ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಲೀಟರ್ ನಂದಿನಿ ಹಾಲಿಗೆ 100 ಮಿಲೀ ಉಚಿತ?

By Nayana
|
Google Oneindia Kannada News

Recommended Video

ಒಂದು ಲೀಟರ್ ನಂದಿನಿ ಹಾಲಿಗೆ 100 ಮಿಲೀ ಉಚಿತ? | Oneindia Kannada

ಬೆಂಗಳೂರು, ಜೂನ್ 6: ಕರ್ನಾಟಕ ಹಾಲು ಮಹಾಮಂಡಳಿಯು ಉತ್ಪಾದಕರಿಂದ ಕೊಳ್ಳುವ ಹಾಲಿನ ಬೆಲೆಯನ್ನು 2 ರೂ. ಕಡಿತಗೊಳಿಸಿತ್ತು. ಇದರಿಂದ ಹಾಲು ಉತ್ಪಾದಕರು ಹಾಗೂ ಗ್ರಾಹಕರು ವಿರೋಧ ವ್ಯಕ್ತಪಡಿಸಿದ್ದರು.

ಗ್ರಾಹಕರಿಗೆ ಪ್ರತಿ ಲೀಟರ್ ಗೆ 100 ಮಿಲಿಲೀಟರ್ ಹಾಲನ್ನು ಉಚಿತವಾಗಿ ಕೊಡುವ ಪ್ರಸ್ತಾವನೆಯನ್ನು ಕೆಎಂಎಫ್‌ ಸರ್ಕಾರಕ್ಕೆ ಸಲ್ಲಿಸಿದೆ.ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ರಾಕೇಶ್‌ ಸಿಂಗ್ ಅವರು ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಮಳೆಗಾಲದಲ್ಲಿ ಹಸಿರು ಮೇವು ಹೆಚ್ಚಾಗಿ ಸಿಗುವುದರಿಂದ ಹಾಲು ಉತ್ಪಾದನೆಯು ಹೆಚ್ಚಾಗಿದೆ.

ಹಾಲು ಉತ್ಪಾದಕರಿಗೆ ಕೆಎಂಎಫ್‌ ಶಾಕ್: 2 ರೂ. ಕಡಿತ ಹಾಲು ಉತ್ಪಾದಕರಿಗೆ ಕೆಎಂಎಫ್‌ ಶಾಕ್: 2 ರೂ. ಕಡಿತ

ಮೇ ತಿಂಗಳಲ್ಲಿ ಪ್ರತಿ ದಿನ 81 ಲಕ್ಷ ಲೀಟರ್‌ಗೂ ಅಧಿಕ ಹಾಲು ಸಂಗ್ರಹವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೆಟ್‌ನಲ್ಲಿ ಹೆಚ್ಚುವರಿಯಾಗಿ 100 ಎಂಎಲ್ ಹಾಲನ್ನು ಉಚಿತವಾಗಿ ಗ್ರಾಹಕರಿಗೆ ನೀಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

KMF proposes 100 ml free milk to costumers

ಈ ಕುರಿತು ಕೆಎಂಎಫ್‌ ಸರ್ಕಾರದೊಂದಿಗೆ ನಿರಂತರ ಮಾತುಕತೆಯಲ್ಲಿ ತೊಡಗಿದ್ದು, ಶೀಘ್ರವೇ ಸಕಾರಾತ್ಮಕ ಸ್ಪಂದನೆ ಸಿಗುವ ನಿರೀಕ್ಷೆ ಇದೆ. ಇದರೊಂದಿಗೆ ಶಾಲಾ ಮಕ್ಕಳಿಗೆ ನೀಡುತ್ತಿರುವ ಹಾಲಿನ ಪ್ರಮಾಣದಲ್ಲೂಮ ಹೆಚ್ಚಳ ಮತ್ತು ಹಾಲು ವಿತರಕರಿಗೆ ಕಮಿಷನ್ ಹೆಚ್ಚು ಮಾಡುವ ಚಿಂತನೆಯನ್ನೂ ನಡೆಸಲಾಗುತ್ತಿದೆ ಎಂದು ರಾಕೇಶ್‌ ಸಿಂಗ್ ತಿಳಿಸಿದ್ದಾರೆ.

English summary
Managing the access production of the milk in the state,Karnataka Milk Federation had submitted a proposal to state government of 100 ml free milk distribution with every one liter of milk sale.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X