ಅಂಚೆ ಇಲಾಖೆ ಅಪಘಾತ ವಿಮೆ: ಈ ಯೋಜನೆ ಬಗ್ಗೆ ತಿಳಿಯಿರಿ

ಬೆಂಗಳೂರು, ಜೂನ್ 19: ಭಾರತೀಯ ಅಂಚೆ ಇಲಾಖೆ ಕರ್ನಾಟಕ ವೃತ್ತ ಕೆಲವು ದಿನಗಳ ಹಿಂದೆ ಮೇಳವೊಂದನ್ನು ನಡೆಸಿತು. ಈ ಮೇಳದಲ್ಲಿ ಇಲಾಖೆಯ ಅಪಘಾತ ವಿಮೆ ಯೋಜನೆಗೆ ಅತ್ಯಧಿಕ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಈಗ ಈ ಯೋಜನೆ ಬಗ್ಗೆ ಹೆಚ್ಚು ಪ್ರಚಾರವನ್ನು ನಡೆಸಲು ಇಲಾಖೆ ತೀರ್ಮಾನಿಸಿದೆ.

ಅಂಚೆ ಇಲಾಖೆಯ 'ಗುಂಪು ಅಪಘಾತ ರಕ್ಷಣಾ ವಿಮೆ ಯೋಜನೆ' ಯೋಜನೆಗೆ ಮೇಳದಲ್ಲಿ ಸುಮಾರು 5 ಸಾವಿರ ಜನರು ನೋಂದಣಿ ಮಾಡಿಸಿದ್ದಾರೆ. ಅಲ್ಲದೇ ಪ್ರತಿನಿತ್ಯ ಅಂಚೆ ಕಛೇರಿಗಳಲ್ಲಿ ಈ ಯೋಜನೆಗೆ ನೋಂದಣಿ ಅಧಿಕವಾಗುತ್ತಲೇ ಇದೆ.

Know About Indian Post Personal Accident Scheme

ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಖಾತೆ ಹೊಂದಿರುವ ಯಾರು ಬೇಕಾದರೂ ಸಹ ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು. ಯೋಜನೆ ಸೇರಲು ಖಾತೆ ಹೊಂದಿರುವುದು ಕಡ್ಡಾಯ. ರಾಜ್ಯದ ಎಲ್ಲಾ ಅಂಚೆ ಕಚೇರಿಗಳಲ್ಲಿ ಈ ಯೋಜನೆಗೆ ನೋಂದಣಿ ಲಭ್ಯವಿದೆ. ಮನೆ ಬಾಗಿಲಿಗೆ ಬರುವ ಪೋಸ್ಟ್ ಮಾಸ್ಟರ್ ಮೂಲಕವೂ ನೋಂದಣಿ ಮಾಡಿಸಬಹುದು.

ಯೋಜನೆ ವಿವರಗಳು: ಅಂಚೆ ಇಲಾಖೆಯ ಈ ಅಪಘಾತ ವಿಮೆ 10 ಮತ್ತು 15 ಲಕ್ಷ ರೂ. ತನಕ ಲಭ್ಯವಿದೆ. 10 ಲಕ್ಷ ರೂ. ಯೋಜನೆಗೆ ವಾರ್ಷಿಕ ಪ್ರೀಮಿಯಂ ಮೊತ್ತ ಕನಿಷ್ಠ 520 ರೂ. ಮತ್ತು 15 ಲಕ್ಷಕ್ಕೆ ಕನಿಷ್ಠ 749 ರೂ. ಇದೆ.

ಈ ಯೋಜನೆಗೆ ಟಾಟಾ ಎಐಜಿ, ಆದಿತ್ಯ ಬಿರ್ಲಾ ಜೀವ ವಿಮೆ ಮತ್ತು ಬಜಾಜ್ ಫೈನಾನ್ಸ್ ಸಹ ಪಾಲುದಾರರು. ಕರ್ನಾಟಕದಲ್ಲಿ ಈ ಆರ್ಥಿಕ ವರ್ಷದಲ್ಲಿ ಇದುವರೆಗೂ 20,000 ಜನರು ಯೋಜನೆಗೆ ನೋಂದಣಿ ಮಾಡಿಸಿದ್ದಾರೆ.

