Government employees: ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವೇತನದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ
Government employees: ನಿವೃತ್ತಿ ವೇತನ ನಿಯಮಗಳ ಕುರಿತು ಕರ್ನಾಟಕ ನಾಗರೀಕ ಸೇವಾ ನಿಯಮಗಳು- 1958ರ ಭಾಗ-4ರಲ್ಲಿ ಪ್ರಸ್ತಾಪಿಸಿರುವ ಪ್ರಮುಖ ಮಾಹಿತಿಗಳ ಬಗ್ಗೆ ರಾಜ್ಯ ಸರ್ಕಾರಿ ನೌಕರರು ಗಮನಿಸಬೇಕಾದ ಪ್ರಮುಖಾಂಶಗಳು ಇಲ್ಲಿವೆ ನೋಡಿ.
* ಸಾಮಾನ್ಯ ಜನರಂತೆ ಸರ್ಕಾರಿ ನೌಕರರು ಸಹ ಶಕ್ತಿಯಿರುವವರೆಗೆ ದುಡಿಯುತ್ತಾರೆ.
* ವಯಸ್ಸು ಆದಂತೆ ಕರ್ತವ್ಯ ದಕ್ಷತೆ ಕಡಿಮೆ ಆಗುತ್ತದೆ.
* ಆರಂಭದಲ್ಲಿ ಇದ್ದ ಕೆಸಲದ ಮೇಲಿನ ಉತ್ಸಾಹ ಕೊನೆವರೆಗೂ ಇರುವುದಿಲ್ಲ. ಇದರಿಂದ ಸಾರ್ವಜನಿಕರ ಕೆಲಸಗಳು ವಿಳಂಬಿಸುತ್ತವೆ
* ಹೊಸತಲೆಮಾರಿಗೆ ಉದ್ಯೋಗದ ಅವಶ್ಯಕತೆ ಇದ್ದು, ಅದಕ್ಕಾಗಿ ನಿವೃತ್ತಿ ಅನಿವಾರ್ಯ ಆಗುತ್ತದೆ.
* ನಿವೃತ್ತಿಯ ವಯಸ್ಸು ಆಯಾ ದೇಶಗಳ ನಿಮಗಳು ಹಾಗೂ ಜೀವಿತಾವಧಿಯನ್ನು ಅವಲಂಬಿಸಿರುತ್ತದೆ. ಯುಎಸ್‌ಎನಲ್ಲಿ ಜೀವಿತಾವಧಿ ವಯಸ್ಸು 65-70, ಬ್ರಿಟನ್‌ನಲ್ಲಿ ಜೀವಿತಾವಧಿ ವಯಸ್ಸು 60-65 ವರ್ಷ ಆಗಿದ್ದರೆ, ಭಾರತದಲ್ಲಿ ಮಾತ್ರ ಜೀವಿತಾವಧಿ ವಯಸ್ಸು 55-60 ವರ್ಷ ಆಗಿದೆ.

ನಿವೃತ್ತಿ ಸೌಲಭ್ಯಗಳ ಸಿದ್ದಾಂತಗಳು
* ಪ್ರತಿಯೊಂದು ದೇಶದಲ್ಲೂ ಸಹ ಸರ್ಕಾರಿ ಸೇವೆಯಿಂದ ನಿವೃತ್ತರಾದವರಿಗೆ ಅವರ ಇಳಿವಯಸ್ಸಿನಲ್ಲಿ ಪರಿಹಾರವಾಗಿ ಮಾಸಿಕ ಹಿಡಿಗಂಟಾಗಿ ಹಣವನ್ನು ಪಾವತಿದಲಾಗುತ್ತಿದೆ. ಇದಕ್ಕಾಗಿ ಅಯವ್ಯಯದಲ್ಲಿ ಸರ್ಕಾರ ಹಣವನ್ನು ಕಾಯ್ದಿರಿಸುತ್ತದೆ.
* ಈ ರೀತಿಯ ವ್ಯವಸ್ಥೆ ಇಲ್ಲದಿದ್ದರೆ, ನೌಕರನು ಸಾಯುವತನಕ ವಿರಾಮವಿಲ್ಲದೆ ದುಡಿಯಬೇಕಿತ್ತು. ಇನ್ನು ವಯಸ್ಸಾದ ನೌಕರರ ಸಂಖ್ಯೆ ಹೆಚ್ಚಳವಾಗಿ ಆಡಳಿತ ದುರ್ಬಲವಾಗುತ್ತಿದೆ.
* ಅಲ್ಲದೆ ಈ ವ್ಯವಸ್ಥೆಗಳು ಇಲ್ಲದಿದ್ದರೆ, ನೌಕರನ ಜೀವನ ತುಂನಾ ಕಷ್ಟಕರವಾಗುತಿತ್ತು.
