2024 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಕೆ ಎನ್ ರಾಜಣ್ಣ
ಹಾಸನ,ಡಿಸೆಂಬರ್ 20: ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ 2024 ರ ಲೋಕಸಭಾ ಚುನಾವಣೆ ಭರ್ಜರಿ ತಯಾರಿ ನಡೆಸುತ್ತಿದೆ. ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ ಸಚಿವರನ್ನ ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ.
ಹೌದು, ತುಮಕೂರು ಲೋಕಸಭಾ ಕ್ಷೇತ್ರದಿಂದ ಸಚಿವರನ್ನ ಕಣಕ್ಕಿಳಿಸುವ ಕುರಿತು ಜಿಲ್ಲಾ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದ್ದಾರೆ. ನಾನು ಈಗಾಗಲೇ ಹೇಳಿದ್ದೇನೆ, ಎಐಸಿಸಿಯವರು ನಿಲ್ಲು ಎಂದರೆ ನಿಲ್ಲುತ್ತೇನೆ ಎಂದು ಕೆ ಎನ್ ರಾಜಣ್ಣ ಹೇಳಿದ್ದಾರೆ. ನನ್ನ ಐವತ್ತು ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ತಯಾರಿ ಇಲ್ಲದೆ, ಜೇಬಿನಲ್ಲಿ ಹತ್ತು ರೂಪಾಯಿ ಇಲ್ಲದೆ ಚುನಾವಣೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಜಾತಿಗಣತಿಗೆ ಶಾಮನೂರು ಶಿವಶಂಕರಪ್ಪ ವಿರೋಧ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಪರ, ವಿರೋಧ ಇದ್ದದ್ದೆ, ಈ ಸಂಘರ್ಷ ನಿನ್ನೆ, ಮೊನ್ನೆಯಿಂದ ಬಂದಿದ್ದಲ್ಲ. ಜಾತಿಗಣತಿ ವೈಜ್ಞಾನಿಕವಾಗಿ ಆಗಿಲ್ಲ ಅಂತ ಹೇಳುವವರು ಇದ್ದಾರೆ, 200 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ ಕಾಂತರಾಜು ಅವರು ವರದಿ ತಯಾರಿ ಮಾಡಿದ್ದಾರೆ. ವರದಿನೇ ಇನ್ನೂ ಬಿಡುಗಡೆ ಆಗಿಲ್ಲ, ಒಬ್ಬರ ಕೈನಲ್ಲೂ ಇಲ್ಲ. ನೀವು ನೋಡಿದ್ರೆ ಹೇಳಿ, ನಾನಂತೂ ನೋಡಿಲ್ಲ. ವರದಿ ಬರುವುದಕ್ಕೆ ಮುಂಚೆನೇ ನಾವೇನೆ ವರದಿ ಹೀಗಾಗಿದೆ, ಹಾಗಾಗಿದೆ ಅಂತ ಯಾಕೆ ಊಹೆ ಮಾಡಬೇಕು ಎಂದು ಶಾಮನೂರು ಶಿವಶಂಕರಪ್ಪಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿರುಗೇಟು ನೀಡಿದರು.
ವರದಿ ಬಂದಾಕ್ಷಣಕ್ಕೆ ಅದು ಜಾರಿಯಾಗಬೇಕು ಅಂತ ತಿಳಿದುಕೊಳ್ಳಬೇಕಿಲ್ಲ. ವರದಿಯಲ್ಲಿರುವ ಅಂಶಗಳನ್ನು, ವಿವರಗಳನ್ನು ಎಲ್ಲರ ಕೈಗೂ ಕೊಡ್ತಾರೆ, ಸಾರ್ವಜನಿಕವಾಗಿ ಬಂದಾಗ ಎಲ್ಲ ಚರ್ಚೆ ಮಾಡೋಣ, ವಿಶ್ಲೇಷಣೆ ಮಾಡೋಣ ಅದರಲ್ಲಿ ಜನಪರವಾಗಿರುತ್ತೆ ಸರ್ಕಾರ ಒಪ್ಪುತ್ತೆ. ಯಾವುದು ಜನವಿರೋಧಿ ಇದೇ ಅದನ್ನು ಸರ್ಕಾರ ತಿರಸ್ಕಾರ ಮಾಡುತ್ತದೆ. ಮಾಹಿತಿ ಇಲ್ಲದೇನೆ ವಿಶ್ಲೇಷಣೆ ಮಾಡಬಾರದು. 200 ಕೋಟಿ ಹೆಚ್ಚು ಹಣ ಅದಕ್ಕೆ ವ್ಯಯವಾಗಿದೆ. ಸರ್ಕಾರ, ತೆರಿಗೆದಾರರ ಹಣ ಅದು ಆ ದೃಷ್ಟಿಯಲ್ಲಿ ಜಾತಿಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದರು.
