು, ಜ 20: ಕೇಂದ್ರ ಸರಕಾರ ಲ್ಯಾಂಡ್ ಮಸೂದೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗಿತ್ತು. ಕೊಡಗು ಮತ್ತು ಕೊಡವರನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿವೆ, ಹಾಗಾಗಿ ಪ್ರತ್ಯೇಕ ಕೊಡವ ರಾಜ್ಯ ರಚನೆಗೆ ಬೇಡಿಕೆ ಇಡುತ್ತಿದ್ದೇವೆ. ಈ ಸಂಬಂಧ ಕೊಡವ ನ್ಯಾಷನಲ್ ಕೌನ್ಸಿಲ್ ಮಂಗಳವಾರ (ಜ 21) ಪುರಭವನದ ಎದುರು ಭಾರೀ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಕೌನ್ಸಿಲ್ ಅಧ್ಯಕ್ಷ ಎನ್ ಯು ನಾಚಪ್ಪ ಹೇಳಿದ್ದಾರೆ.

ತೆಲಂಗಾಣ ಮಾದರಿಯಲ್ಲೇ ಪ್ರತ್ಯೇಕ ರಾಜ್ಯ ರಚನೆಗಾಗಿ ಮುಂದಿನ ದಿನದಲ್ಲಿ ಹೋರಾಟ ತೀವ್ರಗೊಳಿಸುತ್ತೇವೆ. ಸಾಮಾಜಿಕವಾಗಿ, ರಾಜಕೀಯ ಮತ್ತು ಭಾಷೆಯ ಆಧಾರದಲ್ಲಿ ಕೊಡಗು ತನ್ನ ಅಸ್ತಿತ್ವವನ್ನು ಇನ್ನೂ ಉಳಿಸಿಕೊಂಡು ಬಂದಿದೆ. ಆದರೆ ಸರಕಾರ ನಮ್ಮ ಯಾವುದೇ ಬೇಡಿಕೆಗಳಿಗಾಗಲಿ, ರಾಜ್ಯದ ಅಭಿವೃದ್ದಿಗಾಗಲಿ ಗಮನ ಹರಿಸುತ್ತಿಲ್ಲ ಎಂದು ನಾಚಪ್ಪ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. (ಕೊಡವರನ್ನು ನಾನು ಅಪಮಾನಿಸಿಲ್ಲ : ಕೋ.ಚ)

ತೆಲಂಗಾಣ ಭಾಗಕ್ಕಿಂತಲೂ ಕೊಡಗು ಚಾರಿತ್ರಿಕ ಹಿನ್ನಲೆಯನ್ನು ಹೊಂದಿದೆ. ಲ್ಯಾಂಡ್ ಮಸೂದೆಯ ಅನ್ವಯ ಪ್ರತ್ಯೇಕ ರಾಜ್ಯ ರಚನೆಯ ಬಗ್ಗೆ ನಮ್ಮ ಬೇಡಿಕೆಯನ್ನು ಕೇಂದ್ರ ಸರಕಾರ ಒಪ್ಪಿಕೊಳ್ಳುತ್ತದೆ ಎನ್ನುವ ನಂಬಿಕೆಯಲ್ಲಿದ್ದೇವೆ, ಪ್ರತ್ಯೇಕ ರಾಜ್ಯ ರಚನೆಯ ಜೊತೆ ನಮ್ಮ ಇತರ ಐದು ಬೇಡಿಕೆಗಳನ್ನು ಸರಕಾರದ ಮುಂದಿಡುತ್ತಿದ್ದೇವೆ ಎಂದು ನಾಚಪ್ಪ ಹೇಳಿದ್ದಾರೆ.

ಮಂಗಳವಾರ ಬೆಳಗ್ಗೆ 9 ಗಂಟೆಗೆ ನಗರದ ಪುರಭವನದ ಮುಂದೆ ಭಾರೀ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಮ್ಮ ಇತರ ಬೇಡಿಕೆಗಳೆಂದರೆ:

> ಲೋಕಸಭೆ ಮತ್ತು ವಿಧಾನಸಭೆಯಲ್ಲಿ ನಾಮ ನಿರ್ದೇಶನದ ಪ್ರಾತಿನಿಧ್ಯವನ್ನು ಕೊಡವರಿಗೂ ನೀಡುವುದು.
> ಬಂದೂಕು ಪರವಾನಿಗೆ ವಿನಾಯತಿ ಹಕ್ಕು.
> ಕೊಡವರಿಗೆ ಜಾಗತಿಕ ಮಾನ್ಯತೆ ನೀಡುವುದು.
> ಕೊಡವರನ್ನು ಪ್ರಾಚೀನ ಭಾಷಾ ಅಲ್ಪಸಂಖ್ಯಾತ ಬುಡಕಟ್ಟು ಜನಾಂಗ ಎಂದು ಪರಿಗಣಿಸುವುದು.
> ಉದ್ಯೋಗ, ಶಿಕ್ಷಣ ಮತ್ತು ಆರ್ಥಿಕ ವಲಯದಲ್ಲಿ ಮೀಸಲಾತಿ ನೀಡುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+