ನಿವೃತ್ತಿಯಾದಾಗ ದೊರೆಯುವ ಸೌಲಭ್ಯಗಳು
1.ನಿವೃತ್ತಿ ವೇತನ
2.ಸೇವಾ ಉಪದಾನ
3.ಪರಿವರ್ತಿತ ಪಿಂಚಣಿ
4.ಸೇವಾಂತ್ಯದಲ್ಲಿ ಉಳಿದಿರುವ ಗಳಿಕೆರಜೆ ನಗದೀಕರಣ ಸೌಲಭ್ಯ
5.ಸಾಮೂಹಿಕ ವಿಮಾ ಯೋಜನೆ ಉಳಿತಾಯ ನಿಧಿ ಮೊತ್ತ
6.ಸಾಮಾನ್ಯ ಭವಿಷ್ಯ ನಿಧಿ ಮೊತ್ತ
7.ನಿವೃತ್ತಿ ಸ್ಥಳಕ್ಕೆ ಪ್ರಯಾಣ ಮಾಡಿದಾಗ ಉಂಟಾಗುವ ವೆಚ್ಚಗಳು
ಸೇವೆಯಲ್ಲಿ ಮರಣ ಹೊಂದಿದಾಗ ಸಿಗುವ ಸೌಲಭ್ಯಗಳು
1.ಕುಟುಂಬ ನಿವೃತ್ತಿ ವೇತನ
2.ಮರಣ ಉಪದಾನ
3.ಮರಣ ಹೊಂದಿದ ದಿನದಂದು ಉಳಿದಿರುವ ಗಳಿಕೆರಜೆ ನಗದೀಕರಣ ಸೌಲಭ್ಯ
5.ಸಾಮೂಹಿಕ ವಿಮಾ ಯೋಜನೆ ವಿಮಾನಿಧಿ & ಉಳಿತಾಯ ಮೊತ್ತ
6.ಸಾಮಾನ್ಯ ಭವಿಷ್ಯ ನಿಧಿ ಮೊತ್ತ
7.ಸ್ವಗ್ರಾಮಕ್ಕೆ ಪ್ರಯಾಣ ಮಾಡಿದಾಗ ಉಂಟಾಗುವ ವೆಚ್ಚಗಳು
ಸಾಮಾನ್ಯ ನಿವೃತ್ತಿ ವೇತನದ ನಿಯಮಗಳು
* ನಿವೃತ್ತಿ ವೇತನ ಎಂದರೆ ನಿವೃತ್ತಿ ವೇತನ ಹಾಗೂ ಸೇವಾ ಉಪದಾನ ಸೇರಿರುತ್ತದೆ.
* ನಿವೃತ್ತಿ ವೇತನವನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರಿ ಕಚೇರಿ ಮುಖ್ಯಸ್ಥರಾಗಿರುತ್ತಾರೆ.
* ನಿವೃತ್ತಿ ವೇತನ ಪಡೆಯಲು ಸರ್ಕಾರಿ ನೌಕರ ಒಳ್ಳೆಯ ನಡತೆಯನ್ನು ಹೊಂದಿರಬೇಕು.
* ನಿವೃತ್ತಿ ವೇತನ ಪಡೆಯುವ ನೌಕರನು ಅಪರಾಧಿ ಅಥವಾ ತಪ್ಪಿತಸ್ಥನೆಂದು ತಿಳಿದು ಬಂದರೆ ಅಂತಹವರಿಗೆ ನಿವೃತ್ತಿ ವೇತನವನ್ನು ತಡೆಯಿಡಿಯಬಹುದು ಅಥವಾ ಭಾಗಶಃ ಅಥವಾ ಸಂಪೂರ್ಣ ಹಿಂತೆಗೆದುಕೊಳ್ಳಬಹುದು.
* ದುರ್ವತ್ರನೆಗಾಗಿ ಅಥವಾ ನಿರ್ಲಕ್ಷ್ಯಕ್ಕಾಗಿ ನಿವೃತ್ತಿ ವೇತನವನ್ನು ತಡೆಯಿಡಿಯಬಹುದು.
* ಕಡ್ಡಾಯ ನಿವೃತ್ತಿ ವಯಸ್ಸನ್ನು ತಲುಪಿ ಅಥವವಾ ನಿವೃತ್ತಿ ದಿನಾಂಕದಂದು ಅಮಾನತ್ತು ಆದರೆ ಅವರಿಗೆ ತಾರ್ತ್ತೂತಿಕ ಪಿಂಚಣಿ ಮಂಜೂರು ಮಾಡಬೇಕು.
ನಿವೃತ್ತಿ ವೇತನ ಪಾವತಿ ಸಿದ್ದಾಂತಗಳು
* ಪ್ರಸ್ತಾಪಿಸಿದ ಸಿದ್ದಾಂತಗಳು ಆಯಾ ರಾಷ್ಟ್ರದ ಸಂವಿಧಾನದ ಆಧಾರದ ಮೇಲೆ ಬಗೆಹರಿಸಲ್ಪಡುತ್ತವೆ.
* ಕೆಲವೊಂದು ರಾಷ್ಟ್ರಗಳಲ್ಲಿ ಪಿಂಚಣಿಯನ್ನು ಹಕ್ಕೆಂದು ನ್ಯಾಯಲಯಗಳಲ್ಲಿ ಪ್ರತಿಪಾದಿಸಲಾಗುತ್ತಿದೆ.