ಸಾರ್ವಜನಿಕರು ಸರ್ಕಾರ ಎಲ್ಲಾ ಅಂಕಿಗಳನ್ನು ವಿಮರ್ಶೆ ಮಾಡೋಣ. ಆ ವಿಮರ್ಶೆಯಲ್ಲಿ ಜನಪರ ಇರುವುದು, ಜನ ಒಪ್ಪುತಕ್ಕಂತದ್ದು ಇರಬೇಕು, ಜನರ ಮೇಲೆ ಹೇರುವಂತಹ ಕೆಲಸವನ್ನು ನಮ್ಮ ಸರ್ಕಾರ ಮಾಡಲ್ಲ. ಜನಗಳು ಒಪ್ಪುತ್ತಾರೆ, ಜನಕ್ಕೆ ಅದರಿಂದ ಒಳ್ಳೆಯದಾಗುತ್ತೆ ಅಂತಹ ಅಂಶಗಳನ್ನು ಎಲ್ಲರೂ ಒಪ್ಪದ್ರೆ ಜಾರಿ ಮಾಡುತ್ತೇವೆ. ಇಲ್ಲದೆ ಇದ್ದರೆ ಬಹಳಷ್ಟು ವರದಿಗಳು ಧೂಳು ಹಿಡಿಯುತ್ತಿವೆ ಅದರಲ್ಲಿ ಇದು ಸೇರಿಕೊಳ್ಳುತ್ತದೆ
ಸಂಸದರ ಅಮಾನತು ವಿಚಾರವಾಗಿ ಮಾತನಾಡಿದ ಅವರು, ಅದು ಜನವಿರೋಧಿ, ಲೋಕಸಭೆ, ರಾಜ್ಯಸಭೆ, ವಿಧಾನಭೆ, ವಿಧಾನಪರಿಷತ್ ಇರಲಿ. ಸಂವಿಧಾನದಡಿ ಕಾಯ್ದೆಗಳನ್ನು ರಚಿಸುವುದು ಅವರ ಕೆಲಸ, ಮಾಡಿದಂತಹ ಕಾಯ್ದೆ ಸಂವಿಧಾನ ಬದ್ಧವಾಗಿ ಇದೆಯೋ, ಇಲ್ಲವೋ ಎನ್ನುವುದನ್ನು ನ್ಯಾಯಾಲಯಗಳು ವಿಮರ್ಶೆ ಮಾಡತ್ತವೆ. ಆದರೆ ಕಾಯ್ದೆ ರಚಿಸುವುದು ಲೋಕಸಭಾ, ರಾಜ್ಯಸಭಾ, ವಿಧಾನಸಭಾ ಸದಸ್ಯರ ಪ್ರಮುಖ ಕೆಲಸ ಆ ಕಾನೂನುಗಳನ್ನು ರಚಿಸುವ ಸಂದರ್ಭದಲ್ಲಿ ಇವರನ್ನೆಲ್ಲಾ ಸಸ್ಪೆಂಡ್ ಮಾಡಿ ಹೊರಗಡೆ ಇರಿಸಿ ಕಾಯ್ದೆಗಳನ್ನು ರಚನೆ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನ. ಇದಕ್ಕಿಂತ ಬೇರೆ ಅವಮಾನ ಇಲ್ಲ ಎಂದು ಹೇಳಿದರು.
ಸಂಸದ ಪ್ರಜ್ವಲ್‌ರೇವಣ್ಣ ಪ್ರಕರಣ ವಿಚಾರವಾಗಿ ಮಾತನಾಡಿ, ಅದರ ಬಗ್ಗೆ ಈಗ ನಾನು ಎಸ್ಪಿ ಅವರ ಹತ್ತಿರ ಮಾತನಾಡುತ್ತೇನೆ. ಲೋಕಸಭಾ ಚುನಾವಣೆಗೆ ಹಾಸನದಿಂದ ಅಭ್ಯರ್ಥಿ ಆಯ್ಕೆ ಮಾಡುವಂತೆ ಪಕ್ಷದ ಮುಖಂಡರ ಒತ್ತಾಯ ವಿಚಾರವಾಗಿ ಉತ್ತರಿಸಿ, ಮಾಡೋಣ, ಈಗ ಯಾವ ಪಾರ್ಟಿಯವರು ಮಾಡವರೇ ಎಲ್ಲರಿಗಿಂತ ಮುಂಚೆ ನಾವೇ ಘೋಷಣೆ ಮಾಡುವುದು. ನಮ್ಮದು ರಾಷ್ಟ್ರೀಯ ಪಕ್ಷ, ನಮ್ಮದು ರಾಜ್ಯದ ಯಾವುದೋ ರೀಜಿನಲ್ ಪಾರ್ಟಿ ಅಲ್ಲ. ರಾಷ್ಟ್ರೀಯ ಪಕ್ಷದಲ್ಲಿ ಕೆಲವು ನಿಯಮ, ರೀತಿ, ರಿವಾಜುಗಳು ಇರುತ್ತವೆ ಎಂದು ರಾಜಣ್ಣ ಅವರು ಹೇಳಿದರು.












Click it and Unblock the Notifications