ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನಲ್ಲಿ ಕಾಡಾನೆ ದಾಳಿಗೆ ಇಬ್ಬರು ಮಹಿಳೆಯರು ಬಲಿ

|
Google Oneindia Kannada News

ಕೊಡಗು, ಡಿ. 30 : ಎರಡು ಪ್ರತ್ಯೇಕ ಪ್ರಕರಣದಲ್ಲಿ ಜಿಲ್ಲೆಯ ಎರಡು ಕಡೆ ಸೋಮವಾರ ನಡೆದ ಕಾಡಾನೆ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಇಬ್ಬರು ಮೃತಪಟ್ಟರೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು.

ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟವರನ್ನು ಕಾವಡಿ ಗ್ರಾಮದ ಪುಟ್ಟಿಚಂಡ ದಿ.ದೇವಯ್ಯ ಅವರ ಪತ್ನಿ ಕಂದಾ ಪೂವಮ್ಮ (70) ಹಾಗೂ ತಿತಿಮತಿ ಗ್ರಾಮದ ವಿನಾಯಕ ನಗರದ ಮಂಜ ಎಂಬುವವರ ಪತ್ನಿ ಲಕ್ಷ್ಮಿ (35) ಎಂದು ಗುರುತಿಸಲಾಗಿದೆ. [ಬೆಳಗಾವಿಯ ನರಭಕ್ಷಕ ಹುಲಿ ಗುಂಡೇಟಿಗೆ ಬಲಿ]

Elephant

ಹೊಳಮಾಳ ಗ್ರಾಮದಲ್ಲಿರುವ ಮಗಳ ಮನೆಗೆ ಕಂದಾ ಪೂವಮ್ಮ ಅವರು ಬಂದಿದ್ದರು. ಸೋಮವಾರ ಬೆಳಗ್ಗೆ 7.30ರ ಸುಮಾರಿಗೆ ಮನೆಯ ಅಂಗಳದಲ್ಲಿ ಓಡಾಡುತ್ತಿದ್ದ ಅವರ ಮೇಲೆ ಒಂಟಿ ಸಲಗ ದಾಳಿ ಮಾಡಿದೆ. ಗಂಭೀರವಾಗಿ ಗಾಯಗೊಂಡ ಪೂವಮ್ಮ ಅವರನ್ನು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. [ಜಂಬೂ ಸವಾರಿಯ ಆನೆ 'ಕಾಂತಿ' ಇನ್ನು ನೆನಪು ಮಾತ್ರ]

ತಿತಿಮತಿ ಬಳಿ ಮತ್ತೊಂದು ದಾಳಿ : ತಿತಿಮತಿ ಗ್ರಾಮದ ಲಕ್ಷ್ಮಿ ಅವರು ಮಧ್ಯಾಹ್ನ 12ರ ಸುಮಾರಿಗೆ ಮನೆಯ ಸಮೀಪದ ಕಾಡಿನಂಚಿನ ಪ್ರದೇಶಕ್ಕೆ ಬಹಿರ್ದೆಸೆಗೆ ತೆರಳಿದ್ದಾಗ ಕಾಡಾನೆ ದಾಳಿ ನಡೆಸಿದ್ದು, ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಗ್ರಾಮದ ಸುತ್ತಮುತ್ತ ಕಾಡಾನೆ ಉಪಟಳ ಹೆಚ್ಚಾಗಿದೆ. ಅರಣ್ಯ ಇಲಾಖೆ ಶೀಘ್ರ ಕ್ರಮಕೈಗೊಂಡು ಕಾಡಾನೆಯನ್ನು ಗ್ರಾಮಕ್ಕೆ ನುಸುಳದಂತೆ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

English summary
Two women died in separate incidents after they were attacked by elephants in interior Thithimathi and Palibetta villages of Kodagu district on Monday. The victims have been identified as Puttichanda Poovamma (70) and Lakshmi (35).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X