* ನಮ್ಮ ದೇಶದಲ್ಲಿ ಅನುಮೋದಿತ ಸರ್ಕಾರಿ ಸೇವೆಗೆ ಪಿಂಚಣಿ ನೀಡುವ ಕುರಿತು ಸರ್ಕಾರ ತನ್ನ ಆಧಿಕಾರವನ್ನು ಕಾಯ್ದಿರಿಸಿಕೊಂಡಿದೆ
* ವಿವಿಧ ತರಬೇತಿಗಳಲ್ಲಿ ಕಳೆದ ಅವಧಿಯನ್ನು ಅರ್ಹತಾದಾಯಕ ಸೇವೆಗೆ ಪರಿಗಣಿಸಬೇಕು.
* ಅಮಾನತ್ತಿನ ಅವಧಿಯನ್ನು ಅಮಾನತ್ತು ಎಂದು ಪರಿಗಣಿಸಿದ್ದಲ್ಲಿ ಅದನ್ನು ಅರ್ಹತಾದಾಯಕ ಸೇವೆಯಿಂದ ಕಡಿತಗೊಳಿಸಬೇಕು.
* ರಾಜೀನಾಮೆ, ಸೇವೆಯಿಂದ ವಜಾ ಮತ್ತು ತೆಗೆದು ಹಾಕಿರುವ ಅವಧಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ
* ಮುನ್ಸಿಫ್ ಹುದ್ದೆಗೆ ನೇಮಕಗೊಂಡಾಗ 25 ವರ್ಷ ವಯಸ್ಸು ಮೀರಿದ್ದಾಗ ನೇಮಕವಾಗಿದ್ದರೆ, ಗರಿಷ್ಟ 5 ವರ್ಷವನ್ನು ಅರ್ಹತಾದಾಯಕ ಸೇವೆಗೆ ಸೇರಿಸಬೇಕು.
ಕುಟುಂಬ ಪಿಂಚಣಿ ಪಾವತಿ ಕಾರ್ಯವಿಧಾನ
* ಅವಳಿ ಮಕ್ಕಳಿಗೆ ಕುಟುಂಬ ಪಿಂಚಣಿ ಸಂದಾಯ ಮಾಡಬೇಕಾದಲ್ಲಿ ಅದನ್ನು ಸಮವಾಗಿ ಪ್ರತಿಯೊಂದು ಮಗುವಿಗೂ ಹಂಚಬೇಕು
* ಸರ್ಕಾರಿ ನೌಕರನು ಸರ್ಕಾರಿ ಸೇವೆಗೆ ಸೇರಿದ ತಕ್ಷಣ ತನ್ನ ಕುಟುಂಬದ ವಿವರಗಳನ್ನು ನಮೂನೆ -ಎನಲ್ಲಿ ನೀಡಬೇಕು
* ಸೇವೆಗೆ ಸೇರುವಾಗ ಕುಟುಂಬವಿಲ್ಲದಿದ್ದರೆ, ಮದುವೆಯಾದ ತಕ್ಷಣ ವಿವರಗಳ ಸಲ್ಲಿಸಬೇಕು
* ಮಾನಸಿಕ, ದೈಹಿಕ, ವಿಕಲತೆಯ ಮಕ್ಕಳಿದ್ದರೆ ಅದರ ವಿವರವನ್ನು ವೈದ್ಯಾಧಿಕಾರಿಗಳ ದೃಢೀಕರಣವನ್ನು ನಮೂನೆ-ಇ ನಲ್ಲಿ ಪಡೆದು ಸೇವಾವಹಿಗೆ ಲಗತ್ತಿಸಬೇಕು.
ನಿವೃತ್ತಿಯ ನಂತರ ವಿವಾಹ
* ನಿವೃತ್ತಿ ನಂತರ ಮದುವೆ ಮತ್ತು ಜನಿಸಿದ ಮಕ್ಕಳ ಕುರಿತು ನಮೂನೆ- ಎಫ್‌ನಲ್ಲಿ ಮಾಹಿತಿಯನ್ನು ಕಚೇರಿ ಮುಖ್ಯಸ್ಥರಿಗೆ ತಿಳಿಸಬೇಕು. ಇದರ ಜೊತೆ ಮದುವೆಯಾದ ಪ್ರಮಾಣ ಪತ್ರಗಳು ಜೋಡಿ ಭಾವ ಚಿತ್ರಗಳನ್ನು ಲಗತ್ತಿಸಿರಬೇಕು.
* ಕಚೇರಿ ಮುಖ್ಯಸ್ಥರು ಈ ಕುರಿತು ಮಾಹಾಲೇಖಪಾಲರಿಗೆ ಮಾಹಿತಿ ನೀಡಬೇಕು.
* ನಿವೃತ್ತಿ ಸಂದಾಯ ಆದೇಶದಲ್ಲಿ ತಿದ್ದುಪಡಿಗಳನ್ನು ಮಹಾಲೇಖಪಾಲರು ನಮೂದು ಮಾಡಿಕೊಂಡು ಹೊಸ ಸಂದಾಯ ಆದೇಶ ನೀಡುತ್ತಾರೆ.












Click it and Unblock the Notifications