ಯೋಜನೆ ವ್ಯಾಪ್ತಿಯಲ್ಲಿ ಕರ್ನಾಟಕದಲ್ಲಿ 4.5 ಲಕ್ಷ ಜನರಿದ್ದಾರೆ. ಇದುವರೆಗೂ 66 ಮರಣ ಪ್ರಕರಣಗಳಿಗೆ, 256 ವೈದ್ಯಕೀಯ ವೆಚ್ಚವನ್ನು ಯೋಜನೆಯಡಿ ಮರುಪಾವತಿ ಮಾಡಲಾಗಿದೆ. ದಿನದಿಂದ ದಿನಕ್ಕೆ ಈ ಯೋಜನೆಗೆ ನೋಂದಣಿಯಾಗುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

ಒಮ್ಮೆ ಈ ಯೋಜನೆಗೆ ನೋಂದಣಿ ಮಾಡಿಸಿದರೆ ಅವಧಿ ಮುಗಿದ ಬಳಿಕ ಸ್ವಯಂ ಚಾಲಿತವಾಗಿ ಪುನರ್ ನೋಂದಣಿಯಾಗುತ್ತದೆ. ಈ ಯೋಜನೆಗೆ ಜೂನ್ 12ರಂದು 6,531, ಜೂನ್ 14ರಂದು 12,186 ಜನರು ಸೇರ್ಪಡೆಗೊಂಡಿದ್ದಾರೆ.

ಕರ್ನಾಟಕದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಮಾತನಾಡಿ, "ಪ್ರತಿದಿನ ಸರಾಸರಿ 5 ಸಾವಿರ ಜನರು ವೈಯಕ್ತಿಕ ಅಪಘಾತ ಯೋಜನೆಯಡಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಈ ಯೋಜನೆ ರಾಜ್ಯದ ಎಲ್ಲಾ ಅಂಚೆ ಕಛೇರಿಗಳಲ್ಲೂ ಲಭ್ಯವಿದೆ. ಪೋಸ್ಟ್ ಮ್ಯಾನ್ ಮೂಲಕ ಮನೆ ಬಾಗಿಲಿಗೂ ಸಹ ಯೋಜನೆ ತಲುಪಿಸಲಾಗುತ್ತಿದೆ" ಎಂದು ಹೇಳಿದ್ದಾರೆ.

ಈ ಯೋಜನೆಯಡಿ ನೋಂದಣಿ ಮಾಡಿಕೊಂಡರೆ ಯಾವುದೇ ಅನಿರೀಕ್ಷಿತ ಘಟನೆ/ ಅಪಘಾತದಿಂದ ಇದು ಪಾಲಿಸಿದಾರರನ್ನು ಸುರಕ್ಷಿತವಾಗಿರಿಸುತ್ತದೆ ಮತ್ತು ಇಂತಹ ಸಂದರ್ಭದಲ್ಲಿ ಪಾಲಿಸಿದಾರರ ಕುಟುಂಬದವರ ಖರ್ಚು ಕಡಿಮೆ ಮಾಡಲು ಸಹಕಾರಿಯಾಗಿದೆ. ನಗದು ರಹಿತ ಚಿಕಿತ್ಸೆ, ಚಿಕಿತ್ಸೆ ಪಡೆದ ಬಳಿಕ ಕ್ಲೇಮ್ ಮಾಡುವ ಎರಡೂ ಆಯ್ಕೆಗಳು ಸಹ ಇದರಡಿ ಇದವೆ. ಭಾರತೀಯ ಅಂಚೆ ಇಲಾಖೆಯ ವಿವಿಧ ಯೋಜನೆಗಳ ಪೈಕಿ ಇದು ಬಹಳ ಜನಪ್ರಿಯ ಯೋಜನೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+